ಉಷಾಪ್ರೀತಮ್

ವೀರಾಜಪೇಟೆ, ಆ. ೨೪: ಕೊರೊನಾ ಲಾಕ್‌ಡೌನ್ ಹಲವರ ಬದುಕು ಕಸಿದಿರಬಹುದು. ಆದರೆ ಅದೆಷ್ಟೋ ಮಂದಿಯನ್ನು ಕೃಷಿಯತ್ತ ಕರೆದುಕೊಂಡು ಬಂದಿರುವುದAತೂ ಸತ್ಯವೇ. ಅಂತಹದ್ದೇ ಒಂದು ಬದುಕಿನ ದಾರಿಯನ್ನು ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಂಜೀವಿನಿ ಒಕ್ಕೂಟದ ಮಹಿಳೆಯರು ಕಂಡುಕೊAಡಿದ್ದಾರೆ.

ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಸುಮಾರು ಹದಿನೈದು ಸ್ವಸಹಾಯ ಸಂಘಗಳ ಮಹಿಳೆಯರು ಸೇರಿ ಸಂಜೀವಿನಿ ಒಕ್ಕೂಟವನ್ನು ರಚಿಸಿಕೊಂಡಿದ್ದಾರೆ.

(ಮೊದಲ ಪುಟದಿಂದ) ಅದರಲ್ಲಿನ ಎರಡು ಸ್ವಸಹಾಯ ಗುಂಪುಗಳ ಮಹಿಳೆಯರು ಸುತ್ತಮುತ್ತಲಿನ ಗ್ರಾಮದಲ್ಲಿ ಕೃಷಿಮಾಡದೇ ಬಿಟ್ಟ ಗದ್ದೆಯನ್ನು ವಾರಕ್ಕೆ ಖರೀದಿ ಮಾಡಿ ಅದರಲ್ಲಿ ಭತ್ತ ಕೃಷಿ ಮಾಡುವ ಕಾಯಕಕ್ಕೆ ಇಳಿದಿದ್ದಾರೆ. ಪೆರುಂಬಾಡಿ ಎರಡನೇ ಚೆಕ್ ಪೋಸ್ಟ್ ಬಳಿಯಿರುವ ರಾಜಪ್ಪ ಅವರಿಗೆ ಸೇರಿದ ಮೂರು ಎಕರೆ ಗದ್ದೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಯಾವುದೇ ತೆರನಾದ ಕೃಷಿ ಮಾಡದೆ ಹಾಗೆಯೆ ಬಿಡಲಾಗಿತ್ತು. ಆ ಗದ್ದೆಯನ್ನು ಒಕ್ಕೂಟದ ಅಧ್ಯಕ್ಷೆ ಇಂದಿರಾ ಹಾಗೂ ಉಪಕಾರ್ಯದರ್ಶಿ ನಿಶಾ ಅವರು ತಮ್ಮ ಸ್ವಂತ ಹಣವನ್ನು ಬಂಡವಾಳವಾಗಿ ವಿನಿಯೋಗಿಸಿ ಒಕ್ಕೂಟದ ಎರಡು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಕೃಷಿ ಕೆಲಸವನ್ನು ನೀಡುವುದರ ಜೊತೆಗೆ ಸಂಜೀವಿನಿ ಒಕ್ಕೂಟದ ಅಡಿ ಈ ಗದ್ದೆಯಲ್ಲಿ ಸೋಮವಾರ ಹಾಗೂ ಮಂಗಳವಾರದAದು ಭತ್ತ ನಾಟಿ ಕಾಯಕ ನಡೆಸಿದ್ದಾರೆ.

ಈ ಗದ್ದೆ ನಾಟಿಯಲ್ಲಿ ಎಲ್ಲ ಸ್ವಸಹಾಯ ಸಂಘಗಳಿAದ ಒಬ್ಬೊಬ್ಬರು ಮಹಿಳೆಯರು ಪಾಲ್ಗೊಂಡಿದ್ದು, ಅವರಿಗೆ ದಿನದ ಸಂಬಳ ಮತ್ತು ಊಟ ನೀಡಲಾಗಿದೆ. ಅಲ್ಲದೇ ಈ ಕೃಷಿಕಾರ್ಯಕ್ಕೆ ಪುರುಷರು ಸಾಥ್ ನೀಡಿದ್ದು, ಗದ್ದೆ ಹದಮಾಡುವುದು ಅಲ್ಲದೆ ನಾಟಿ ಕಾರ್ಯದಲ್ಲೂ ಸಹಾಯ ಮಾಡಿದ್ದಾರೆ. ಒಕ್ಕೂಟದ ಉಪಕಾರ್ಯದರ್ಶಿ ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿ ನಿಶಾ ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ‘ನಾವು ಸ್ವಂತ ಹಣದಲ್ಲಿ ಮೂವತ್ತು ಸಾವಿರ ರೂಪಾಯಿಯನ್ನು ಇದರಲ್ಲಿ ವಿನಿಯೋಗಿಸಿದ್ದೇವೆ. ಇದರಿಂದ ಬಂದ ಇಳುವರಿಯಲ್ಲಿ ನಾವು ಮಾಡಿರುವ ಖರ್ಚು ಕಳೆದು, ಸ್ವಲ್ಪ ಅಕ್ಕಿಯನ್ನು ಹೆಗ್ಗಳದ ಸ್ನೇಹಭವನಕ್ಕೆ ನೀಡಬೇಕೆಂದುಕೊAಡಿದ್ದೇವೆ. ರಾಜಪ್ಪ ಅವರಿಗೂ ಸ್ವಲ್ಪ ಅಕ್ಕಿ ನೀಡಿ, ಉಳಿದ ಲಾಭದಲ್ಲಿ ಸಂಜೀವಿನಿ ಒಕ್ಕೂಟಕ್ಕೆ ಸಹಾಯವಾಗುವ ರೀತಿಯಲ್ಲಿ ಏನಾದರೂ ಮಾಡಬೇಕೆಂದುಕೊAಡಿದ್ದೇವೆ’ ಎಂದು ಹೇಳಿದರು.

ಸಂಜೀವಿನಿ ಒಕ್ಕೂಟದ ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಕುಮಾರ್ ಅವರು ಈ ಒಕ್ಕೂಟಕ್ಕೆ ಕೃಷಿಯಂತ್ರೋಪಕರಣ ಹಾಗೂ ಟ್ರಾö್ಯಕ್ಟರ್ ವ್ಯವಸ್ಥೆ ಮಾಡಿಕೊಟ್ಟಿದ್ದರಿಂದಾಗಿ, ಒಕ್ಕೂಟದ ಮಹಿಳೆಯರು ತಮ್ಮದೇ ಒಕ್ಕೂಟದ ಟ್ರಾö್ಯಕ್ಟರ್ ಬಳಸಿ ಕೃಷಿ ಚಟುವಟಿಕೆ ನಡೆಸಲು ಸಹಾಯಕವಾಯಿತು ಎನ್ನುವ ಮಾಹಿತಿಯನ್ನು ಅಧ್ಯಕ್ಷೆ ಇಂದಿರಾ ನೀಡಿದರು.

ಈ ರೀತಿ ಮಹಿಳೆಯರೇ ಸ್ವಸಹಾಯ ಸಂಘ ಕಟ್ಟಿಕೊಂಡು ಒಕ್ಕೂಟದ ಅಡಿಯಲ್ಲಿ ಪಾಳು ಬಿದ್ದ ಗದ್ದೆಯಲ್ಲಿ ಭತ್ತದ ನಾಟಿ ಮಾಡಿ, ಒಕ್ಕೂಟಕ್ಕೆ ಅನುಕೂಲವಾಗುವ ಹಾಗೆ ಸಂಘದ ಮಹಿಳೆಯರಿಗೆ ಕೆಲಸ ಮತ್ತು ಸಂಬಳ ಸಿಗುವ ಹಾಗೆ ಮಾಡಿದ ಯೋಜನೆ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ.