ಮಡಿಕೇರಿ, ಜೂ. ೧೯: ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ೧೮ ರಿಂದ ೪೪ ವರ್ಷದೊಳಗಿನ ರಾಜ್ಯ, ರಾಷ್ಟç ಹಾಗೂ ಅಂರ‍್ರಾಷ್ಟಿçÃಯ ಮಟ್ಟದ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ಕೋವಿಡ್-೧೯ ಗೆ ಸಂಬAಧಿಸಿದAತೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಮೊದಲ ಹಂತದಲ್ಲಿ ಕೊಡಗು ಜಿಲ್ಲೆಯ ೮೫ ರಾಜ್ಯ, ರಾಷ್ಟç ಹಾಗೂ ಅಂರ‍್ರಾಷ್ಟಿçÃಯ ಮಟ್ಟದ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ಕೋವಿಡ್-೧೯ ಲಸಿಕೆ ನೀಡಲಾಗಿರುತ್ತದೆ.

ಎರಡನೇ ಹಂತದಲ್ಲಿ ಕೋವಿಡ್-೧೯ ಲಸಿಕೆಯನ್ನು ನೀಡಲು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ೧೮ ರಿಂದ ೪೪ ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ರಾಜ್ಯ, ರಾಷ್ಟç ಹಾಗೂ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿದವರು ಲಸಿಕೆಯನ್ನು ಹಾಕಿಸಿಕೊಳ್ಳುವ ಪ್ರಯೋಜನವನ್ನು ಪಡೆದುಕೊಳ್ಳಲು ಕ್ರೀಡಾ ಇಲಾಖೆಯಲ್ಲಿ ನೋಂದಾವಣೆ ಮಾಡಬೇಕಿದೆ.

ಈ ಅರ್ಹತೆ ಹೊಂದಿರುವ ಕ್ರೀಡಾಪಟುಗಳು ತುರ್ತಾಗಿ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಕ್ರೀಡೆ ಹಾಗೂ ಕ್ರೀಡೆಯಲ್ಲಿ ಭಾಗವಹಿಸಿದ ವಿವರ, ಆಧಾರ್ ಸಂಖ್ಯೆ ಹಾಗೂ ದೂರವಾಣಿ ಸಂಖ್ಯೆಯ ವಿವರಗಳನ್ನೊಳಗೊಂಡ ಮಾಹಿತಿಯನ್ನು ಬಿಳಿ ಹಾಳೆಯಲ್ಲಿ ಬರೆದು ದೂ.ಸಂ.(೮೭೬೨೫೨೯೬೭೬) ವಾಟ್ಸ್ಅಪ್/ ಚಿಜಥಿssಞoಜಚಿgu@ gmಚಿiಟ.ಛಿomಗೆ ಇ-ಮೇಲ್ ಮಾಡಬೇಕು. ಅಥವಾ ಕಚೇರಿ ದೂ.ಸಂ. ೦೮೨೭೨-೨೨೮೯೮೫ ಗೆ ಕರೆ ಮಾಡಿ ತಾ. ೨೫ ರೊಳಗೆ ನೋಂದಾವಣೆ ಮಾಡಿಕೊಳ್ಳಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.