ಬೆಂಗಳೂರು, ಜೂ.೧೯: ‘ಫ್ಲೆöÊಯಿಂಗ್ ಸಿಖ್’ ಎಂದೇ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಒಲಂಪಿಕ್ ಕ್ರೀಡಾಪಟು ಕ್ಯಾಪ್ಟನ್ ಮಿಲ್ಕಾ ಸಿಂಗ್ (೯೧) ಅವರು ಚಂಡೀಗಡದ ‘PಉIಒಇಖ’ ಆಸ್ಪತ್ರೆಯಲ್ಲಿ ತಾ.೧೮ ರ ರಾತ್ರಿ ನಿಧನರಾದರು. ಮೇ ೧೯ ರಂದು ಕೋವಿಡ್ ದೃಢಪಟ್ಟ ಇವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲದೇ ಇದ್ದ ಕಾರಣ ಚಂಡೀಗಡದ ತಮ್ಮ ನಿವಾಸದಲ್ಲಿ ‘ಹೋಮ್ ಐಸೋಲೇಷನ್’ನಲ್ಲಿದ್ದರು. ಮೇ ೨೪ ರಂದು ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು. ಐ.ಸಿ.ಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ತಾ.೧೮ ರ ರಾತ್ರಿ ೧೧:೩೦ ಕ್ಕೆ ನಿಧನರಾದರು. ೫ ದಿನಗಳ ಹಿಂದಷ್ಟೇ ಇವರ ಪತ್ನಿ ನಿರ್ಮಲ್ ಅವರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದರು.

ಏಷಿಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ನ ಇವೆರಡರಲ್ಲೂ ೪೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆದ ಏಕೈಕ ವ್ಯಕ್ತಿ ಇವರಾಗಿದ್ದರು. ೧೯೫೬, ೧೯೬೦, ೧೯೬೪ ನ ಒಲಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.