ಶನಿವಾರಸಂತೆ, ಜೂ. ೧೯: ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮ ಕಿರಣ್ ವಹಿಸಿದ್ದರು.

ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿರುವುದರಿಂದ ಅಗತ್ಯ ಕ್ರಮಗಳ ಬಗ್ಗೆ ಸದಸ್ಯರುಗಳೊಂದಿಗೆ ಚರ್ಚಿಸಿದರು. ಈ ವರ್ಷದ ಮಳೆಯಿಂದ ಹಾನಿಯಾಗದಂತೆ ಮುಂಜಾಗ್ರತೆ ವಹಿಸಬೇಕೆಂದು ಪಂಚಾಯಿತಿ ಸಿಬ್ಬಂದಿಗೆ ಸೂಚಿಸಿದರು.

ಪಂಚಾಯಿತಿ ಸದಸ್ಯ ಡಿ.ಪಿ. ಬೋಜಪ್ಪ ಮಾತನಾಡಿ, ನೀರು ನಿರ್ವಾಹಕರು ನೀರು ನಿರ್ವಹಣೆ ಬಗ್ಗೆ ನಿಗಾವಹಿಸಬೇಕು. ಪಂಚಾಯಿತಿಯ ಯಾವುದೇ ಗ್ರಾಮಗಳಲ್ಲಿ ಬೀದಿದೀಪ ಅಳವಡಿಸುವಾಗ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡುವಂತೆ ತಿಳಿಸಿದರು. ಸದಸ್ಯ ಸಿ.ಜೆ. ಗಿರೀಶ್ ಮಾತನಾಡಿ, ಮಳೆಗಾಲದಲ್ಲಿ ನೀರು ಸಾರ್ವಜನಿಕ ರಸ್ತೆಯಲ್ಲಿ ಹರಿದು ಬರುತ್ತಿದ್ದು, ಕೆಲವು ಚರಂಡಿ ಕೆಲಸಗಳನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡಿಸಬೇಕೆಂದರು.

ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಎಸ್.ಸಿ. ನಿತಿನ್, ಸದಸ್ಯರುಗಳಾದ ಕೆ.ಎಸ್. ಜಾನಕಿ, ನಂದಿನಿ ನಾಗರತ್ನ, ಎಸ್.ಪಿ. ಭಾಗ್ಯ, ಪಿ.ಹೆಚ್. ಗೋಪಿಕಾ, ಸತ್ಯವತಿ, ಹೆಚ್.ಆರ್. ಭವಾನಿ, ಎಸ್.ಸಿ. ಕಾಂತರಾಜ್, ಬಿ.ಎಸ್. ಮಹಂತೇಶ್, ಎಂ.ಡಿ. ದೇವರಾಜ್ ಇದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಪಿ. ವೇಣುಗೋಪಾಲ್ ಸ್ವಾಗತಿಸಿ, ವಂದಿಸಿದರು.