ಕೂಡಿಗೆ, ಜೂ.೧೮ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯ ಅಣೆಕಟ್ಟೆಗೆ ಒಳ ಹರಿಯುವ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿ ಅಣೆಕಟ್ಟೆಗೆ ಹತ್ತು ಅಡಿಗಳಷ್ಟು ನೀರು ಹರಿದು ಬಂದಿದೆ. ಹಾರಂಗಿ ಜಲಾನಯನ ಪ್ರದೇಶದ ಭಾಗದಲ್ಲಿ ಕಳೆದ ಮೂರು ದಿನಗಳಲ್ಲಿ ಸುರಿದ ಭಾರೀ ಮಳೆಗೆ ಅಣೆಕಟ್ಟೆಗೆ ಹೆಚ್ಚುವರಿಯಾಗಿ ನೀರು ಹರಿದು ಬಂದಿದೆ. ಅಣೆಕಟ್ಟೆಯ ನೀರಿನ ಮಟ್ಟ ೨೮೩೩.೪೧ ಟಿ.ಎಂ.ಸಿ. ಇಂದಿನ ನೀರಿನ ಮಟ್ಟ ಅಣೆಕಟ್ಟೆಯಲ್ಲಿ ೩,೫೧೨೭೪ ಟಿಎಂಸಿ ಇದೆ. ಅಣೆಕಟ್ಟೆಗೆ ೧,೧೮೬ ಕ್ಯೂಸೆಕ್ ನೀರು ಬರುತ್ತಿದೆ. ನದಿಗೆ ೪೦ ಕ್ಯೂಸೆಕ್ ನಾಲೆಗೆ ೩೦ ಕ್ಯೂಸೆಕ್ ನೀರು ಹರಿಯುತ್ತಿದೆ.