ಕರಿಕೆ: ಮಳೆಗಾಲ ಪ್ರಾರಂಭವಾಯಿತೆAದರೆ ಭಾಗಮಂಡಲ - ಕರಿಕೆ ರಸ್ತೆಯ ಇಕ್ಕೆಲಗಳಲ್ಲಿ ಹತ್ತಾರು ಜಲಪಾತಗಳು ಜನರನ್ನು ಸೆಳೆಯುತ್ತವೆ. ಇದೀಗ ಈ ಭಾಗದಲ್ಲಿ ಬಿರುಸಿನ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಜಲಪಾತಗಳು ಮೈದುಂಬಿ ತಮ್ಮ ಸೊಬಗನ್ನು ಅನಾವರಣ ಮಾಡಿದೆ. ಭಾಗಮಂಡಲದಿAದ ಹನ್ನೆರಡು ಕಿ.ಮೀ. ದೂರ ಕರಿಕೆ ಕಡೆ ಪ್ರಯಾಣಿಸುವಾಗ ಬ್ರಹ್ಮಗಿರಿ ತಪ್ಪಲಿನ ತಲಕಾವೇರಿ ವನ್ಯಧಾಮದೊಳಗೆ ಹಾದುಹೋಗುವ ಅಂತರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಈ ಜಲಪಾತಗಳು ಕಾಣಸಿಗುತ್ತಿದ್ದು, ಪ್ರಯಾಣಿಕರ ಕಣ್ಣಿಗೆ ಮುದ ನೀಡುತ್ತಿವೆ. - ಸುಧೀರ್ ಹೊದ್ದೆಟಿ