ಮಡಿಕೇರಿ: ತಾಲೂಕಿನ ರ್ವತೋಕ್ಲಿನ ಬೇಕೋಟ್ ಮಕ್ಕ ಯುವಕ ಮಂಡಲದ ಸದಸ್ಯರು ರಕ್ಷಾ ಬಂಧನ ಆಚರಿಸಿದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘ ಹಾಗೂ ಬೇಕೋಟ್ ಮಕ್ಕ ಯುವಕ ಮಂಡಲದ ಸದಸ್ಯರಿಂದ ಧ್ವಜನಮನ ಮಾಡಲಾಯಿತು. ಸಂಘದ ಸಂಘಟಕ ಲಿಂಗಪ್ಪ ಪೂಜಾರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೇಕೋಟ್ ಮಕ್ಕ ಯುವಕ ಮಂಡಲ ಅಧ್ಯಕ್ಷ ಸೂರಿ ಕಾಕೇರಿ, ಆರ್ಎಸ್ಎಸ್ ಕಾರ್ಯದರ್ಶಿ ವಿಜಯಕುಮಾರ್ ಹಾಗೂ ಸದಸ್ಯರು ಹಾಜರಿದ್ದರು. ಸೋಮವಾರಪೇಟೆ: ಸಹೋದರತೆಯ ಸಂಕೇತವಾದ ರಕ್ಷಾ ಬಂಧನವನ್ನು ಸೋಮವಾರಪೇಟೆಯಾದ್ಯಂತ ಆಚರಿಸಲಾಯಿತು. ಸಹೋದರ ಸಹೋದರಿಯರು ತಮ್ಮ ಮನೆಗಳಲ್ಲಿ ಪರಸ್ಪರ ರಕ್ಷೆ ಕಟ್ಟಿಕೊಂಡು ರಕ್ಷಾ ಬಂಧನದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ರಾಷ್ಟಿçÃಯ ಸ್ವಯಂಸೇವಕ ಸಂಘದ ವತಿಯಿಂದ ರಕ್ಷಾ ಬಂಧನವನ್ನು ಶಾಖೆಗಳಲ್ಲಿ ಆಚರಿಸಲಾಯಿತು. ಇದರೊಂದಿಗೆ ಶಾಖಾ ವ್ಯಾಪ್ತಿಯ ಮನೆಗಳಿಗೆ ತೆರಳಿ ರಕ್ಷೆಯನ್ನು ಕಟ್ಟಿ ರಕ್ಷಾ ಬಂಧನದ ಶುಭಾಶಯಗಳನ್ನು ಕೋರಲಾಯಿತು.ಜೋಡುಬೀಟಿ: ಜೋಡುಬೀಟಿಯ ನೆಹರು ನಗರದ ಎಸ್.ಸಿ. ಘಟಕದ ಪದಾಧಿಕಾರಿಗಳ ನೇತೃತ್ವದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯೆ ಅಮ್ಮತ್ತೀರ ಆರತಿ ಸುರೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ವಿನಾಯಕ ಸಂಘದ ಅಧ್ಯಕ್ಷ ಅಮ್ಮತ್ತೀರ ಸುರೇಶ್ ಭಾಗವಹಿಸಿದ್ದರು. ನಂತರ ಆರತಿ ಸುರೇಶ್ ಅವರು ದಿನದ ಮಹತ್ವದ ಬಗ್ಗೆ ತಿಳಿಸಿ ಸಿಹಿ ಹಂಚಿದರು.ಗುಡ್ಡೆಹೊಸೂರು: ಕುಶಾಲನಗರದ ಪ್ರಜಾಪಿತ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವ ವಿದ್ಯಾಲಯದ ಶಾಖೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಲ್ಲಿನ ಶಾಖೆಯ ಶಿಕ್ಷಕಿ ಬಿ.ಕೆ. ಲಲಿತಾಮಣಿ ಹಾಗೂ ಸ್ಥಳೀಯರು ಮತ್ತು ಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಶಾಖೆಗೆ ಆಗಮಿಸಿದ ಸರ್ವರಿಗೂ ರಾಕಿ ಕಟ್ಟಿ ಸಿಹಿ ಹಂಚಲಾಯಿತು. ಶಿಕ್ಷಕಿ ಬಿ.ಕೆ. ಲಲಿತಾಮಣಿ ಅವರು ರಕ್ಷಾಬಂಧನ ಹಬ್ಬದ ಮಹತ್ವದ ಬಗ್ಗೆ ತಿಳಿಸಿದರು.
ಕೂಡಿಗೆ: ಕೂಡುಮಂಗಳೂರು ಬಿಜೆಪಿ ಮಹಿಳಾ ಶಕ್ತಿ ಕೇಂದ್ರದ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕೇಂದ್ರದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಸಮಿತಿಯವರು ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಮತ್ತು ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾಕಿ ಕಟ್ಟುವುದರ ಮೂಲಕ ರಕ್ಷಾ ಬಂಧನ ಆಚರಣೆ ಮಾಡಿ ಸಿಹಿ ಹಂಚಿಕೆ ಮಾಡಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆ ಪವಿತ್ರ ಗೌಡ, ಮಾಜಿ ಸದಸ್ಯೆ ಕೆ. ಕನಕ, ಕೂಡುಮಂಗಳೂರು ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷೆ ವೀಣಾ, ಸುಜಾತ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.