ವರದಿ-ಉಷಾ ಪ್ರೀತಮ್

ವೀರಾಜಪೇಟೆ. ಜೂ. ೧೮: ರಾಯ್ ಡಿಸೋಜಾ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ವಿಪರೀತ ತಿರುವುಗಳನ್ನು ಪಡೆದು, ತನಿಖೆ ನಡೆಸಬೇಕಾದ ಸಿಐಡಿ ಪೊಲೀಸರಲ್ಲದೇ ಸ್ಥಳೀಯ ಪೊಲೀಸರು ಆಗಾಗ್ಗೆ ತನಿಖೆ ನಡೆಸಿ ಮೃತ ರಾಯ್ ಕುಟುಂಬವನ್ನು ಮತ್ತಷ್ಟು ಕಂಗಾಲು ಮಾಡುತ್ತಿದ್ದಾರೆ ಎನ್ನುವ ಆರೋಪ ಮೃತ ರಾಯ್ ಕುಟುಂಬದಿAದ ಬಂದಿದೆ.

ಗುರುವಾರದAದು ಬೆಳಗ್ಗಿನ ಸಮಯದಲ್ಲಿ ರಾಬಿನ್ ಡಿಸೋಜಾ ಎಫ್‌ಐಆರ್ ಪ್ರತಿ ಪಡೆದುಕೊಂಡು ಬರಲು ಹೋಗಿದ್ದಾಗ , ಮೊದಲೇ ಬಂದು ಚಿಕ್ಕಪೇಟೆ ಜಂಕ್ಷನ್‌ನಲ್ಲಿ ಕಾಯುತ್ತಿದ್ದ ಪೊಲೀಸರು ರಾಬಿನ್ ಹೊರಗೆ ಹೋಗಿದ್ದನ್ನು ಗಮನಿಸಿ, ಕೂಡಲೇ ರಾಯ್ ಡಿಸೋಜಾ ಮನೆಗೆ ತೆರಳಿದ್ದಾರೆ. ಸಮವಸ್ತç ಧರಿಸಿ ಬಂದಿದ್ದ ಮುಖ್ಯಪೇದೆ ಹಾಗೂ ಮಹಿಳಾ ಪೇದೆ ‘‘ರಾಯ್ ಡಿಸೋಜಾ ಧರಿಸಿದ್ದ ಬಟ್ಟೆ ಕೊಡಿ ನಮ್ಮನ್ನು ಸಿಐಡಿ ತನಿಖಾ ತಂಡದವರು ಕಳುಹಿಸಿದ್ದಾರೆ’’ ಎಂದು ಕೇಳಿಕೊಂಡಿದ್ದಾರೆ. ಅಲ್ಲದೆ ಖಾಲಿ ಪತ್ರಕ್ಕೆ ಸಹಿ ಹಾಕುವಂತೆ ಕೇಳಿದಾಗ, ತಾಯಿ ಮೆಟಿಲ್ಡಾ ಲೋಬೋ ತನ್ನ ಮಗ ಬರುವವರೆಗೂ ನಾನು ಯಾವ ಸಹಿಯನ್ನು ಹಾಕುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ರಾಬಿನ್ ಡಿಸೋಜಾ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಈ ಬಗ್ಗೆ ಸಿಐಡಿ ತನಿಖಾ ತಂಡದ ಗೋಪಾಲಕೃಷ್ಣರವರಿಗೆ ಕರೆಮಾಡಿ ರಾಬಿನ್ ಡಿಸೋಜಾ ಕೇಳಿದಾಗ ‘‘ನಾವು ಯಾವ ಬಟ್ಟೆಯನ್ನೂ ಕೇಳಿಲ್ಲಾ, ಯಾರನ್ನು ಕಳುಹಿಸಿಲ್ಲ. ನೀವು ಹಾಗೇ ಕೇಳಿ ಬಂದವರಿಗೆ ಏನನ್ನು ಕೊಡುವುದು ಬೇಡ. ಅದು ನಿಮ್ಮ ಬಳಿಯೇ ಇರಲಿ, ಚೆನ್ನಾಗಿ ಒಣಗಿದ ಬಳಿಕ ನಾವೂ ಪಡೆದುಕೊಳ್ಳುತ್ತೇವೆ’’ ಎಂದು ತಿಳಿಸಿದರಂತೆ. ಪತ್ರಿಕೆಯೊಂದಿಗೆ ಮಾತನಾಡಿದ ರಾಬಿನ್ ಡಿಸೋಜಾ ತಾನು ಈ ವಿಚಾರವನ್ನು ಎಸ್ಪಿಯವರ ಗಮನಕ್ಕೆ ತರಬೇಕೆಂದುಕೊAಡಿದ್ದೇನೆ. ಅದು ಹೇಗೆ ಸ್ಥಳೀಯ ಪೊಲೀಸರು ಹೀಗೆ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತೇನೆ ಎಂದಿದ್ದಾರೆ.

ಜೂನ್ ೧೪ ರಂದು, ರಾತ್ರಿ ೮ ಘಂಟೆಗೆ ಮೆಟ್ಟಿಲ್ಡಾ ಡಿಸೋಜಾ ಮನೆಗೆ ಸಾಂತ್ವಾನ ಹೇಳುವ ನೆಪದಲ್ಲಿ ೪ ಮಹಿಳೆಯರು ಬಂದಿದ್ದಾರೆ. ಮೆಟಿಲ್ಡಾ ಡಿಸೋಜಾರಿಗೆ ಸಾಂತ್ವಾನ ಹೇಳುತ್ತಾ ಹೇಳುತ್ತಾ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ, ತನಿಖಾ ಮಾದರಿ ಪ್ರಶ್ನೆಗಳನ್ನು ಕೇಳಲಾರಂಭಿಸಿದಾಗ ಅನುಮಾನಗೊಂಡ ರಾಬಿನ್ ಡಿಸೋಜಾ ,ತಮ್ಮ ಮೊಬೈಲ್‌ನಲ್ಲಿ ಅವರ ಫೋಟೋ ಸೆರೆ ಹಿಡಿದುಕೊಂಡು ಬಳಿಕ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದಾಗ ಅವರು ಅಲ್ಲಿಂದ ಹೊರಟರು ಎಂದು ರಾಬಿನ್ ಡಿಸೋಜಾ ತಿಳಿಸಿದ್ದಾರೆ. ಬಹುಷಃ ಅಮಾನತ್ತುಗೊಂಡ ಪೇದೆಗಳ ಮನೆಯವರು ಇರಬಹುದು ಎಂದು ಶಂಕಿಸಿದ್ದಾರೆ.

ಕೂಡಲೇ ಆ ಫೋಟೋವನ್ನು ರಾಬಿನ್ ಡಿಸೋಜಾ ಅವರ ಸಂಬAಧಿಕರಿಗೆ ತೋರಿಸಿದಾಗ ಅದರಲ್ಲಿ ಇರುವ ನಾಲ್ವರು ಮಹಿಳೆಯರು ಈ ಪ್ರಕರಣದಲ್ಲಿ ಅಮಾನತ್ತಿನಲ್ಲಿರುವ ನಾಲ್ವರು ಪೊಲೀಸರ ಪತ್ನಿಯರು ಎಂದು ತಿಳಿಯಿತು ಎಂದು ರಾಬಿನ್ ಡಿಸೋಜಾ ಮಾಹಿತಿ ನೀಡಿದ್ದಾರೆ. ಇದು ಹೀಗೆ ಮುಂದುವರಿದಲ್ಲಿ ನಮ್ಮ ಕುಟುಂಬ ಭದ್ರತೆಗಾಗಿ ಜಿಲ್ಲಾ ವರಿಷ್ಠಾಧಿಕಾರಿ ಅವರ ಬಳಿ ಮನವಿ ಸಲ್ಲಿಸಬೇಕಾಗುತ್ತದೆ ಎಂದು ರಾಯ್ ಕುಟುಂಬಸ್ಥರು ತಿಳಿಸಿದರು.