ಗೋಣಿಕೊಪ್ಪ, ಆ. ೨೪: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಬಳಿಯಿರುವ ಸರಕಾರಿ ಅನುದಾನಿತ ಪ್ರೌಢಶಾಲೆಯ ಆವರಣದಲ್ಲಿ ಉದ್ಯಾನವನವನ್ನು ನಿರ್ಮಿಸಿ ಅದನ್ನು ನಿರ್ವಹಣೆ ಮಾಡುವ ಭರವಸೆಯನ್ನು ಅಲ್ಲಿನ ಕಾವೇರಿ ಕೊಡವ ಪೊಮ್ಮಕ್ಕಡ ಕೂಟ ನೀಡಿದೆ.
ಇಂದು ಶಾಲಾ ಆವರಣದಲ್ಲಿ ಸಂಘದ ಮೂಲಕ ಔಷಧೀಯ ಸಸ್ಯ ಹಾಗೂ ಇತರ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಮಾತನಾಡಿದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಅವರು ಶಾಲೆಯ ಆವರಣ ಪ್ರಶಸ್ತ ಸ್ಥಳವಾಗಿದ್ದು, ಇದೀಗ ಕೆಲವು ಗಿಡಗಳನ್ನು ನೆಡಲಾಗಿದೆ. ಮುಂದೆ ಇದನ್ನು ಉದ್ಯಾನವನವನ್ನಾಗಿ ರೂಪಿಸಿ ಅದನ್ನು ಸಂಘದಿAದ ನಿರ್ವಹಣೆ ಮಾಡಿಕೊಡುವ ಚಿಂತನೆಯಿದೆ ಎಂದರು.
ಈ ಮುನ್ನ ಸನಿಹದಲ್ಲಿರುವ ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಪುಷ್ಪಾರ್ಚನೆಯ ಮೂಲಕ ನಮನ ಸಲ್ಲಿಸಲಾಯಿತು. ರಸ್ತೆ ಬದಿಯಲ್ಲೇ ಮಹಾನ್ ನಾಯಕರ ಪ್ರತಿಮೆಯಿದೆ. ಅತ್ತಿಂದಿತ್ತ ತಿರುಗಾಡು ವಾಗ ಪೋಷಕರು ಮಕ್ಕಳಿಗೆ ಇವರ ಸಾಧನೆ ಬಗ್ಗೆ ವಿವರಿಸುವಂತೆ ವಿಜು ದೇವಯ್ಯ ಸಲಹೆಯಿತ್ತರು.
ತಿತಿಮತಿ ಎಸಿಎಫ್ ಪಂದ್ಯAಡ ಬೆಳ್ಯಪ್ಪ, ಪೊನ್ನಂಪೇಟೆಯ ಅರಣ್ಯ ನರ್ಸರಿಯಿಂದ ಗಿಡ ವಿತರಿಸ ಲಾಯಿತು. ಅಲ್ಲದೆ ಸಂಘದ ಮೂಲಕವೂ ಗಿಡ ಖರೀದಿಸಿ ವನಮಹೋತ್ಸವ ಆಚರಿಸಲಾಯಿತು. ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಟ್ರಪಂಡ ಪಳನಿ, ನಿರ್ದೇಶಕ ಕುಪ್ಪಂಡ ಗಣೇಶ್, ತಿಮ್ಮಯ್ಯ, ಶಾಲಾ ಶಿಕ್ಷಕ ವೃಂದದೊAದಿಗೆ ಮುಖ್ಯ ಶಿಕ್ಷಕ ರತೀಶ್ ರೈ, ಕಾವೇರಿ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ನೆಲ್ಲಮಕ್ಕಡ ಪ್ರತಿಷ್ಠಮಾದಯ್ಯ ನೂರೆರ ರತಿ ಅಚ್ಚಪ್ಪ, ಚಿಲ್ಲವಂಡ ರಚನಾದರ್ಶನ್, ಅಡ್ಡೇಂಗಡ ಸವಿತಾ ನಂಜಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಚೇಂದAಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ವಿಜು ದೇವಯ್ಯ ಸ್ವಾಗತಿಸಿದರು.