ಶ್ರೀಮಂಗಲ, ಆ. ೨೪: ಭೂ ವಿಭಾಗಪತ್ರ ಸಂದರ್ಭ ೧೧ಇ ನಕ್ಷೆ ನೋಂದಣಿ ಮಾಡಲು ೬ ತಿಂಗಳು ಸಮಯಾವಕಾಶ ಇದ್ದು, ಅವಧಿ ಮುಗಿದ ಕಡತಗಳಿಗೆ ಮತ್ತೆ ಸರ್ವೆ ನಂಬರ್ ಒಂದಕ್ಕೆ ರೂ.೧೦೦೦ ಶುಲ್ಕ ವಿಧಿಸುತ್ತಿರುವುದು ಸರಿಯಲ್ಲ, ಕೋವಿಡ್ ಲಾಕ್ಡೌನ್ ಹಿನ್ನೆಲೆ ಕಚೇರಿಯ ಕಾರ್ಯಚಟುವಟಿಕೆ, ಸಾರ್ವಜನಿಕ ಸಂಚಾರ ಸ್ಥಗಿತವಾದ ಹಿನ್ನೆಲೆ ಸಮಯ ವಿಸ್ತರಿಸಿ ಹೆಚ್ಚುವರಿ ಶುಲ್ಕ ವಿಧಿಸದೇ ನೋಂದಣಿಗೆ ಪರಿಗಣಿಸುವಂತೆ ಕೊಡಗು ಬೆಳೆಗಾರ ಒಕ್ಕೂಟದ ನಿಯೋಗದಿಂದ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಮತ್ತು ಭೂ ದಾಖಲೆಗಳ ಉಪನಿರ್ದೇಶಕರಾದ ಶ್ರೀನಿವಾಸ್ ಅವರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಲಾಯಿತು.
ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಅವರ ನೇತೃತ್ವದಲ್ಲಿ ೧೧ ಇ ನಕ್ಷೆ ಮಾಡಲು ಪ್ರತಿ ಸರ್ವೆ ನಂಬರ್ಗೆ ತಲಾ ರೂ. ೧೦೦೦ ಇಲಾಖೆಗೆ ಶುಲ್ಕ ಪಾವತಿಸಲಾಗುತ್ತದೆ. ಅವಧಿ ಮೀರಿದ ಕಡತಗಳಿಗೆ ಮತ್ತೆ ಹೊಸದಾಗಿ ಶುಲ್ಕ ಪಾವತಿಸುವ ಇಲಾಖೆಯ ಕ್ರಮದಿಂದ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ರಿಯಾಯಿತಿ ನೀಡಿ, ಅವಧಿ ಮೀರಿದ ಕಡತಗಳನ್ನು ಈಗಾಗಲೇ ಪಾವತಿಸಿದ ಶುಲ್ಕದೊಂದಿಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮನವಿ ಮಾಡಿದರು. ಅವಧಿ ಮೀರಿದ ಕಡತಗಳಿಗೆ ಮತ್ತೆ ೨ ತಿಂಗಳು ಸಮಯ ವಿಸ್ತರಿಸಿ
(ಮೊದಲ ಪುಟದಿಂದ) ರಿಯಾಯಿತಿ ನೀಡಲಾಗುವುದೆಂದು ಉಪನಿರ್ದೇಶಕರಾದ ಶ್ರೀನಿವಾಸ್ ಅವರು ಭರವಸೆ ನೀಡಿದರು.
ಇದಲ್ಲದೇ, ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿ ಎಸ್. ಸಿದ್ದೇಶ್ ಅವರನ್ನು ಭೇಟಿ ಮಾಡಿದ ನಿಯೋಗ ಬೆಳೆಗಾರರು ಬ್ಯಾಂಕ್ನಿAದ ಸಾಲ ಪಡೆಯುವಾಗ ನೋಂದಣಿ ಕಚೇರಿಯಲ್ಲಿ ಇಬ್ಬರು ಸಾಕ್ಷಿದಾರರನ್ನು ಕೇಳುವುದ್ದಕ್ಕೆ ಆಕ್ಷೇಪಣೆ ಇಲ್ಲ. ಆದರೆ ಸಾಲ ಮುಗಿದ ನಂತರ ಬ್ಯಾಂಕ್ನಿAದಲೇ ನೋಂದಣಿ ರದ್ಧತಿಗೆ ಪತ್ರ ನೀಡಿರುವಾಗ, ರದ್ದತಿ ಸಂದರ್ಭ ಇಬ್ಬರು ಸಾಕ್ಷಿದಾರರನ್ನು ಕೇಳುವ ಕ್ರಮ ಕೈಬಿಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಕಂದಾಯ ಇಲಾಖೆ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ, ಬೆಳೆಗಾರ ಒಕ್ಕೂಟದ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸುವ ಭರವಸೆಯನ್ನು ಅಧಿಕಾರಿ ನೀಡಿದರು.
ಈ ಸಂದರ್ಭ ಒಕ್ಕೂಟದ ಪ್ರ. ಕಾರ್ಯದರ್ಶಿ ಅಣ್ಣೀರ ಹರೀಶ್ಮಾದಪ್ಪ, ಖಜಾಂಚಿ ಮಾಣೀರ ವಿಜಯನಂಜಪ್ಪ, ಸದಸ್ಯರಾದ ಆಶಾಜೇಮ್ಸ್, ಚೇಂದಿರ ಸುಮಿತ ಅಪ್ಪಣ್ಣ, ಕೋಳೆರ ಭಾರತಿ, ಅಚ್ಚೆಯಂಡ ವೇದಿತ್ಮುತ್ತಪ್ಪ ಹಾಜರಿದ್ದರು.