ಕೆಲವು ಹಿರಿಯ ತಲೆಮಾರಿನವರಿಗೆ ಬಿಟ್ಟರೆ ಇಂದಿನ ಕಿರಿಯ ತಲೆಮಾರಿನವರನ್ನು ಕೊಡಗು ಏಕೀಕರಣ ರಂಗದ ಬಗ್ಗೆ ಕೇಳಿದರೆ ಪ್ರಾಯಶಃ ಪಾಪ ಅವರಿಗೆ ಆಗೊಂದು ಸಂಸ್ಥೆ ಇತ್ತೆಂಬುದರ ಗಂಧ-ಗಾಳಿಯೂ ತಿಳಿದಿರಲಿಕ್ಕಿಲ್ಲ. ಆದರೆ ಅಂದು ನಮ್ಮ ಹಿರಿಯರು ಈ ಜಿಲ್ಲೆಯ ಅತೀವ ಕಾಳಜಿಯಿಂದ ಹುಟ್ಟುಹಾಕಿ ಈ ಕೊಡಗು ಏಕೀಕರಣ ರಂಗ (ಏಇಖ) ಎಂಬ ಸಂಸ್ಥೆ ನಿಜಕ್ಕೂ ಜಿಲ್ಲೆಯ ಹಲವು ಜ್ವಲಂತ ವಿಷಯಗಳನ್ನು ಎತ್ತಿಕೊಂಡು ಹೋರಾಟ ಮಾಡಿ ಅದಕ್ಕೆ ಒಂದು ಅಂತಿಮ ಗೆಲುವನ್ನು ತಂದುಕೊಡುವಲ್ಲಿ ನಿಜಕ್ಕೂ ಉತ್ತಮ ಪ್ರಶಂಶನೀಯ ಕಾರ್ಯಗಳನ್ನು ಮಾಡುತ್ತಿತ್ತು ಎಂದರೆ ಅತಿಶಯೋಕ್ತಿ ಆಗಲಾರದು. ಜಾತಿ, ಮತ, ಪಂಥ, ರಾಜಕೀಯದ ಗಂಧ ಗಾಳಿ, ವಿರೋದಾಭಾಸವಿಲ್ಲದೇ ಅತೀ ಒಗ್ಗಟ್ಟಿನಿಂದ ಅಂದಿನ ದಿನಗಳಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಎತ್ತಿಕೊಂಡು ಹೋರಾಟ ಮಾಡಿ ಅದಕ್ಕೊಂದು ತಾರ್ಕಿಕ ಅಂತ್ಯವನ್ನು ಕಂಡುಕೊಳ್ಳುತ್ತಿತ್ತು ಎಂದರೆ ಅದು ನಿಜಕ್ಕೂ ಕೊಡಗು ಏಕೀಕರಣ ರಂಗ ಹೆಗ್ಗಳಿಕೆ.

ಕೊಡಗು ಜಿಲ್ಲೆಯಲ್ಲಿ ಹಲವಷ್ಟು ಸಮಸ್ಯೆಗಳನ್ನು ಎತ್ತಿಕೊಂಡು ಹಲವಷ್ಟು ಸಂಘ-ಸAಸ್ಥೆಗಳು ಹುಟ್ಟಿಕೊಂಡು ತಮ್ಮ ತಮ್ಮ ಮೂಗಿನ ನೇರಕ್ಕೆ ಹೋರಾಟ ಮಾಡಿವೆಯೇ ಹೊರತು ಏಕೀಕರಣ ರಂಗದAತೆ ನಿಸ್ವಾರ್ಥತೆಯಿಂದ ಒಗ್ಗಟ್ಟಾಗಿ ಹೋರಾಟ ಮಾಡಿದ ಸಂಘ-ಸAಸ್ಥೆಗಳು ಮತ್ತೆ ಹುಟ್ಟಿಕೊಳ್ಳಲೇ ಇಲ್ಲ. ಇಡೀ ಕೊಡಗು ಜಿಲ್ಲೆ ಜನತೆ ಜಾತಿ, ಮತ, ಧರ್ಮದ ಬೇಧವಿಲ್ಲದೆ ರಾಜಕೀಯದ ಗಂಧ ಗಾಳಿ ಇಲ್ಲದೇ ಕೊಡಗು ಏಕೀಕರಣ ರಂಗದೊAದಿಗೆ ಅಂದು ಕೈಜೋಡಿಸಿ ಹೋರಾಟದಲ್ಲಿ ಭಾಗೀದಾರರಾಗಿದ್ದರೆಂದರೆ, ರಂಗದ ನಿಸ್ವಾರ್ಥತೆ, ಖಚಿತ ನಿಲುವು ಮತ್ತು ನಿಶ್ಚಿತ ಗುರಿಯೆಡೆ ಸಾಗುವ ಬಗ್ಗೆ ಜನರಿಗಿದ್ದ ಅತೀವ ವಿಶ್ವಾಸದ ಅರಿವು ನಮಗಾಗುತ್ತದೆ.

ಕೊಡಗಿನಲ್ಲಿ ಅಂದು ಕೊಡಗು ಏಕೀಕರಣ ರಂಗದ ಪ್ರಭಾವ ಅದೆಷ್ಟು ಇತ್ತೆಂದರೆ, ಅದೊಂದು ಪರ್ಯಾಯ ಸರಕಾರದಂತೆಯೇ ಕಾರ್ಯನಿರ್ವಹಿಸುತ್ತಿತ್ತು. ಪ್ರಥಮದಲ್ಲಿ ರಂಗದ ಮುಖಂಡರುಗಳೆಲ್ಲರೂ ಏಕಮನಸ್ಸಿನಿಂದ, ನಿಸ್ವಾರ್ಥಭಾವದಿಂದ, ಕೊಡಗಿನ ಏಳಿಗೆಯೊಂದೇ ತಮ್ಮ ಗುರಿ ಎಂಬ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದರು. ಆದರೆ ರಂಗದ ಪ್ರಭಾವ ಹೆಚ್ಚಾಗುತ್ತಿದ್ದಂತೆಯೇ ಅದರ ಪ್ರಭಾವವನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಂಡ ಕೆಲವು ಸ್ವಾರ್ಥಿಗಳಿಂದ ರಂಗಕ್ಕೆ ಕೆಟ್ಟ ಹೆಸರು ಬಂದಿದ್ದೂ ಇಂದು ಇತಿಹಾಸ. ಅಂತಹ ‘ಕುನ್ನಿ’ ಬುದ್ಧಿಯ ‘ಶಕುನಿ’ಗಳಿಂದ ಕೊಡಗಿನ ಇತಿಹಾಸದಲ್ಲೇ ಮೂಡಿಬಂದ ಅತ್ಯುತ್ತಮ ಸಂಸ್ಥೆಯೊAದು ನೇಪತ್ಯಕ್ಕೆ ಸರಿಯಬೇಕಾದುದು ಜಿಲ್ಲೆಯ ಮಟ್ಟಿಗೆ ಒಂದು ದುರಂತವೇ ಸರಿ. ಅದರಲ್ಲಿದ್ದ ಸುಸಂಸ್ಕೃತರೆನಿಸಿಕೊAಡವರು ಸ್ವಾಭಾವಿಕವಾಗಿಯೇ ಮನನೊಂದು ರಂಗದ ಕಾರ್ಯಕಲಾಪಗಳಿಂದ ಅನಿವಾರ್ಯವಾಗಿ ದೂರ ಸರಿಯುವಂತಾದುದು ನಿಜಕ್ಕೂ ಜಿಲ್ಲೆಯ ಪಾಲಿಗೆ ದೊಡ್ಡ ದೌರ್ಭಾಗ್ಯ. ಇಂದಿಗೂ ಅವರುಗಳಿಗೆ ರಂಗದ ಬಗ್ಗೆ ಅತೀವ ಅಭಿಮಾನವಿದ್ದರೂ, ಅಂದು ಅವರ ಮನಸ್ಸಿಗಾದ ನೋವು ಅವರನ್ನು ಭಾದಿಸುತ್ತಿರುವುದು ಅವರನ್ನು ಮಾತನಾಡಿಸಿದಾಗ ಕಣ್ಣಿಗೆ ಕಟ್ಟಿದಂತಾಗಿ, ಕಣ್ಣು ತುಂಬಿ ಬಂದAತೆ ಆಗುತ್ತದೆ.

ಅಂದಿಗಿAತ ಇಂದು ಕೊಡಗು ಏಕೀಕರಣರಂಗದAತಹ ಒಂದು ವೇದಿಕೆ ಕೊಡಗಿನ ಉಳಿಯುವಿಕೆಗೆ, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಒಂದು ತಾರ್ಕಿಕ ಅಂತ್ಯವನ್ನು ಕಂಡುಕೊಳ್ಳಲು ಹೋರಾಡುವುದಕ್ಕೆ ಅನಿವಾರ್ಯವಾಗಿದೆ. ನನಗೆ ತಿಳಿದ ಮಟ್ಟಿಗೆ ರಂಗ ಇಂದು ಸಂಪೂರ್ಣ ನಿಷ್ಕಿçಯವಾಗಿಲ್ಲ. ತಲಕಾವೇರಿ ಅನ್ನದಾನದಂತಹ ಸತ್ಕಾರ್ಯಗಳಲ್ಲಿ ಇಂದಿಗೂ ತನ್ನನ್ನು ತೊಡಗಿಸಿಕೊಂಡು ತನ್ನ ಇರುವಿಕೆಯನ್ನು ತೋರ್ಪಡಿಸುತ್ತಿದೆ. ಆದರೆ ಅದು ಅದಷ್ಟಕ್ಕೇ ಸೀಮಿತವಾಗಬಾರದು. ಇಂದು ಕೊಡಗಿನಲ್ಲಿ ಹಲವಷ್ಟು ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಲಿವೆ. ಹಲವಷ್ಟು ಸಂಘ-ಸAಸ್ಥೆಗಳು ತಮ್ಮ ಇರುವಿಕೆಯನ್ನು ತೋರ್ಪಡಿಸುತ್ತಿದ್ದರೂ ಒಂದು ‘ನಿಶ್ಚಿತ್ತ’ ಗುರಿ ಮುಟ್ಟುವಲ್ಲಿ ಅವೆಲ್ಲಾ ವಿಫಲವಾಗುತ್ತಿವೆ. ಅಂದಿನ ಮಳೆಗೆ ಹುಟ್ಟಿದ ‘ನಾಯಿಕೊಡೆ’ಗಳಂತೆ ಹುಟ್ಟಿ ಯಾವುದೇ ‘ಭೀರ್ಯ’ವನ್ನು ಬೀರದೇ ನಶಿಸಿಹೋಗುತ್ತಲಿವೆ. ಜಿಲ್ಲೆಯ ಯಾವುದೇ ಸಮಸ್ಯೆಗಳಾಗಲೀ ಉತ್ತಮ ಪರಿಹಾರವೆಂಬುದು ಮರೀಚಿಕೆಯಾಗಿದೆ. ರಾಜಕೀಯದ ಒತ್ತಡ - ಪ್ರಭಾವವೆಂಬುದೇ ಕೈಮೇಲಾಗುತ್ತಲಿದೆ. ಅಲ್ಲದೆ ಜಾತಿ, ಜನಾಂಗ, ಧರ್ಮದ ವಿಷಬೀಜ ಬಿತ್ತುವವರದೇ ಅಲ್ಲೆಲ್ಲಾ ‘ಆಡಂಬರ’ ಎನ್ನುವಂತೆ ಆಗಿಬಿಟ್ಟಿದೆ.

ಹೀಗಿರುವಾಗ ಇದಕ್ಕೆಲ್ಲಾ ಪರ್ಯಾಯ ವ್ಯವಸ್ಥೆ ಎನ್ನುವಂತೆ ಕೊಡಗು ಏಕೀಕರಣ ರಂಗವನ್ನು ಬಲಗೊಳಿಸುವ ಅನಿವಾರ್ಯತೆ ಇಂದೆAದಿಗಿAತಲೂ ಇಂದು ಹೆಚ್ಚಾಗಿದೆ. ರಂಗ ತನ್ನ ಹಿಂದಿನ ಗುಣವಿಶೇಷತೆಗಳನ್ನೆಲ್ಲಾ ಒಂದುಗೂಡಿಸಿಕೊAಡು ಇಂದು ಎದ್ದೇಳಬೇಕಾಗಿದೆ. ರಂಗದಲ್ಲಿ ಈ ಹಿಂದೆ ನಿಶ್ವಾರ್ಥತೆಯಿಂದ ಜಿಲ್ಲೆಗಾಗಿ ದುಡಿಯಲು ಆಸಕ್ತಿ ಇರುವ ಅನೇಕ ಯುವಕರು ಜಿಲ್ಲೆಯಲ್ಲಿ ಇದ್ದಾರೆ. ಈ ಹಿಂದೆ ರಂಗದಲ್ಲಿ ದುಡಿದವರು ಅಂತವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ. ಆದರೆ ನನ್ನದೊಂದು ಮನವಿ, ಈ ಹಿಂದೆ ರಂಗದ ಅವನತಿಗೆ ಕಾರಣರಾದವರು ಖಂಡಿತಾ ಮುಂದಕ್ಕೂ ಈ ವಿಚಾರದಲ್ಲಿ ದಯವಿಟ್ಟು ಹಸ್ತಕ್ಷೇಪ ಮಾಡುವುದು ಬೇಡ. ಅಂತವರು ತಮ್ಮ ತಪ್ಪಿನ ಅರಿವು ಆಗಿದ್ದರೆ ತಮ್ಮನ್ನು ತಾವು ತಿದ್ದಿಕೊಂಡು ಇಲ್ಲಿ ತಲೆಹಾಕಿದರೆ ಸಾಕು ಎಂಬುದು ನನ್ನ ವಿನಂತಿ.

ಯಾವುದೇ ಕಾರಣಕ್ಕೂ ಸ್ವಾರ್ಥ ರಾಜಕಾರಣ ಮಾಡುತ್ತಿರುವ ಸಕ್ರಿಯ ರಾಜಕಾರಣಿಗಳು ಇತ್ತ ತಲೆಹಾಕದಿರುವುದು ಉತ್ತಮ. ಅಂತವರು ಇತ್ತ ತಲೆ ಹಾಕದಿದ್ದರೆ ಅದೇ ಅವರು ಈ ಜಿಲ್ಲೆಯ ಮಟ್ಟಿಗೆ ಮಾಡುವ ಬಹುದೊಡ್ಡ ಉಪಕಾರ.

ರಂಗದ ಹಳೆಯ ತಲೆಮಾರಿನ, ಜಿಲ್ಲೆಯ ಬಗ್ಗೆ ಅತೀವ ಕಾಳಜಿ ಇರುವ ನಾಯಕರುಗಳು ಇಂದೂ ಇದ್ದಾರೆ. ಅವರುಗಳೆಲ್ಲಾ ಜಿಲ್ಲೆಯ ಭವಿಷ್ಯದ ಬಗ್ಗೆ ದೂರಾಲೋಚನೆ ಮಾಡಿ ಇಂದು ಸಕ್ರಿಯರಾಗಬೇಕಿದೆ. ಮೊದಲೇ ಹೇಳಿದಂತೆ ಇಡೀ ಕೊಡಗು ಜಿಲ್ಲೆ ಹಿಂದೆAದಿಗಿAತಲೂ ಅತೀ ವಿಷಮ ಪರಿಸ್ಥಿತಿಯನ್ನು ಇಂದು ಎದುರಿಸುತ್ತಿದೆ. ಅದು ಎಲ್ಲರ ಅನುಭವಕ್ಕೂ ಬಂದಿರಬಹುದೆAಬುದು ನನ್ನ ಭಾವನೆ. ಹೀಗಿರುವಾಗ ಕೊಡಗು ಏಕೀಕರಣ ರಂಗವನ್ನು ಈ ಹಿಂದಿನ ಅದರ ವೈಭವೋಪೆತ ದಿನಗಳಿಗೆ ಮರಳಿತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವೆಲ್ಲರೂ ನಮ್ಮ ನಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸೋಣ. ಏಕೀಕರಣ ರಂಗದ ಮುಖೇನ ಜಿಲ್ಲೆಯ ಸಮಸ್ಯೆಗಳನ್ನೆಲ್ಲಾ ಪರಿಹರಿಸಿಕೊಳ್ಳೋಣ ಎಂಬುದು ನನ್ನ ಹಾರೈಕೆ. ರಂಗದ ಹಿಂದಿನ ಸುವರ್ಣ ಯುಗದತ್ತ ಹೆಜ್ಜೆ ಇರಿಸುವುದನ್ನು ನಾವೆಲ್ಲರೂ ಎದುರುನೋಡೋಣವೇ?! ಹಿಂದಿನ ತಲೆಮಾರಿನವರು ಇಂದಿನ ತಲೆಮಾರಿನವರಿಗೆ ‘ದಾರಿದೀಪ’ವಾಗಬಲ್ಲರೆ?

- ಯಸ್.ಯಂ. ವಿಶ್ವನಾಥ್, ಮಾಯಮುಡಿ.