ಶನಿವಾರಸAತೆ, ಜೂ. ೧೯: ಜಿಲ್ಲೆಯ ಗಡಿಭಾಗ ಸೇರಿದಂತೆ ಹಾಸನ ಜಿಲ್ಲೆಯಲ್ಲಿ ವಾಹನಗಳನ್ನು ಕಳವು ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಶನಿವಾರಸಂತೆ ಪೊಲೀಸರು ಈ ಸಂಬAಧ ಈರ್ವರನ್ನು ಬಂದಿಸಿದ್ದಾರೆ.

ಶನಿವಾರಸAತೆ, ಕೊಡ್ಲಿಪೇಟೆ ಸುತ್ತಮುತ್ತ ಹಾಗೂ ಹಾಸನ ಕಡೆಗಳಲ್ಲಿ ಮನೆಯ ಹೊರಗಡೆ ನಿಲ್ಲಿಸಿದ್ದ ಹಾಗೂ ವಾಹನಗಳಲ್ಲಿ ಕೀ ಬಿಟ್ಟು ಹೋಗಿರುವ ವಾಹನಗಳನ್ನು ಕಳವು ಮಾಡುತ್ತಿರುವ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬAಧ ತನಿಖೆ ಕೈಗೊಂಡ ಪೊಲೀಸರು ಶನಿವಾರಸಂತೆಯ ಸುಳುಗಳಲೆಯ ಜೀವನ್ (೨೩) ಹಾಗೂ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮದ ರಿಯಾಝ್ (೨೯) ಎಂಬಿಬ್ಬರನ್ನು ಬಂದಿಸಿದ್ದಾರೆ. ಬಂಧಿತರಿAದ ರೂ. ೧೨೦೦೦೦ ಮೌಲ್ಯದ ಒಂದು ಮಾರುತಿ ಕಾರು, ಒಂದು ಸ್ಕೂಟಿ ಹಾಗೂ ಒಂದು ಸೂಪರ್ ಎಕ್ಸೆಲ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ೨೦೧೯ರಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲುವಾಸ ಮುಗಿಸಿ ಬಂದು ಮತ್ತೆ ಕಳ್ಳತನ ಮುಂದುವರಿಸಿದ್ದು, ಇದೀಗ ಮತ್ತೆ ಬಂಧನಕ್ಕೊಳಗಾಗಿದ್ದಾನೆ.

ಪೊಲೀಸ್ ಅಧೀಕ್ಷಕರು ಹಾಗೂ ಸೊಮವಾರಪೇಟೆ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶನಿವಾರಸಂತೆ ವೃತ್ತ ನಿರೀಕ್ಷಕ ಎಸ್. ಪರಶಿವಮೂರ್ತಿ, ಠಾಣಾಧಿಕಾರಿ ದೇವರಾಜು, ಅಪರಾಧ ಸಿಬ್ಬಂದಿಗಳಾದ ಎಸ್.ಎಸ್. ಲೋಕೇಶ್, ಹೆಚ್.ಬಿ. ಶಶಿಕುಮಾರ್, ಬಿ.ಡಿ. ಮುರಳಿ, ಪ್ರದೀಪ್, ಎಎಸ್‌ಐ ಜಯಕುಮಾರ್, ವಿನಯ್, ಸಂತೋಷ್, ಪ್ರವೀಣ್, ಚಾಲಕ ಕುಮಾರ್ ಭಾಗವಹಿಸಿದ್ದರು.

ವಾಹನ ಮಾಲೀಕರು ತಮ್ಮ ವಾಹನಗಳನ್ನು ಸುರಕ್ಷಿತ ರೀತಿಯಲ್ಲಿ ನೋಡಿಕೊಂಡು ರಾತ್ರಿ ಸಮಯದಲ್ಲಿ ವಾಹನಗಳನ್ನು ಸೂಕ್ತ ಭದ್ರತೆಯ ಸ್ಥಳದಲ್ಲಿ ನಿಲ್ಲಿಸುವಂತೆ ಹಾಗೂ ಕೀಯನ್ನು ವಾಹನದಲ್ಲಿ ಬಿಟ್ಟು ಹೋಗದಂತೆ ಎಚ್ಚರ ವಹಿಸಿಕೊಂಡು ಅಪರಾಧಗಳನ್ನು ತಡೆಗಟ್ಟುವಲ್ಲಿ ಸಹಕರಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ.