“ನಮ್ಮ ಸಂಸ್ಥೆಯ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ‘ಲಕ್ಕಿ ಡ್ರಾ’ನಲ್ಲಿ ನೀವು ಆಯ್ಕೆಯಾಗಿದ್ದು, ಅದೃಷ್ಟವಂತ ಕೆಲವು ಗ್ರಾಹಕರ ಪೈಕಿ ನೀವೂ ಒಬ್ಬರಾಗಿದ್ದೀರ.”
“ನಮ್ಮ ಸಂಸ್ಥೆಯ ಹುಟ್ಟುಹಬ್ಬದ ಪ್ರಯುಕ್ತ ನಿಮ್ಮನ್ನು ಆಯ್ಕೆ ಮಾಡಲಾಗಿದ್ದು ಸ್ವಿಫ್ಟ್ ಡಿಸೈರ್ ಕಾರಿನೊಂದಿಗೆ ೯ ಲಕ್ಷದಷ್ಟು ನಗದು ನಿಮ್ಮದಾಗಲಿದೆ”
ಕೋವಿಡ್ನಿಂದ ಬಹಳಷ್ಟು ಮಂದಿ ಆರ್ಥಿಕ ಸಂಕಷ್ಟಕ್ಕೊಳಗಾಗಿ ನಲುಗುತ್ತಿರುವ ಸಮಯವನ್ನೇ ದುರುಪಯೋಗ ಪಡೆಸಿಕೊಂಡು ಹಲವು ಪ್ರಮುಖ ಸಂಘ-ಸAಸ್ಥೆಗಳ ಹೆಸರಿನಲ್ಲಿ ಸೈಬರ್ ಕಳ್ಳರು ಕಳುಹಿಸುವ ಸಂದೇಶಗಳಿವು.
ಇದು ಮೊಬೈಲ್ ಸಂದೇಶವಲ್ಲ, ಇ-ಮೇಲ್ ಸಂದೇಶವಲ್ಲ. ನೇರವಾಗಿ ನಿಮ್ಮ ಮನೆಯ ವಿಳಾಸಕ್ಕೆ ಅಂಚೆ ಮೂಲಕ ಬರುವ ಪತ್ರದಲ್ಲಿನ ಸಂದೇಶ. ಆದ ಕಾರಣ ಇದು ಅಧಿಕೃತ ಸಂಸ್ಥೆಯಿAದಲೇ ಬಂದಿರುವುದಾಗಿ ಹಲವರು ನಂಬುತ್ತಾರೆ.
ಪ್ರತಿದಿನ ಹುಟ್ಟುಹಬ್ಬ ಆಚರಿಸುವ ಇಂತಹ ಸಂಸ್ಥೆಗಳ ಹೆಸರನ್ನು ಬಳಸುವ ಕಳ್ಳರಿಗೆ ಪ್ರತಿಯೊಬ್ಬರೂ ಅದೃಷ್ಟವಂತರೆ. ಸಾರ್ವಜನಿಕರು ಟಿ.ವಿ. ನೋಡುವಾಗ ಮೊದಲು ಪ್ರಸಾರವಾಗುವ ಚ್ಯಾನಲ್ ‘ನ್ಯಾಪ್ಟಾಲ್’. ಇದರ ಹೆಸರಿನಲ್ಲಿಯೇ ಕಳ್ಳರು ನಿಮ್ಮ ವಿಳಾಸ, ಫೋನ್ ಸಂಖ್ಯೆ ಎಲ್ಲವನ್ನು ನಮೂದಿಸಿ ಅವರ ಫೋನ್ ಸಂಖ್ಯೆಯೂ ನೀಡಿ ಬಹಳ ಅಧಿಕೃತವೆಂದೇ ಸಾರ್ವಜನಿಕರನ್ನು ಮೋಸ ಮಾಡುವ ಜಾಲವೊಂದನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗಷ್ಟೆ ಮುಂಬೈನಲ್ಲಿ ಓರ್ವರು ಇದೇ ಮೋಸದ ಜಾಲಕ್ಕೆ ರೂ. ೫ ಲಕ್ಷ ಹಣ ಕಳೆದುಕೊಂಡರು. ಈಗ ಈ ಮೋಸದ ಜಾಲ ಕೊಡಗಿಗೂ ಕಾಲಿಟ್ಟಿದೆ.
ಈ ಕಳ್ಳರು ನಿಮ್ಮ ವಿಳಾಸಕ್ಕೆ ತಲುಪಿಸುವ ಪತ್ರದೊಡನೆ ‘ಸ್ಕಾçö್ಯಚ್ ಕಾರ್ಡ್’ವೊಂದನ್ನು ಕೂಡ ನೀಡುತ್ತಾರೆ. ಇದನ್ನು ‘ಸ್ಕಾçö್ಯಚ್’ ಮಾಡಿದೊಡನೆ ಕನಿಷ್ಟವೆಂದರೆ ಬಂಪರ್ ರೂ. ೬ ಲಕ್ಷದಷ್ಟು ಹಣ ಗೆದ್ದಿರುವ ಸಂದೇಶ ಕಾಣುತ್ತದೆ. ಒಮ್ಮೊಮ್ಮೆ ರೂ. ೧೨ ಲಕ್ಷವೂ ದೊರೆತುಬಿಡುತ್ತದೆ. ಇನ್ನೂ ಅದೃಷ್ಟವಂತರು ಸ್ವಿಫ್ಟ್ ಡಿಸೈರ್ ಕಾರಿನೊಂದಿಗೆ ೯ ಲಕ್ಷದಷ್ಟು ನಗದನ್ನು ಕೂಡ ಗೆದ್ದುಬಿಡುತ್ತಾರೆ.
ಈ ಹಣ, ಕಾರು ನಿಮಗೆ ದೊರಕಬೇಕಾದರೆ ನೀವು ಮಾಡಬೇಕಾಗಿರುವುದು ಇಷ್ಟೆ
ನಿಮ್ಮ ಬ್ಯಾಂಕ್ ಖಾತೆ ವಿವರ, ಮೊಬೈಲ್ ಸಂಖ್ಯೆಯನ್ನು ಅವರು ನೀಡಿರುವ ಮೊಬೈಲ್ ಸಂಖ್ಯೆಗೆ ವಾಟ್ಸಾö್ಯಪ್ ಮಾಡಬಹುದು. ಇಲ್ಲದಿದ್ದರೆ ಇ-ಮೇಲ್ ಕೂಡ ಮಾಡಬಹುದು. ಇಲ್ಲಿಗೆ ನಿಮಗೆ ನಗದು ಸಂದಾನವಾಗುವ ಸಂಬAಧ ಬಹುತೇಕ ಶೇ. ೯೦ ರಷ್ಟು ಕೆಲಸ ಪೂರ್ಣಗೊಂಡಿರುತ್ತದೆ.
ಇನ್ನು ಉಳಿದಿರುವುದು ಇಷ್ಟೆ: ಕೇಂದ್ರ, ರಾಜ್ಯ ಸರಕಾರ ಹೇರುವ ಸಣ್ಣ ಪ್ರಮಾಣದ ತೆರಿಗೆ ಹಾಗೂ ನಿಮ್ಮ ಖಾತೆಗೆ ಹಣ ಬರಲು ಅಗತ್ಯವಿರುವ ‘ಪ್ರಾಸಸಿಂಗ್ ಫೀ’. ಈ ಫೀಸ್ಅನ್ನು ಅವರು ನೀಡಿರುವ ಖಾತೆಗೆ ನೀವು ಹಂತಹAತದಲ್ಲಿ ಜಮಾಯಿಸಬೇಕು. ರೂ. ೬ ಲಕ್ಷ ಬಹುಮಾನ ಎಂದರೆ ಹಂತ-ಹAತವಾಗಿ ಸುಮಾರು ರೂ. ೩ ಲಕ್ಷದಷ್ಟಾದರೂ ನೀವು ಕರ್ಚು ಮಾಡಬೇಕು. ಈ ಎಲ್ಲಾ ಕರ್ಚು ಬಹುಮಾನದೊಂದಿಗೆ ನಿಮಗೆ ವಾಪಸ್ಸಾಗುವ ಭರವಸೆಯಲ್ಲಿ ನೀವು ಹಣ ಕಳುಹಿಸುತ್ತೀರ. ಇದಾದ ಬಳಿಕ ಅವರುಗಳು ಸಂಪರ್ಕಕ್ಕೆ ನೀಡಿರುವ ಫೋನ್ ಸಂಖ್ಯೆ ಶಾಶ್ವತವಾಗಿ ‘ಸ್ವಿಚ್ ಆಫ್’ ಆಗುತ್ತದೆ. ಸಂಸ್ಥೆಯ ಅಧಿಕೃತ ಫೋನ್ ಸಂಖ್ಯೆಯನ್ನು ತಾವು ಎಲ್ಲಿಂದಲೋ ಪಡೆದುಕೊಂಡು ಕರೆ ಮಾಡಿದಾಗ, ಸಂಸ್ಥೆಗೂ ಈ ‘ಲಾಟರಿ ಡಾ’್ರಗೂ ಯಾವುದೇ ಸಂಬAಧವಿಲ್ಲ ಎಂಬ ಸ್ಪಷ್ಟನೆ ನೀಡಿದಾಗಲೇ ತಾವುಗಳು ಮೋಸ ಹೋಗಿರುವುದು ಅರಿವಾಗುತ್ತದೆ. ಸಂಸ್ಥೆಯ ಹೆಸರಿನಲ್ಲಿ ಸೈಬರ್ ಕಳ್ಳರು ಹಗಲು ದರೋಡೆ ನಡೆಸಿಬಿಡುತ್ತಾರೆ.
ನಿಮ್ಮ ಫೋನ್, ವಿಳಾಸ ಸಿಗುವುದಾದರೂ ಹೇಗೆ?
ಈಗಿನ ಇಂಟರ್ನೆಟ್ ಯುಗದಲ್ಲಿ ನಿಮ್ಮ ವಿವರಗಳನ್ನು ಬಚ್ಚಿಡಲು ಅಸಾಧ್ಯ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದೊಡನೆ, ಅದರಲ್ಲಿನ ಯಾವುದಾದರೂ ಆ್ಯಪ್ ಬಳಕೆ ಮಾಡಿದೊಡನೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಿಮ್ಮ ವಿವರಗಳು ಆನ್ಲೈನ್ನಲ್ಲಿ ಶಾಶ್ವತವಾಗಿ ಸೇರಿಕೊಳ್ಳುತ್ತೆ. ಪ್ರತಿಷ್ಠಿತ ಸಂಸ್ಥೆಗಳೂ ಕೂಡ ಈ ‘ಡ್ಯಾಟಾ’ (ಮಾಹಿತಿ) ಮಾರಾಟದಲ್ಲಿ ತೊಡಗಿಸಿಕೊಂಡಿವೆ. ನಿಮ್ಮ ಮಾಹಿತಿಯನ್ನು ಇತರ ಸಂಸ್ಥೆಗಳಿಗೆ ಮಾರಿ ಜಾಹೀರಾತಿಗೋಸ್ಕರ ಸಾರ್ವಜನಿಕರನ್ನು ಗುರಿ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತವೆ. ಆದರೆ ಕೆಲವು ಸಂಸ್ಥೆಗಳು ಇದನ್ನು ಜಾಹೀರಾತಿಗೆ ಬಳಸಿಕೊಳ್ಳದೆ ಈ ರೀತಿಯ ಮೋಸದ ಜಾಲಕ್ಕೆ ಬಳಸಿಕೊಳ್ಳುತ್ತವೆ.
ನೀವು ಆನ್ಲೈನ್ ಲಿಂಕ್ಗಳ ಮೂಲಕ ಎಷ್ಟು ನಕಲಿ ವೆಬ್ಸೈಟ್ಗಳಿಗೆ ಹೋಗುತ್ತೀರೋ, ಅಷ್ಟೇ ಪ್ರಮಾಣದಲ್ಲಿ ನಿಮಗೆ ‘ಲಾಟರಿ’ ಹೊಡೆದಿರುವ ಸಂದೇಶಗಳು ರವಾನಾಗುತ್ತವೆ. ಸ್ಮಾರ್ಟ್ ಫೋನ್ ಇದ್ದರೆ ನಿಮ್ಮ ಮಾಹಿತಿಯನ್ನು ಬಚ್ಚಿಡಲು ಅಸಾಧ್ಯ. ಆದರೆ ನಿಮ್ಮ ಮಾಹಿತಿಗಳನ್ನು ದುರುಪಯೋಗಪಡಿಸಿ ಇಂತಹ ಮೋಸದ ಜಾಲಕ್ಕೆ ಕೈಹಾಕಿರುವ ಕಳ್ಳರಿಂದ ತಾವುಗಳು ಸ್ವಲ್ಪ ತಿಳುವಳಿಕೆ ಬಳಸಿ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ. - ಪ್ರಜ್ವಲ್