ಮಡಿಕೇರಿ, ಜೂ. ೧೯: ಚೇರಂಬಾಣೆಯ ಶ್ರೀ ಸಿದ್ಧಾರೂಢಾಶ್ರಮದ ಶ್ರೀಮಾತೆ ಬೇಬಿತಾಯಿಯವರು (೮೪) ತಾ. ೧೯ ರಂದು ಬೆಳಿಗ್ಗೆ ೫.೧೫ಕ್ಕೆ ಬ್ರಹ್ಮೆöÊಕ್ಯರಾದರು. ಇತ್ತೀಚೆಗೆ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ನಿರಾಕರಿಸಿದ್ದರು.

ತಾ. ೨೦.೧೧.೧೯೩೬ರಲ್ಲಿ ಚೇರಂಬಾಣೆ ಬಳಿಯ ಕೊಟ್ಟೂರು ಗ್ರಾಮದ ಅಚ್ಚಯ್ಯ ಹಾಗೂ ಬಿಳ್ಳವ್ವ ದಂಪತಿಗಳಿಗೆ ಜನಿಸಿದ ಇವರು ಬಾಲಬ್ರಹ್ಮಚಾರಿಣಿಯಾಗಿದ್ದರು. ಮೂರು ಜನ ಸಹೋದರ ಐದು ಜನ ಸಹೋದರಿಯರನ್ನು ಹೊಂದಿದ್ದ ಇವರು ತಮ್ಮ ನಲವತ್ತೆರಡನೇ ವಯಸ್ಸಿನಲ್ಲಿ ಚೇರಂಬಾಣೆಯ ಸಿದ್ಧಾರೂಢಾಶ್ರಮಕ್ಕೆ ಸೇರಿಕೊಂಡರು. ಅಂದಿನ ಪೀಠಾಧಿಪತಿಗಳಾಗಿದ್ದ ಸದ್ಗುರು ಶ್ರೀ ನಾರಾಯಣಾನಂದ ಸ್ವಾಮೀಜಿಯವರಿಂದ ದೀಕ್ಷೆ ಪಡೆದಿದ್ದರು. ೨೦೧೬ರಲ್ಲಿ ನಾರಾಯಣಾನಂದ ಸ್ವಾಮೀಜಿ ಬ್ರಹ್ಮಲೀನರಾದ ಬಳಿಕ ಬೇಬಿ ಮಾತೆಯವರೇ ಮಠದ ಉಸ್ತುವಾರಿ ವಹಿಸಿದ್ದರು. ೧೫.೧೦.೨೦೧೯ರಲ್ಲಿ ಡಾ ಆರೂಢಭಾರತೀ ಸ್ವಾಮೀಜಿಯವರನ್ನು ಮಠದ ಟ್ರಸ್ಟ್ನ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳಿಕ ಅವರು ಸ್ವಲ್ಪ ವಿಶ್ರಾಂತರಾಗಿದ್ದರು. ಇತ್ತೀಚಿನವರೆಗೂ ಎಂದಿನAತೆ ಪ್ರತಿನಿತ್ಯ ಶ್ರೀ ಸಿದ್ಧಾರೂಢ - ಮಾಧವಾನಂದರ ತ್ರಿಕಾಲ ಪೂಜೆಯನ್ನು ತಾವೇ ಮಾಡುತ್ತಿದ್ದರು.