ಕೂಡಿಗೆ, ಜೂ. ೧೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ರಾಜರುಗಳು ಆಳ್ವಿಕೆ ನಡೆಸುವ ಸಂದರ್ಭದಲ್ಲಿ ಹುದುಗೂರು ಗ್ರಾಮದಲ್ಲಿ ಕಾಡಾನೆಗಳನ್ನು ಸೆರೆಹಿಡಿದು ಪಳಗಿಸುವ ಕೇಂದ್ರವೊAದು ಇತ್ತು.

ಕಾಡಾನೆಗಳಿಗೆ ಮತ್ತು ಸಾಕಾನೆಗಳಿಗೆ ಆಹಾರ ಪದಾರ್ಥಗಳನ್ನು ನೀಡುವ ಉದ್ದೇಶದಿಂದ ಬೃಹತ್ ಮರದ ಪೆಟ್ಟಿಗೆಗಳನ್ನು ಮಾಡಿಕೊಂಡು ಬಳಸಲಾಗುತಿತ್ತು. ಆದರೆ, ಇವುಗಳನ್ನು ಇದೀಗ ಉಪಯೋಗಿಸದ ಹಿನ್ನೆಲೆ ಆಹಾರ ಪೆಟ್ಟಿಗೆಗಳು ಗೆದ್ದಲು ಹಿಡಿದು ಹಾಳಾಗಿವೆ.

ಅಂದಿನ ಕಾಲದಲ್ಲಿ ಹೆಚ್ಚು ಮಳೆಯಿಂದಾಗಿ ಪದಾರ್ಥಗಳು ಹಾಳಾಗುತ್ತವೆ ಎಂಬ ನಿಟ್ಟಿನಲ್ಲಿ ಬೃಹತ್ ಮರದ ಪೆಟ್ಟಿಗೆಗಳನ್ನು ಮಾಡಿ ಆನೆಗಳಿಗೆ ದಿನನಿತ್ಯ ಬೇಕಾಗಿರುವ ನೂರಾರು ಮೂಟೆ ಬೆಲ್ಲ, ರಾಗಿ, ಭತ್ತ ಇವುಗಳನ್ನು ಈ ಪೆಟ್ಟಿಗೆಗೆ ಸುರಿದು ಸಂಗ್ರಹ ಮಾಡಲಾಗುತಿತ್ತು. ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ಈ ಪೆಟ್ಟ್ಟಿಗೆಯಿಂದ ತೆಗೆದು ಆಹಾರವನ್ನು ತಯಾರಿಸಿ ಆನೆಗಳಿಗೆ ಕೊಡಲಾಗುತಿತ್ತು ಎಂದು ಗ್ರಾಮದ ಹಿರಿಯರಾದ ಮಾಚಯ್ಯ ತಿಳಿಸಿದರು.

ಬ್ರಿಟಿಷ್ ಸರ್ಕಾರ ನಂತರದ ದಿನಗಳಲ್ಲಿ ರಾಜರ ಆಳ್ವಿಕೆಯ ಕಾಲದಲ್ಲಿ ಹುದುಗೂರು ವ್ಯಾಪ್ತಿಯ ಹಳೆ ಹಾರಂಗಿ, ಐಗೂರು, ಯಡವನಾಡು, ಸೀಗೆಹೊಸೂರು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಕಾಟ ಈ ಭಾಗದಲ್ಲಿ ಹೆಚ್ಚಾಗುತ್ತಿದೆ ಎಂಬುದಾಗಿ ತಿಳಿದು ಈ ಭಾಗದ ಕಾಡಾನೆಗಳನ್ನು ಖೆಡ್ಡಾಕ್ಕೆ ಬೀಳಿಸಿ ನಂತರ ಸಾಕಾನೆಗಳ ಮೂಲಕ ಹುದುಗೂರು ಆನೆ ತರಬೇತಿ ಕೇಂದ್ರಕ್ಕೆ ತಂದು ಅವುಗಳನ್ನು ಪಳಗಿಸಲಾಗುತಿತ್ತು.

ಈ ಕೇಂದ್ರದಲ್ಲಿ ಪಳಗಿದ ಐದು ಅನೆಗಳು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿವೆ ಎಂದು ತಿಳಿದುಬಂದಿದೆ. ಈ ಆನೆಗಳು ತಿತಿಮತಿ ಮತ್ತು ದುಬಾರೆಯ ಆನೆ ಶಿಬಿರದಲ್ಲಿ ಇವೆ ಎನ್ನಲಾಗಿದೆ. ಕೊಡಗು ಸರಕಾರದ ಸಮಯದಲ್ಲಿ ಸಹ ಹುದುಗೂರು ಗ್ರಾಮದಲ್ಲಿ ಆನೆ ಶಿಬಿರ ನಡೆಯುತಿತ್ತು. ೧೯೯೦ರಲ್ಲಿ ಕೆಲ ಕಾರಣದಿಂದ ಕೇಂದ್ರ ಸ್ಥಗಿತಗೊಂಡಿತ್ತು.

ಕೇAದ್ರ ಮುಚ್ಚಿದ ಹಿನ್ನೆಲೆ ಬೃಹತ್ ಗಾತ್ರದ ಮರದ ಪೆಟ್ಟಿಗೆಗಳನ್ನು ಉಪಯೋಗಿಸುವ ಕಾರ್ಯಕ್ಕೆ ಅರಣ್ಯ ಇಲಾಖೆಯವರು ಮುಂದಾಗಬೇಕು. ಜೊತೆಗೆ ಸಂರಕ್ಷಣೆ ಮಾಡಬೇಕಾಗಿದೆ.

-ಕೆ.ಕೆ. ನಾಗರಾಜಶೆಟ್ಟಿ