ಕೂಡಿಗೆ, ಆ. ೨೪: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದ ಶ್ರೀ ರಾಮಲಿಂಗ ಬನಶಂಕರಿ ನೇಕಾರ ದೇವಾಂಗ ಟ್ರಸ್ಟ್ನ ವತಿಯಿಂದ ದ್ವಿತೀಯ ವರ್ಷದ ನೂಲು ಹುಣ್ಣಿಮೆ ಹಬ್ಬ (ಜನಿವಾರದ ಹಬ್ಬ) ಆಚರಿಸಲಾಯಿತು.
ಹಬ್ಬದ ಅಂಗವಾಗಿ ಗ್ರಾಮದ ದೇವಾಂಗ ಕುಲ ಬಾಂಧವರು ಬನಶಂಕರಿ ಮತ್ತು ಶ್ರೀ ರಾಮಲಿಂಗ ದೇವರ ಕಲಶವನ್ನು ತಂದು ನಂತರ ಚಿಕ್ಕ ಅಳುವಾರದ ಚೌಡೇಶ್ವರಿ ಅಮ್ಮನವರ ದೇವಾಲಯ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿ ವಿಶೇಷವಾದ ಪೂಜೆ ಸಲ್ಲಿಸಲಾಯಿತು. ಪೂಜಾ ಕೈಂಕರ್ಯದಲ್ಲಿ ಮಹಿಳೆಯರು ಸೇರಿದಂತೆ ಗ್ರಾಮದ ದೇವಾಂಗ ಕುಲ ಬಾಂಧವರು ಭಾಗವಹಿಸಿ ಸಾಮೂಹಿಕ ನೂಲು ಧಾರಣೆ ಮಾಡಿಕೊಂಡರು.
ಅಧ್ಯಕ್ಷ ಟಿ.ಆರ್. ಪ್ರೇಮಕುಮಾರ್, ಕಾರ್ಯದರ್ಶಿ ಎ.ಪಿ. ಸುನಿಲ್ ಖಚಾಂಚಿ ಎ.ಆರ್. ಲೋಕೇಶ್ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಭಾಗವಹಿಸಿದ್ದರು.