ಮಡಿಕೇರಿ: ಕೋವಿಡ್‌ನಿಂದ ಸಂಕಷ್ಟಕ್ಕೀಡಾದ ಮಲ್ಲಿಕಾರ್ಜುನ ನಗರದ ೨೫ ಕುಟುಂಬಗಳಿಗೆ ದಲಿತ ಸಂಘರ್ಷ ಸಮಿತಿ ಮಡಿಕೇರಿ ತಾಲೂಕು ಘಟಕದಿಂದ ಆಹಾರ ಕಿಟ್‌ಅನ್ನು ವಿತರಿಸಲಾಯಿತು.

ದ.ಸಂ.ಸ. ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ತಾಲೂಕು ಸಂಚಾಲಕ ಎ.ಪಿ. ದೀಪಕ್, ದ.ಸಂ.ಸ. ನಗರ ಸಂಚಾಲಕ ಸಿದ್ದೇಶ್ವರ್, ಸಮಾಜಸೇವಕರಾದ ವಿನ್ಸೆಂಟ್ ಹಾಗೂ ಸಮೀರ್ ಉಪಸ್ಥಿತರಿದ್ದರು.ಮಡಿಕೇರಿ: ಕೋವಿಡ್‌ನಿಂದ ಸಂಕಷ್ಟಕ್ಕೀಡಾದ ಮಲ್ಲಿಕಾರ್ಜುನ ನಗರದ ೨೫ ಕುಟುಂಬಗಳಿಗೆ ದಲಿತ ಸಂಘರ್ಷ ಸಮಿತಿ ಮಡಿಕೇರಿ ತಾಲೂಕು ಘಟಕದಿಂದ ಆಹಾರ ಕಿಟ್‌ಅನ್ನು ವಿತರಿಸಲಾಯಿತು.

ದ.ಸಂ.ಸ. ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ತಾಲೂಕು ಸಂಚಾಲಕ ಎ.ಪಿ. ದೀಪಕ್, ದ.ಸಂ.ಸ. ನಗರ ಸಂಚಾಲಕ ಸಿದ್ದೇಶ್ವರ್, ಸಮಾಜಸೇವಕರಾದ ವಿನ್ಸೆಂಟ್ ಹಾಗೂ ಸಮೀರ್ ಉಪಸ್ಥಿತರಿದ್ದರು.ಸೋಮವಾರಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ತಾಲೂಕಿನ ಶಾಂತಳ್ಳಿ, ಚೌಡ್ಲು, ಹಾನಗಲ್ಲು, ಬೇಳೂರು, ಕಿರಗಂದೂರು ವ್ಯಾಪ್ತಿಯಲ್ಲಿ ಸೀಲ್‌ಡೌನ್ ಆಗಿರುವ ೮೦ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸೂಚನೆಯಂತೆ ಸೋಮವಾರಪೇಟೆ ತಾಲೂಕಿಗೆ ೨೫೦ ಕಿಟ್‌ಗಳು ಮಂಜೂರಾಗಿದ್ದು, ಯೋಜನಾಧಿಕಾರಿ ಕೆ. ಜಯಂತಿ ಸೇರಿದಂತೆ ಸಿಬ್ಬಂದಿಗಳು ಸೀಲ್‌ಡೌನ್‌ನಿಂದ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಬಡ ಕುಟುಂಬಗಳಿಗೆ ಕಿಟ್‌ಗಳನ್ನು ವಿತರಿಸಿದರು.

ಕೊರೊನಾ ಮಹಾಮಾರಿಯಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕ್ಷೇತ್ರದಿಂದ ಸೌಲಭ್ಯ ಒದಗಿಸುವಂತೆ ಮಾಡಿದ ಮನವಿಗೆ ವೀರೇಂದ್ರ ಹೆಗ್ಗಡೆಯವರು ಸ್ಪಂದಿಸಿ ತಕ್ಷಣಕ್ಕೆ ಕಿಟ್‌ಗಳನ್ನು ಒದಗಿಸಿದ್ದಾರೆ.

ಕಿಟ್ ವಿತರಣೆ ಸಂದರ್ಭ ಹಾನಗಲ್ಲು ಗ್ರಾ.ಪಂ. ಅಧ್ಯಕ್ಷೆ ಲಕ್ಷಿö್ಮÃ ಪಾಂಡಿಯನ್, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಪದ್ಮ, ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿಗಳಾದ ವಿದ್ಯಾ, ಬಿಂದು ಅವರುಗಳು ಉಪಸ್ಥಿತರಿದ್ದರು.ಪೊನ್ನಂಪೇಟೆ: ಕಿರುಗೂರು ಗ್ರಾಮದ ಬಿ.ಜೆ.ಪಿ. ಯುವ ಮೋರ್ಚಾ ವತಿಯಿಂದ ಕಿರುಗೂರು ಹಾಗೂ ಹೊನ್ನಿಕೊಪ್ಪ ಭಾಗಗಳಲ್ಲಿ ಕೊರೊನಾದಿಂದ ಸೀಲ್‌ಡೌನ್ ಆಗಿರುವ ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಅಲ್ಲುಮಾಡ ಅಭಿಷೇಕ್, ಆಲೆಮಾಡ ಸ್ವಾಗತ್ ಚರ್ಮಣ, ಕೊರಕುಟ್ಟಿರ ಅಭಿಷೇಕ್ ಚಿಣ್ಣಪ್ಪ, ಚಾರಿಮಂಡ ನಿತಿನ್, ಚೂರೀರ ದಿಲೀಪ್ ದೇವಯ್ಯ, ಕೋದೆಂಗಡ ದಿಲ್ ಗಣಪತಿ, ಚಿರಿಯಪ್ಪಂಡ ಅನುದೀಪ್ ಅಪ್ಪಣ್ಣ, ಚಿರಿಯಪಂಡ ಪ್ರಶು ಪೆಮ್ಮಯ್ಯ, ಸಂತೋಷ್, ಸುದರ್ಶನ್ ಹಾಗೂ ಪ್ರಸಾದ್ ಇವರುಗಳು ಸಹಕಾರದಿಂದ, ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ ಚಿರಿಯಪ್ಪಂಡ ದೀಪಕ್ ಸುಬ್ಬಯ್ಯ ಹಾಗೂ ಕಿರುಗೂರು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ವತ್ ಅವರ ನೇತೃತ್ವದಲ್ಲಿ ಕಿಟ್ ವಿತರಣೆ ಮಾಡಲಾಯಿತು.ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ರಿಫಾರ್ಮ್ ಕ್ಲಬ್‌ನ ಆಡಳಿತ ಮಂಡಳಿಯು ಕೋವಿಡ್ ಸಮಸ್ಯೆಯಲ್ಲಿ ಫ್ರಂಟ್‌ಲೈನ್ ವರ್ಕರ್ಸ್ ಆಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆ್ಯಂಬ್ಯುಲೆನ್ಸ್ ಚಾಲಕರು, ಪೌರಕಾರ್ಮಿಕರು ಹಾಗೂ ಪತ್ರಕರ್ತರಿಗೆ ಕ್ಲಬ್‌ನ ಸಭಾಂಗಣದಲ್ಲಿ ಅಧ್ಯಕ್ಷ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ೭೦ ಆಹಾರ ಕಿಟ್‌ಗಳನ್ನು ವಿತರಿಸಿತು.

ಈ ವೇಳೆ ಅಸೋಸಿಯೇಷನ್ ಉಪಾಧ್ಯಕ್ಷ ಎಂ.ಪಿ. ಸೋಮಯ್ಯ, ಕಾರ್ಯದರ್ಶಿ ಪಿ.ಎಂ. ನರೇಂದ್ರ, ಖಜಾಂಚಿ ಸಿ.ಎಸ್. ಗಣಪತಿ, ನಿರ್ದೇಶಕರಾದ ಬಾಲಕೃಷ್ಣ, ಪೊನ್ನಪ್ಪ, ಕರುಂಬಯ್ಯ, ಬೋಪಣ್ಣ, ದಿಲೀಪ್ ಬೋಪಣ್ಣ, ಸಮಿತಿ ಸದಸ್ಯರಾದ ಮುತ್ತಪ್ಪ, ಬೋಪಯ್ಯ, ಗಣಪತಿ, ಉಮೇಶ್, ಕೆ.ಯು. ಬೋಪಣ್ಣ ಸೇರಿದಂತೆ ಕ್ಲಬ್‌ನ ವ್ಯವಸ್ಥಾಪಕ ಶ್ರೀನಿವಾಸ್ ಉಪಸ್ಥಿತರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಬಡ ಕುಟುಂಬಗಳಿಗೆ ೫ ದಿನಸಿ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ನಾಗೇಶ್ ಪೂಜಾರಿ, ಗೌರವಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ, ಕಾರ್ಯದರ್ಶಿ ಸಂತೋಷ್, ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ, ಸಲಹೆಗಾರರಾದ ಅಶೋಕ್, ಕ್ಲೆöÊಮಂಟ್ ಡಿಸೋಜ ಮತ್ತಿತರರು ಹಾಜರಿದ್ದರು.ಗೋಣಿಕೊಪ್ಪ ವರದಿ: ಪಾಲಿಬೆಟ್ಟ ಚೆಷೈರ್ ಹೋಂ ವಿಶೇಷಚೇತನ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಿಂದ ಅಗತ್ಯ ಆಹಾರ ಕಿಟ್ ವಿತರಣೆ ವೀರಾಜಪೇಟೆ ತಾಲೂಕು ಕಚೇರಿ ಆವರಣದಲ್ಲಿ ನಡೆಯಿತು.

ತಹಶೀಲ್ದಾರ್ ಯೋಗಾನಂದ, ಹಿರಿಯ ವೈದ್ಯ ಡಾ. ಫಾತಿಮಾ ಕಾರ್ಯಪ್ಪ, ನರೇಶ್, ಪಾಲಿಬೆಟ್ಟ ಚೆಷೈರ್ ಹೋಂ ಅಂಗವಿಕಲ ಮಕ್ಕಳ ಶಾಲೆ ಆಡಳಿತ ಮಂಡಳಿ ಅಧ್ಯಕ್ಷೆ ಗೀತಾ ಚೆಂಗಪ್ಪ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಮುಖ್ಯ ಶಿಕ್ಷಕ ಶಿವರಾಜ್ ವಿತರಣೆ ಮಾಡಿದರು.ಜಾಗೃತಿ ಟ್ರಸ್ಟ್

ನಾಪೋಕ್ಲು: ಪೇರೂರು ಗ್ರಾಮದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಶಿವಪ್ರಸಾದ್ ದಂಪತಿಗಳು ಜಾಗೃತಿ ಟ್ರಸ್ಟ್ನ ಸಹಯೋಗದೊಂದಿಗೆ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಬಳಲಿರುವ ಕುಟುಂಬಕ್ಕೆ ಆಹಾರ ಕಿಟ್ ಮತ್ತು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋವಿಡ್ ಟಾಸ್ಕ್ಫೋರ್ಸ್ಗೆ ಥರ್ಮಲ್ ಸ್ಕಾö್ಯನರ್, ಆಕ್ಸಿಮೀಟರ್, ಫೇಸ್‌ಶೀಲ್ಡ್, ಗ್ಲೌಸ್, ಮಾಸ್ಕ್ ಸೇರಿದಂತೆ ಸುಮಾರು ರೂ. ೨೫ ಸಾವಿರ ಮೌಲ್ಯದ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಸುಂಟಿಕೊಪ್ಪ: ಸುಂಟಿಕೊಪ್ಪ ಗಣೇಶ್ ಚಿತ್ರಮಂದಿರದ ಮಾಲೀಕ ಗಣೇಶ್ ಅವರು ಕೊರೊನಾ ಸೊಂಕಿತರಿಗೆ ಹಾಗೂ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು. ೧೩ ಕಿಟ್‌ಗಳನ್ನು ಪಂಚಾಯಿತಿ ಸದಸ್ಯ ಮಂಜುನಾಥ್ ಅವರ ಮುಖಾಂತರ ನೀಡಿದರು.ವೀರಾಜಪೇಟೆ: ವೀರಾಜಪೇಟೆ ಸುಂಕದಕಟ್ಟೆಯ ಸಮುದಾಯ ಭವನದಲ್ಲಿ ಕೊರೊನಾ ಸಂಕಷ್ಟದಲ್ಲಿ ಇರುವ ೩೦ ಮಂದಿಗೆ ಸಮಾಜ ಸೇವಕರಾದ ವಿಷ್ಣು ಮತ್ತು ಬೋಪಣ್ಣ ಆಹಾರ ಕಿಟ್ ವಿತರಣೆ ಮಾಡಿದರು.

ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್, ಕ.ರ.ವೇ. ಆಟೋ ಚಾಲಕರ ಸಂಘದ ಅಧ್ಯಕ್ಷ ಸತೀಶ್, ಅರುಣ್ ಹಾಜರಿದ್ದರು.*ಗೋಣಿಕೊಪ್ಪ: ರಾಜ್ಯ ಜಾಂಭವ ಯುವ ಸೇನೆ ವತಿಯಿಂದ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಚೂಣಿ ಕಾರ್ಯಕರ್ತರು ಹಾಗೂ ಕಾಲೋನಿ ನಿವಾಸಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.

ಜಾಂಭವ ಯುವ ಸೇನೆಯ ರಾಜ್ಯಾಧ್ಯಕ್ಷ ಡಾ. ರಮೇಶ್ ಚಕ್ರವರ್ತಿ ಅವರ ಸಹಕಾರದೊಂದಿಗೆ ಜಿಲ್ಲಾ ಜಾಂಭವ ಯುವ ಸೇನೆಯ ಅಧ್ಯಕ್ಷ ಸತೀಶ್‌ಸಿಂಗಿ ನೇತೃತ್ವದಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಕಿಟ್‌ಗಳ ವಿತರಣೆ ನಡೆಯಿತು.

ರಾಜ್ಯದ ಪ್ರತಿ ಜಿಲ್ಲೆಗಳಿಗೂ ಸಂಚಾರ ಬೆಳೆಸಿ ಸಂಕಷ್ಟದಲ್ಲಿರುವವರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಾಗಿ ಕೊರೊನಾ ವಿರುದ್ಧ ಸೇವೆ ನೀಡುತ್ತಿರುವ ಆಶಾ ಕಾರ್ಯಕರ್ತರು, ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳನ್ನು ಕಳೆದ ಎರಡು ತಿಂಗಳಿನಿAದ ನಿರಂತರವಾಗಿ ಜಾಂಭವ ಯುವ ಸೇನೆ ನೀಡುತ್ತಿದೆ.

ಅದರಂತೆ ಕೊಡಗಿನಲ್ಲಿಯೂ ಸೇವೆ ಸಲ್ಲಿಸಬೇಕು ಎಂಬ ಮನೋಇಚ್ಚೆಯಿಂದ ಕೊಡಗು ಜಿಲ್ಲಾ ಜಾಂಭವ ಯುವ ಸೇನೆಯ ಸಹಕಾರದೊಂದಿಗೆ ಚೆನ್ನಯ್ಯನಕೋಟೆ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಆಹಾರ ಕಿಟ್ ವಿತರಿಸುವ ಕಾರ್ಯ ಕೈಗೊಂಡಿರುವುದಾಗಿ ರಮೇಶ್ ಚಕ್ರವರ್ತಿ ಹೇಳಿದರು.

ಜಾಂಭವ ಯುವ ಸೇನೆಯ ಜಿಲ್ಲಾಧ್ಯಕ್ಷ ಸತೀಶ್‌ಸಿಂಗಿ, ರಾಜ್ಯ ಸಮಿತಿ ಸದಸ್ಯ ಶ್ರೀಕಾಂತ್, ಪ್ರಮೋದ್, ಹರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಹೇಶ್, ತಾಲೂಕು ಕಾರ್ಯದರ್ಶಿ ಹೆಚ್.ಎಸ್. ರಾಜೇಶ್, ಚೆನ್ನಯ್ಯನಕೋಟೆ ತಾಲೂಕು ಅಧ್ಯಕ್ಷ ಪವಿತ್ರ, ಗ್ರಾ.ಪಂ. ಸದಸ್ಯರುಗಳಾದ ಶಿಲ್ಪ, ಶೀಲಾ, ಗಣೇಶ, ವಿಜಯ, ಪ್ರಭಾರ ಪಿ.ಡಿ.ಓ. ಪ್ರಕಾಶ್ ಸೇರಿದಂತೆ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.*ಗೋಣಿಕೊಪ್ಪ: ರಾಜ್ಯ ಜಾಂಭವ ಯುವ ಸೇನೆ ವತಿಯಿಂದ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಚೂಣಿ ಕಾರ್ಯಕರ್ತರು ಹಾಗೂ ಕಾಲೋನಿ ನಿವಾಸಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.

ಜಾಂಭವ ಯುವ ಸೇನೆಯ ರಾಜ್ಯಾಧ್ಯಕ್ಷ ಡಾ. ರಮೇಶ್ ಚಕ್ರವರ್ತಿ ಅವರ ಸಹಕಾರದೊಂದಿಗೆ ಜಿಲ್ಲಾ ಜಾಂಭವ ಯುವ ಸೇನೆಯ ಅಧ್ಯಕ್ಷ ಸತೀಶ್‌ಸಿಂಗಿ ನೇತೃತ್ವದಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಕಿಟ್‌ಗಳ ವಿತರಣೆ ನಡೆಯಿತು.

ರಾಜ್ಯದ ಪ್ರತಿ ಜಿಲ್ಲೆಗಳಿಗೂ ಸಂಚಾರ ಬೆಳೆಸಿ ಸಂಕಷ್ಟದಲ್ಲಿರುವವರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಾಗಿ ಕೊರೊನಾ ವಿರುದ್ಧ ಸೇವೆ ನೀಡುತ್ತಿರುವ ಆಶಾ ಕಾರ್ಯಕರ್ತರು, ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳನ್ನು ಕಳೆದ ಎರಡು ತಿಂಗಳಿನಿAದ ನಿರಂತರವಾಗಿ ಜಾಂಭವ ಯುವ ಸೇನೆ ನೀಡುತ್ತಿದೆ.

ಅದರಂತೆ ಕೊಡಗಿನಲ್ಲಿಯೂ ಸೇವೆ ಸಲ್ಲಿಸಬೇಕು ಎಂಬ ಮನೋಇಚ್ಚೆಯಿಂದ ಕೊಡಗು ಜಿಲ್ಲಾ ಜಾಂಭವ ಯುವ ಸೇನೆಯ ಸಹಕಾರದೊಂದಿಗೆ ಚೆನ್ನಯ್ಯನಕೋಟೆ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಆಹಾರ ಕಿಟ್ ವಿತರಿಸುವ ಕಾರ್ಯ ಕೈಗೊಂಡಿರುವುದಾಗಿ ರಮೇಶ್ ಚಕ್ರವರ್ತಿ ಹೇಳಿದರು.

ಜಾಂಭವ ಯುವ ಸೇನೆಯ ಜಿಲ್ಲಾಧ್ಯಕ್ಷ ಸತೀಶ್‌ಸಿಂಗಿ, ರಾಜ್ಯ ಸಮಿತಿ ಸದಸ್ಯ ಶ್ರೀಕಾಂತ್, ಪ್ರಮೋದ್, ಹರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಹೇಶ್, ತಾಲೂಕು ಕಾರ್ಯದರ್ಶಿ ಹೆಚ್.ಎಸ್. ರಾಜೇಶ್, ಚೆನ್ನಯ್ಯನಕೋಟೆ ತಾಲೂಕು ಅಧ್ಯಕ್ಷ ಪವಿತ್ರ, ಗ್ರಾ.ಪಂ. ಸದಸ್ಯರುಗಳಾದ ಶಿಲ್ಪ, ಶೀಲಾ, ಗಣೇಶ, ವಿಜಯ, ಪ್ರಭಾರ ಪಿ.ಡಿ.ಓ. ಪ್ರಕಾಶ್ ಸೇರಿದಂತೆ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.ಪೊನ್ನಂಪೇಟೆ: ಕೋವಿಡ್ ಕಾಲದಲ್ಲಿ ಸಂಕಷ್ಟ ಎದುರಿಸುತ್ತಿರುವ ವಿಶೇಷಚೇತನರಿಗೆ ಮತ್ತು ಅವರ ಕುಟುಂಬದವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ಪ್ರಾಯೋಜಿಸಿರುವ ೪ ಜನರಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ಗಳನ್ನು ಕಾನೂರು ಸಮೀಪದ ಕೋತೂರು ಮತ್ತು ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ವಿಶೇಷಚೇತನರಿಗೆ ಕಾಂಗ್ರೆಸ್ ಪ್ರಮುಖರ ತಂಡ ಅವರ ಮನೆಗಳಿಗೆ ಭೇಟಿ ನೀಡಿ ಹಸ್ತಾಂತರಿಸಿತು.

ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಅಜ್ಜಿಕುಟ್ಟೀರ ಎಸ್. ನರೇನ್ ಕಾರ್ಯಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೀದೆರಿರ ನವೀನ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ಯು, ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಕೋತೂರಿನ ಕುಂಜ್ಹಿಮಾಡ ರಮೇಶ್, ಅಜ್ಜಿಕುಟ್ಟೀರ ಪ್ರಶಾಂತ್ ಮೊದಲಾದವರು ಹಾಜರಿದ್ದರು.