ಮಡಿಕೇರಿ, ಜೂ. ೧೭: ಕೋವಿಡ್ ಎರಡನೆಯ ಅಲೆಯ ನಂತರ ಕೆಲ ತಿಂಗಳಿನಲ್ಲಿ ಮೂರನೇ ಅಲೆ ಪ್ರಾರಂಭವಾಗುವ ಬಗ್ಗೆ ತಜ್ಞರು ಮಾಹಿತಿ ನೀಡಿದ್ದು, ಈ ಬಗ್ಗೆ ಜಿಲ್ಲಾಡಳಿತದಿಂದ ಸೂಕ್ತ ತಯಾರಿ ಅಗತ್ಯವಿದೆ. ಕೋವಿಡ್ ಮೂರನೇ ಅಲೆಯು ಮಕ್ಕಳನ್ನೇ ಹೆಚ್ಚು ಬಾಧಿಸುತ್ತದೆ ಎಂದು ಕೂಡ ರಾಷ್ಟಿçÃಯ ಮಟ್ಟದ ತಜ್ಞರ ಸಮಿತಿ ಅಭಿಪ್ರಾಯಿಸಿದೆ.

ಜಿಲ್ಲೆಯಲ್ಲಿ ಕೊರೊನಾಪೀಡಿತ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ವೆಂಟಿಲೇರ‍್ಸ್ನ ಕೊರತೆ ಇರುವುದು ಗಮನಕ್ಕೆ ಬಂದಿದೆ. ಜಿಲ್ಲೆಯಲ್ಲಿ ಮಕ್ಕಳಿಗೆ ಸೂಕ್ತವಿರುವ ಕೇವಲ ೭ ವೆಂಟಿಲೇರ‍್ಸ್ಗಳಿದ್ದು, ಇದನ್ನು ೪೦ ಕ್ಕೇರಿಸುವ ಪ್ರಯತ್ನವಾಗುತ್ತಿರುವುದಾಗಿ ಕೊಡಗು ವೈದ್ಯಕೀಯ ಕಾಲೇಜಿನ ಡೀನ್ ಡಾ. ಕಾರ್ಯಪ್ಪ ಅವರು ಮಾಹಿತಿ ನೀಡಿದ್ದಾರೆ. ವಯಸ್ಕರಿಗೆ ಬಳಸುವ

(ಮೊದಲ ಪುಟದಿಂದ) ಕೆಲವೊಂದು ವೆಂಟಿಲೇಟರ್‌ಗಳನ್ನು ಮಕ್ಕಳಿಗೂ ಬಳಸಬಹುದಾಗಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗಿರುವುದಾಗಿ ಅವರು ಹೇಳಿದ್ದಾರೆ. ಮೂರನೇ ಅಲೆಯ ಸಿದ್ಧತೆ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು, ಈ ಅಲೆಯನ್ನು ಎದುರಿಸಲು ರಾಜ್ಯದಿಂದ ಇನ್ನಷ್ಟೇ ಮಾರ್ಗಸೂಚಿ ಬಿಡುಗಡೆಯಾಗಬೇಕಿದೆ ಎಂದಿದ್ದಾರೆ.

ತಾ. ೧೮ ರಂದು (ಇಂದು) ರಾಜ್ಯ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಅಧಿಕಾರಿ ಶಶಿಕಲಾ ಜೊಲ್ಲೆ ಅವರು ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಲಿದ್ದು, ಮೂರನೇ ಅಲೆಗೆ ಜಿಲ್ಲೆಯ ಸಿದ್ಧತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದು ಪತ್ರಿಕೆಯ ಮೂಲಕ ಪೋಷಕರು ಒತ್ತಾಯಿಸಿದ್ದಾರೆ.