ಮಡಿಕೇರಿ, ಜೂ. ೧೭: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಕ್ಷೀಣವಾಗಿತ್ತು. ಆದರೆ ಪ್ರಸಕ್ತ ವರ್ಷದ ಚಿತ್ರಣ ಬದಲಾಗಿದ್ದು, ಈ ಹಿಂದಿನ ವರ್ಷಗಳ ಮಾದರಿಯಲ್ಲಿ ವಾಡಿಕೆಯಂತೆ ಆರಂಭದ ದಿನಗಳಿಂದಲೇ ಮುಂಗಾರು ಮಳೆ ಸುರಿಯುತ್ತಿರುವದು ಕಂಡು ಬರುತ್ತಿದೆ.

ಜೂ. ೮ ರಿಂದ ಮೃಗಶಿರ ಮಳೆ ನಕ್ಷತ್ರ ಆರಂಭಗೊAಡಿದ್ದು, ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಗಾಳಿ - ಮಳೆಯಾಗುತ್ತಿದೆ. ಈ ಮೂಲಕ ಪ್ರಸಕ್ತ ವರ್ಷದ ಮುಂಗಾರಿಗೆ ‘ಮೃಗಶಿರ’ ಮೂಲಕ ಮುಹೂರ್ತ ಶುರುವಾದಂತಿದೆ. ತಾ. ೧೨ ರಂದು ಜಿಲ್ಲೆಯಲ್ಲಿ ಮಳೆ ತುಸು ಹೆಚ್ಚಾಗಿ ಕಂಡು ಬಂದಿದ್ದು, ಇದು ದಿನ ಕಳೆದಂತೆ ರಭÀಸಗೊಳ್ಳುತ್ತಿದೆ. ಪ್ರಸ್ತುತ ಇಡೀ ಜಿಲ್ಲೆ ಮಳೆಗಾಲದ ನೈಜ ಚಿತ್ರಣವನ್ನು ಕಾಣುತ್ತಿದ್ದು, ಅಲ್ಲಲ್ಲಿ ಮರಗಳು, ರೆಂಬೆಗಳು ಬೀಳುವದು, ವಿದ್ಯುತ್‌ಕಂಬ, ಟ್ರಾನ್ಸ್ಫಾರ್ಮರ್‌ಗಳು ಧರೆಗುರುಳಿ ವಿದ್ಯುತ್ ವ್ಯತ್ಯಯವಾಗುತ್ತಿರುವದು, ನದಿ - ತೊರೆ - ತೋಡುಗಳಲ್ಲಿ ನೀರಿನ ಹರಿವಿನ ಮಟ್ಟದಲ್ಲಿ ಏರಿಕೆ ಸೇರಿದಂತೆ ಮನೆಗಳಿಗೆ ಹಾನಿ, ತಡೆಗೋಡೆ ಕುಸಿತದಂತಹ ಪ್ರಕರಣಗಳು ವರದಿಯಾಗುತ್ತಿವೆ. ಹಲವೆಡೆ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದ್ದು, ಇದನ್ನು ಸಂಬAಧಿಸಿದ ಇಲಾಖೆಗಳ ಮೂಲಕ ಸರಿಪಡಿಸುವ ಕೆಲಸ ನಡೆಯುತ್ತಿದ್ದು, ಮುಂಗಾರಿನ

(ಮೊದಲ ಪುಟದಿಂದ) ಅಬ್ಬರ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವಂತೆ ಕಂಡು ಬರುತ್ತಿದೆ.

ಮಡಿಕೇರಿ ತಾಲೂಕಿನಲ್ಲಿ ಅಧಿಕ ಮಳೆ

ಕಳೆದ ೨೪ ಗಂಟೆಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೩.೭೪ ಇಂಚು ಮಳೆಯಾಗಿದೆ. ವೀರಾಜಪೇಟೆಯಲ್ಲಿ ೨.೫೪ ಹಾಗೂ ಸೋಮವಾರಪೇಟೆಯಲ್ಲಿ ೧.೬೨ ಇಂಚು ಮಳೆ ಬಿದ್ದಿದ್ದರೆ ಜಿಲ್ಲಾ ಸರಾಸರಿ ೨.೬೩ ಇಂಚಿನಷ್ಟಾಗಿದೆ.

ಹೋಬಳಿವಾರು ವಿವರ

ಕಳೆದ ೨೪ ಗಂಟೆಯಲ್ಲಿ ಭಾಗಮಂಡಲ ಹೋಬಳಿಗೆ ೪.೬೫ ಇಂಚು ಭಾರೀ ಮಳೆಯಾಗಿದೆ. ಸಂಪಾಜೆ ೩.೪೨, ನಾಪೋಕ್ಲು ೩.೬೩ ಹಾಗೂ ಮಡಿಕೇರಿ ಕ.ಸ.ಬಾ. ೩.೨೫ ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಕ.ಸ.ಬಾ.ದಲ್ಲಿ ೨.೮೪, ಹುದಿಕೇರಿ ೨.೩೬, ಶ್ರೀಮಂಗಲ ೩.೮೨, ಪೊನ್ನಂಪೇಟೆ ೩.೬೮, ಅಮ್ಮತ್ತಿ ೧.೨೦ ಹಾಗೂ ಬಾಳೆಲೆಯಲ್ಲಿ ೧.೩೮ ಇಂಚು ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಸೋಮವಾರಪೇಟೆ ಕ.ಸ.ಬಾ. ೧.೪೫, ಶನಿವಾರಸಂತೆ ೧.೩೩, ಶಾಂತಳ್ಳಿ ೩.೩೬, ಕೊಡ್ಲಿಪೇಟೆ ೧.೮೦, ಕುಶಾಲನಗರ ೦.೩೨ ಹಾಗೂ ಸುಂಟಿಕೊಪ್ಪದಲ್ಲಿ ೧.೪೪ ಇಂಚು ಮಳೆ ದಾಖಲಾಗಿದೆ. ತಾ. ೧೭ರ ಗುರುವಾರದಂದೂ ಮಳೆ - ಗಾಳಿಯ ತೀವ್ರತೆ ಜಿಲ್ಲೆಯಾದ್ಯಂತ ಮುಂದುವರಿದಿತ್ತು.

ಕೆಲವೆಡೆ ಹಾನಿ

ಜಿಲ್ಲಾಡಳಿತದ ಕಂಟ್ರೋಲ್ ರೂಂ ಮಾಹಿತಿಯಂತೆ ತಾ. ೧೬ ರಂದು ಸುರಿದ ಗಾಳಿ - ಮಳೆಗೆ ಶಾಂತಳ್ಳಿ ಹೋಬಳಿಯ ತಲ್ತಾರೆ ಶೆಟ್ಟಳ್ಳಿ ಗ್ರಾಮದ ನಿವಾಸಿ ಎಸ್.ಎಸ್. ಸುಬ್ಬಯ್ಯ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ತಾ. ೧೫ ರಂದು ಸುಂಟಿಕೊಪ್ಪ ಹೋಬಳಿಯ ಎನ್.ಸಿ. ಪೂವಯ್ಯ ಅವರ ಮನೆ ಮೇಲ್ಚಾವಣಿ ಹಾನಿಯಾಗಿದೆ. ಇದೇ ದಿನ ಸೋಮವಾರಪೇಟೆ ತಾಲೂಕಿನ ತಲ್ತಾರೆ ಶೆಟ್ಟಳ್ಳಿಯ ಗ್ರಾಮದ ನಿವಾಸಿಯಾದ ಪೂವಯ್ಯ ಅವರ ಮನೆಗೆ ಮರ ಬಿದ್ದು ಮೇಲ್ಚಾವಣಿ ಹಾನಿಯಾಗಿದೆ.

ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ನಿವಾಸಿ ಪಾರ್ವತಿ ಎಂಬವರ ಮನೆ ಜಖಂಗೊAಡಿದ್ದು, ಶೇ. ೭೦ ರಷ್ಟು ಹಾನಿಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಹಾನಿಯ ಕುರಿತು ಜಿಲ್ಲಾಡಳಿತದ ಕಂಟ್ರೋಲ್‌ರೂAಗೆ ಯಾವದೇ ದೂರು ಬಂದಿಲ್ಲ.

ಜಿಲ್ಲೆಯಲ್ಲಿನ ಇತರ ಚಿತ್ರಣ

ಪೊನ್ನಂಪೇಟೆ: ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಕಳೆದ ೬ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಯ ಆರ್ಭಟಕ್ಕೆ ಪೊನ್ನಂಪೇಟೆ ಕೃಷ್ಣ ಕಾಲೋನಿಯ ನಿವಾಸಿ ದಿ. ಕಾಳಯ್ಯ ಅವರ ಪತ್ನಿ ಹೆಚ್. ಪುಟ್ಟೀರಿ ಎಂಬುವವರ ಮನೆಯ ಗೋಡೆ ಶಿಥಿಲಗೊಂಡಿದ್ದು, ಮನೆಯ ಹೆಂಚಿನ ಮಾಳಿಗೆ ಕುಸಿದು ಬಿದ್ದು ಹೆಂಚುಗಳು ಹೊಡೆದು ಹೋಗಿವೆ. ಇದರಿಂದ ಮನೆಯ ಸಾಮಗ್ರಿಗಳಿಗೆ ಹಾನಿಯಾಗಿವೆ. ಅದೃಷ್ಟವಶಾತ್ ಮನೆಯ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ. ಕುಟುಂಬದವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಮನೆ ಸರಿಪಡಿಸಲು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ವರುಣನ ಆರ್ಭಟ ಜೋರಾಗಿದ್ದು ನಿರಂತರವಾಗಿ ಮಳೆಯಾಗುತಿದ್ದು ಲಕ್ಷö್ಮಣತೀರ್ಥ ನದಿಯ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿಟ್ಟೂರು ಹಳೆ ಸೇತುವೆ ಮಟ್ಟಕ್ಕೆ ನೀರು ಬಂದಿದೆ. ಗಾಳಿಯ ರಭಸ ವಿಪರೀತವಾಗಿದ್ದು, ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಚೆಸ್ಕಾಂ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ೨೪ ಗಂಟೆ ಅವಧಿಯಲ್ಲಿ ಪೊನ್ನಂಪೇಟೆಯಲ್ಲಿ ೪ ಇಂಚು, ಬೇಗೂರಿನಲ್ಲಿ ೨.೮೦ ಇಂಚು, ಮುಗುಟಗೇರಿಯಲ್ಲಿ ೨.೫೫, ಬಿರುನಾಣಿಯಲ್ಲಿ ೩.೨೫ ಇಂಚು ಮಳೆಯಾಗಿದೆ. ಕಳೆದ ಒಂದು ವಾರದಿಂದ ಬಿರುನಾಣಿ ಗ್ರಾಮ ಪಂಚಾಯಿತಿಯ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಾಳೆಲೆ, ಕಾನೂರು, ಕುಟ್ಟ, ನಾಲ್ಕೇರಿ, ಬಿ. ಶೆಟ್ಟಿಗೇರಿ, ಶ್ರೀಮಂಗಲ, ಬಲ್ಯಮಂಡೂರು, ಕೋತೂರು, ನಿಟ್ಟೂರು, ಕಾರ್ಮಾಡು, ಪೊನ್ನಪ್ಪಸಂತೆ, ಹುದಿಕೇರಿ, ಟಿ. ಶೆಟ್ಟಿಗೇರಿ, ಕುಂದ ಸೇರಿದಂತೆ ದಕ್ಷಿಣ ಕೊಡಗಿನ ಗ್ರಾಮಗಳಲ್ಲಿ ಗಾಳಿ - ಮಳೆಯ ರಭಸ ಜೋರಾಗಿದೆ.

ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ವಾತಾವರಣ ಶೀತಮಯಗೊಂಡಿದೆ. ಮಳೆಯೊಂದಿಗೆ ಗಾಳಿಯೂ ಬೀಸುತ್ತಿರುವುದರಿಂದ ಮರಗಳು ಕೆಳಕ್ಕುರುಳುತ್ತಿದ್ದು, ಹಾನಿಯ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಕಳೆದ ಐದಾರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬಿಟ್ಟೂ ಬಿಡದೇ ಸುರಿಯುತ್ತಿರುವ ವರ್ಷಾಧಾರೆಗೆ ಹೊಳೆ ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕೃಷಿ ಚಟುವಟಿಕೆಯೂ ಬಿರುಸುಪಡೆಯುತ್ತಿದ್ದು, ರೈತಾಪಿ ವರ್ಗ ಗದ್ದೆ ಕೆಲಸದಲ್ಲಿ ಮಗ್ನವಾಗಿದೆ. ಮಳೆಯೊಂದಿಗೆ ಜೋರಾದ ಗಾಳಿಯೂ ಬೀಸುತ್ತಿರುವ ಹಿನ್ನೆಲೆ ಮರಗಳು ನೆಲಕ್ಕುರುಳಿ ಅನಾಹುತ ಸಂಭವಿಸುತ್ತಲೇ ಇವೆ. ಕಾಫಿ ತೋಟಗಳಲ್ಲಿ ನೂರಾರು ಮರಗಳು ಧರಾಶಾಹಿಯಾಗಿವೆ. ಮನೆಗಳ ಮೇಲೆ ಮರ ಬೀಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಮಳೆಯಿಂದಾಗಿ ವಾತಾವರಣವೂ ಶೀತಮಯವಾಗಿದೆ. ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದ ಕಮಲ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದು, ಛಾವಣಿಯ ಶೀಟ್‌ಗಳು ಜಖಂಗೊAಡಿವೆ. ಗರಗಂದೂರು ಗ್ರಾಮದ ಮಣಿ ಎಂಬವರಿಗೆ ಸೇರಿದ ವಾಸದ ಮನೆಯ ಹಿಂಬದಿಯ ಗೋಡೆ ಅತೀ ಶೀತದಿಂದ ನಿನ್ನೆ ರಾತ್ರಿ ಕುಸಿದುಬಿದ್ದಿದ್ದು, ಮುಂಬದಿಯ ಗೋಡೆಯೂ ಬಿರುಕುಬಿಟ್ಟಿದೆ. ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಹರದೂರು ವೃತ್ತದ ಗ್ರಾಮ ಲೆಕ್ಕಿಗರಾದ ದೀಪಿಕ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಡ್ಲಿಪೇಟೆ ಹೋಬಳಿಯ ಶಾಂತಪುರ ಗ್ರಾಮದ ಕೆಂಚಮ್ಮ ಅವರ ಮನೆಯ ಗೋಡೆ ಸಹಿತ ಛಾವಣಿ ಕುಸಿದು ಬಿದ್ದಿದ್ದು, ಶೇ. ೭೫ರಷ್ಟು ಹಾನಿಯಾಗಿದೆ. ಕಂದಾಯ ಪರಿವೀಕ್ಷಕ ಮನುಕುಮಾರ್, ಗ್ರಾಮ ಲೆಕ್ಕಿಗರಾದ ಪ್ರಕೃತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಣ್ಣೀರುಹಳ್ಳ ಗ್ರಾಮದ ರಾಜೇಶ್ ಅವರ ಮನೆಯ ಗೋಡೆ ಅತೀ ಶೀತದಿಂದ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಕಂದಾಯ ಇಲಾಖೆಯ ಶ್ವೇತ, ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಯಲ್ಲಿ ೩೬.೪ ಮಿ.ಮೀ., ಶಾಂತಳ್ಳಿಯಲ್ಲಿ ೮೪, ಕೊಡ್ಲಿಪೇಟೆ ೪೫, ಶನಿವಾರಸಂತೆ ೩೩.೪, ಸುಂಟಿಕೊಪ್ಪ ೩೬ ಕುಶಾಲನಗರ ವ್ಯಾಪ್ತಿಯಲ್ಲಿ ೮.೨ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

ತೋಳೂರುಶೆಟ್ಟಳ್ಳಿ ಗ್ರಾಮದ ಕಮಲ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದು, ಛಾವಣಿಯ ಶೀಟ್‌ಗಳು ಜಖಂಗೊAಡಿವೆ. ಗರಗಂದೂರು ಗ್ರಾಮದ ಮಣಿ ಎಂಬವರಿಗೆ ಸೇರಿದ ವಾಸದ ಮನೆಯ ಹಿಂಬದಿಯ ಗೋಡೆ ಅತೀ ಶೀತದಿಂದ ನಿನ್ನೆ ರಾತ್ರಿ ಕುಸಿದುಬಿದ್ದಿದ್ದು, ಮುಂಬದಿಯ ಗೋಡೆಯೂ ಬಿರುಕುಬಿಟ್ಟಿದೆ. ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಹರದೂರು ವೃತ್ತದ ಗ್ರಾಮ ಲೆಕ್ಕಿಗರಾದ ದೀಪಿಕ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಡ್ಲಿಪೇಟೆ ಹೋಬಳಿಯ ಶಾಂತಪುರ ಗ್ರಾಮದ ಕೆಂಚಮ್ಮ ಅವರ ಮನೆಯ ಗೋಡೆ ಸಹಿತ ಛಾವಣಿ ಕುಸಿದು ಬಿದ್ದಿದ್ದು, ಶೇ. ೭೫ರಷ್ಟು ಹಾನಿಯಾಗಿದೆ. ಕಂದಾಯ ಪರಿವೀಕ್ಷಕ ಮನುಕುಮಾರ್, ಗ್ರಾಮ ಲೆಕ್ಕಿಗರಾದ ಪ್ರಕೃತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಣ್ಣೀರುಹಳ್ಳ ಗ್ರಾಮದ ರಾಜೇಶ್ ಅವರ ಮನೆಯ ಗೋಡೆ ಅತೀ ಶೀತದಿಂದ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಕಂದಾಯ ಇಲಾಖೆಯ ಶ್ವೇತ, ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಯಲ್ಲಿ ೩೬.೪ ಮಿ.ಮೀ., ಶಾಂತಳ್ಳಿಯಲ್ಲಿ ೮೪, ಕೊಡ್ಲಿಪೇಟೆ ೪೫, ಶನಿವಾರಸಂತೆ ೩೩.೪, ಸುಂಟಿಕೊಪ್ಪ ೩೬ ಕುಶಾಲನಗರ ವ್ಯಾಪ್ತಿಯಲ್ಲಿ ೮.೨ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

ಜಲಾವೃತಗೊಳ್ಳಲಿವೆ ಎಂದು ಮಾಹಿತಿ ನೀಡಿದರು. ಕುಶಾಲನಗರ ವ್ಯಾಪ್ತಿಯಲ್ಲಿ ಕಳೆದ ೨ ವರ್ಷಗಳಿಂದ ಕಾವೇರಿ ನದಿ ಹೂಳು ತೆರವು ಮಾಡಿದ ಕಾರಣ ನೀರಿನ ಹರಿವಿನಲ್ಲಿ ರಭಸ ಉಂಟಾಗಿದ್ದು, ಇದರಿಂದ ಪ್ರವಾಹ ತಪ್ಪಿಸಿದಂತಾಗಿದೆ ಎಂದ ತಹಶೀಲ್ದಾರ್ ಗೋವಿಂದರಾಜ್, ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಚಿತ್ರಗಳನ್ನು ಹಾಕಿ ಪ್ರವಾಹ ಭೀತಿ ಸೃಷ್ಟಿಸಿ ತಪ್ಪು ಮಾಹಿತಿ ನೀಡುವುದರೊಂದಿಗೆ ಜನರಲ್ಲಿ ಭಯಭೀತಿ ಉಂಟು ಮಾಡುತ್ತಿರುವುದು ಕಂಡುಬAದಿದೆ. ಅಂತವರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಇದುವರೆಗೆ ಯಾವುದೇ ರೀತಿಯ ಅಪಾಯ ಅನಾಹುತಗಳು ಸಂಭವಿಸಿಲ್ಲ ಎಂದು ತಿಳಿಸಿದ ತಹಶೀಲ್ದಾರ್, ತಗ್ಗು ಪ್ರದೇಶದ ನಿವಾಸಿಗಳಿಗೆ ಈಗಾಗಲೇ ಸ್ಥಳೀಯ ಆಡಳಿತಗಳಿಂದ ನೋಟೀಸ್ ನೀಡಲಾಗಿದ್ದು, ಪ್ರವಾಹ ಬರುವ ಮುನ್ನ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಬದಲಿ ವ್ಯವಸ್ಥೆ ಇಲ್ಲದ ಜನರಿಗೆ ಕುಶಾಲನಗರ ವ್ಯಾಪ್ತಿಯಲ್ಲಿ ಕೆಲವು ವಸತಿ ಗೃಹಗಳನ್ನು ಕಾಳಜಿ ಕೇಂದ್ರವಾಗಿ ಪರಿವರ್ತಿಸಿ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭ ಕಂದಾಯ ಇಲಾಖೆಯ ಅಧಿಕಾರಿಗಳಾದ, ಮಧುಸೂದನ್, ಸಂತೋಷ್ , ಗುರುದರ್ಶನ್, ಲೋಕೇಶ್ ಮತ್ತಿತರ ಸಿಬ್ಬಂದಿಗಳು ಇದ್ದರು.

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ವರುಣ ಆರ್ಭಟ ಜೋರಾಗಿತ್ತು. ಮುಂಜಾನೆಯಿAದಲೇ ವರುಣ ಬಿಡುವು ನೀಡಲಿಲ್ಲ. ಇದರಿಂದಾಗಿ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಹರಿಯುವ ಕೀರೆಹೊಳೆಯ ನೀರಿನ ಮೇಲ್ಮಟ್ಟ ಹೆಚ್ಚಾಗಿದೆ. ಒಮ್ಮೆಲೇ ಗಾಳಿ ಸಹಿತ ಮಳೆ ಸುರಿಯುತ್ತಿರುವುದರಿಂದ ವಾಣಿಜ್ಯ ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಮಳೆಯ ನಡುವೆ ಚೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ನಗರದ ಬೈಪಾಸ್ ಕೈತೋಡಿನಲ್ಲಿ ಹರಿಯುವ ನೀರಿನ ಮಟ್ಟ ಹೆಚ್ಚಾಗಿದೆ. ಮೋಡ ಮುಸುಕಿನ ವಾತಾವರಣವಿದ್ದು ಎಡಬಿಡದೆ ಮಳೆಯು ಸುರಿಯುತ್ತಿದೆ.

ನಾಪೋಕ್ಲು : ಹಳೆತಾಲೂಕಿನಿಂದ ಮೂಟೇರಿ ದೇವಾಲಯಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಚರಂಡಿ ಇಲ್ಲದೆ ಮಳೆಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಇದನ್ನು ಮನ ಗಂಡ ನಾಪೋಕ್ಲು ಗ್ರಾಮ ಪಂಚಾಯಿತಿ ನೀರು ಸರಾಗವಾಗಿ ಹರಿಯುವಂತೆ ಜೆ.ಸಿ.ಬಿ ಯಂತ್ರದ ಮುಖಾಂತರ ಚರಂಡಿಯನ್ನು ದುರಸ್ತಿ ಪಡಿಸಿದರು. ಗುಡ್ಡೆಹೊಸೂರು: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ತೀರದಲ್ಲಿರುವ ನೂರಾರು ಪಂಪ್‌ಹೌಸ್‌ಗಳು ಮುಳುಗುವ ಭೀತಿಯಲ್ಲಿವೆ. ನೀರಿನ ಮಟ್ಟದಲ್ಲಿ ಬಹಳ ಏರಿಕೆಯಾಗಿದ್ದು, ಮೋಟಾರು ಪಂಪ್‌ನ ಮಾಲೀಕರಾದ ಅನೇಕ ರೈತರು ಆತಂಕದಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾವೇರಿ ನದಿ ಪ್ರವಾಹದಿಂದಾಗಿ ಬಹಳಷ್ಟು ರೈತರು ತಮ್ಮ ಮೋಟಾರ್ ಪಂಪ್‌ಗಳನ್ನು ಕಳೆದುಕೊಂಡಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ ಸಾಧಾರಣ ಮಳೆಯಾಗುತ್ತಿದೆಯಾದರೂ ಕಾವೇರಿ ನೀರಿನ ಮಟ್ಟ ಏರಿಕೆಯಿಂದಾಗಿ ಪಂಪ್‌ಹೌಸ್‌ಗಳು ಮುಳುಗುವ ಎಲ್ಲಾ ಸಾಧ್ಯತೆಗಳಿವೆ.