ಮಡಿಕೇರಿ: ರಾಜ್ಯ ಯುವ ಕಾಂಗ್ರೆಸ್ ವತಿಯಿಂದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಕಾರ್ಯಕ್ರಮದಡಿ ಕೊಡಗಿನ ಪೊಲೀಸ್ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್ ಹಾಗೂ ಸುಮಾರು ೨೦೦ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

ಕೋವಿಡ್ ಸೋಂಕು ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೊಲೀಸರ ಕಾರ್ಯದ ಬಗ್ಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಮೆಡಿಕಲ್ ಕಿಟ್‌ಗಳನ್ನು ಜಿಲ್ಲಾ ಗುಪ್ತದಳದ ಪೊಲೀಸ್ ನಿರೀಕ್ಷಕ ಮೇದಪ್ಪ ಅವರಿಗೆ ರಕ್ಷಾ ರಾಮಯ್ಯ ಹಸ್ತಾಂತರಿಸಿದರು. ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಆಟೋ ಚಾಲಕರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಯುವ ಕಾಂಗ್ರೆಸ್ ವತಿಯಿಂದ ಅವರು ವಿತರಿಸಿದರು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಿವೇಕ್ ಯಾವಗಲ್, ಸಿರಿಲ್ ಪ್ರಭು, ಪ್ರದೀಪ್, ಪ್ರಮುಖರಾದ ಅಯ್ಮಾನ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮೈಸಿ ಕತ್ತಣಿರ, ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ಸಾಮಾಜಿಕ ಜಾಲತಾಣದ ಸಂಚಾಲಕ ಶರಫುದ್ದೀನ್ ಮತ್ತಿತರರು ಹಾಜರಿದ್ದರು.ಸುಂಟಿಕೊಪ್ಪ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ವಿಶೇಷಚೇತನರು ಮತ್ತು ವಯೋವೃದ್ಧ ಕುಟುಂಬಗಳಿಗೆ ಹಾಸನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಅಧ್ಯಕ್ಷ ಎ. ಲೋಕೇಶ್ ಕುಮಾರ್ ದಿನಸಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರಾದ ಆಲಿಕುಟ್ಟಿ, ಮಂಜುನಾಥ್, ರಫೀಕ್ ಖಾನ್, ಸ್ಥಳೀಯರಾದ ಹದ್ದೂಸ, ದಿವಾಕರ್, ನಿರಂಜನ್, ಪೊಲೀಸ್ ಸಿಬ್ಬಂದಿ ಖಾದರ್ ಹಾಜರಿದ್ದರು.

ಶನಿವಾರಸಂತೆ: ಶನಿವಾರಸಂತೆಯ ಸೃಷ್ಟಿ ಸ್ತಿçà ಶಕ್ತಿ ಸಂಘದ ವತಿಯಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಗಳಲೆ ಕಾಲೋನಿಯಲ್ಲಿ ಕೋವಿಡ್ ಸೋಂಕು ತಗುಲಿ ಸೀಲ್‌ಡೌನ್ ಮಾಡಿರುವ ಸಂಘದ ಸದಸ್ಯರ ಮನೆಗಳಿಗೆ ಪಡಿತರ ಕಿಟ್ ವಿತರಿಸಲಾಯಿತು.

ಸಂಘದ ಅಧ್ಯಕ್ಷೆ ಎನ್.ಕೆ. ಸುಮತಿ, ಕಾರ್ಯದರ್ಶಿ ವಸಂತಮ್ಮ, ಸದಸ್ಯರಾದ ಹೇಮಾವತಿ, ಸುಧಾ, ಲೋಕೇಶ್ವರಿ ಇತರರು ಹಾಜರಿದ್ದರು.ಶನಿವಾರಸಂತೆ: ಶನಿವಾರಸಂತೆಯ ಸೃಷ್ಟಿ ಸ್ತಿçà ಶಕ್ತಿ ಸಂಘದ ವತಿಯಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಗಳಲೆ ಕಾಲೋನಿಯಲ್ಲಿ ಕೋವಿಡ್ ಸೋಂಕು ತಗುಲಿ ಸೀಲ್‌ಡೌನ್ ಮಾಡಿರುವ ಸಂಘದ ಸದಸ್ಯರ ಮನೆಗಳಿಗೆ ಪಡಿತರ ಕಿಟ್ ವಿತರಿಸಲಾಯಿತು.

ಸಂಘದ ಅಧ್ಯಕ್ಷೆ ಎನ್.ಕೆ. ಸುಮತಿ, ಕಾರ್ಯದರ್ಶಿ ವಸಂತಮ್ಮ, ಸದಸ್ಯರಾದ ಹೇಮಾವತಿ, ಸುಧಾ, ಲೋಕೇಶ್ವರಿ ಇತರರು ಹಾಜರಿದ್ದರು.ಸೋಮವಾರಪೇಟೆ: ಪಟ್ಟಣದ ನಿವಾಸಿ, ಮೈಸೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ ರಾಜು ತಂಬಿ ಅವರು ಕೊರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಚೌಡೇಶ್ವರಿ ಬ್ಲಾಕ್‌ನ ೧೫ ಕುಟುಂಬಗಳಿಗೆ ನೀಡಿದ ಆಹಾರ ಸಾಮಗ್ರಿಗಳ ಕಿಟ್‌ನ್ನು ಸಾಮಾಜಿಕ ಕಾರ್ಯಕರ್ತೆ ಎಂ.ಎ. ರುಬೀನಾ ಹಾಗೂ ಅಶ್ವಿನಿ ಅವರುಗಳು ವಿತರಿಸಿದರು.ಸೋಮವಾರಪೇಟೆ: ಪಟ್ಟಣದ ನಿವಾಸಿ, ಮೈಸೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ ರಾಜು ತಂಬಿ ಅವರು ಕೊರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಚೌಡೇಶ್ವರಿ ಬ್ಲಾಕ್‌ನ ೧೫ ಕುಟುಂಬಗಳಿಗೆ ನೀಡಿದ ಆಹಾರ ಸಾಮಗ್ರಿಗಳ ಕಿಟ್‌ನ್ನು ಸಾಮಾಜಿಕ ಕಾರ್ಯಕರ್ತೆ ಎಂ.ಎ. ರುಬೀನಾ ಹಾಗೂ ಅಶ್ವಿನಿ ಅವರುಗಳು ವಿತರಿಸಿದರು.ಸೋಮವಾರಪೇಟೆ: ಪಟ್ಟಣದ ನಿವಾಸಿ, ಮೈಸೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ ರಾಜು ತಂಬಿ ಅವರು ಕೊರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಚೌಡೇಶ್ವರಿ ಬ್ಲಾಕ್‌ನ ೧೫ ಕುಟುಂಬಗಳಿಗೆ ನೀಡಿದ ಆಹಾರ ಸಾಮಗ್ರಿಗಳ ಕಿಟ್‌ನ್ನು ಸಾಮಾಜಿಕ ಕಾರ್ಯಕರ್ತೆ ಎಂ.ಎ. ರುಬೀನಾ ಹಾಗೂ ಅಶ್ವಿನಿ ಅವರುಗಳು ವಿತರಿಸಿದರು.ಕೂಡಿಗೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೂಡಿಗೆ ವಲಯದ ಮುಳ್ಳುಸೋಗೆ ಕಾರ್ಯಕ್ಷೇತ್ರದ ಸದಸ್ಯರಿಗೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಲುವರಾಜ್ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿದರು.

ಈ ಸಂದರ್ಭ ಉಪಾಧ್ಯಕ್ಷೆ ಆರ್. ಜಯಮ್ಮ ಹಾಗೂ ವಲಯದ ಮೇಲ್ವಿಚಾರಕಿ ಕಲಾವತಿ, ಸೇವಾ ಪ್ರತಿನಿಧಿ ಕುಸುಮ ಇದ್ದರು.ಕರಿಕೆ ಗ್ರಾಮ ಪಂಚಾಯಿತಿ

ಕರಿಕೆ: ಕೋವಿಡ್ ಪಾಸಿಟಿವ್‌ನಿಂದ ಮನೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಕರಿಕೆ ಗ್ರಾಮ ಪಂಚಾಯಿತಿಯ ಚೆತ್ತುಕಾಯ ನಾಲ್ಕನೇ ವಾರ್ಡ್ ಸದಸ್ಯ ಕೆ.ಎ. ನಾರಾಯಣನವರು ಹಾಗೂ ಸ್ಥಳೀಯ ದಾನಿಗಳ ಸಹಕಾರದಿಂದ ಸಂಗ್ರಹಿಸಲಾದ ಒಂದು ವಾರಕ್ಕೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳ ಕಿಟ್‌ನ್ನು ಮನೆ ಮನೆಗೆ ತೆರಳಿ ವಿತರಿಸಿದರು.