ಮಡಿಕೇರಿ, ಆ. ೨೪ : ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆ-ಗಾಳಿಯಿಂದ ರೂ. ೯೦ ಕೋಟಿಗೂ ಹೆಚ್ಚು ಮೌಲ್ಯದ ಮೂಲಭೂತ ಸೌಕರ್ಯಗಳಿಗೆ ನಷ್ಟ ಸಂಭವಿಸಿವೆೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.ಕಳೆದ ನಾಲ್ಕು ವರ್ಷಗಳಿಂದ ಮಹಾಮಳೆ ಕೊಡಗು ಜಿಲ್ಲೆಯನ್ನು ನಡುಗಿಸಿದೆ. ಈ ಬಾರಿ ಕೂಡ ಭಾರಿ ಮಳೆಯಾಗಿದ್ದು, ಸರಕಾರಿ ಆಸ್ತಿ-ಪಾಸ್ತಿಗಳಿಗೆ ನಷ್ಟವಾಗಿವೆ. ಜಿಲ್ಲೆಯ ೫ ತಾಲೂಕುಗಳಲ್ಲಿಯೂ ರಸ್ತೆ, ಮೋರಿ, ಸೇತುವೆ, ವಿದ್ಯುತ್, ನೀರಾವರಿ, ಪೈಪ್ಲೈನ್ಗಳಿಗೆ ಹಾನಿಯಾಗಿವೆ.ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಟ್ಟು ರೂ. ೧೯.೦೨ ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ೧೬.೯೯ ಕಿ.ಮೀ ರಾಜ್ಯ ಹೆದ್ದಾರಿ ಹಾನಿಗೆ ರೂ. ೧೧.೪೭ ಕೋಟಿ, ೯.೮೯ ಕಿ.ಮೀ ಜಿಲ್ಲಾ ಮುಖ್ಯ ರಸ್ತೆ ರೂ. ೫.೬೫ ಕೋಟಿ, ಸೇತುವೆ ಮತ್ತು ಮೋರಿ ಹಾನಿಗೆ ರೂ. ೧.೭೪ ಕೋಟಿ, ಕಟ್ಟಡ ಹಾನಿಗೆ ರೂ. ೧೫.೫೦ ಲಕ್ಷ ನಷ್ಟ ಎಂದು ಅಂದಾಜಿಸಲಾಗಿದೆ.ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ ವ್ಯಾಪ್ತಿಗೆ ಒಟ್ಟು ರೂ. ೨೨.೮೦ ಕೋಟಿ ಎಂದು ಅಂದಾಜು ಮಾಡಲಾಗಿದೆ. ೨೬೪೧ ಕಿ.ಮೀ ರಸ್ತೆ ಹಾನಿಗೆ ರೂ. ೧೫.೮೫ ಕೋಟಿ, ಸೇತುವೆ ಹಾನಿಗೆ ರೂ. ೧.೭೫ ಕೋಟಿ, ಮೋರಿಗಳ ಹಾನಿಗೆ ರೂ. ೪.೭೨ ಕೋಟಿ, ಕೆರೆಗಳ ಹಾನಿಗೆ ರೂ.೩೮ ಲಕ್ಷ, ಕಟ್ಟಡಗಳ ಹಾನಿಗೆ ರೂ. ೧೦ ಲಕ್ಷ ನಷ್ಟ ಸಂಭವಿಸಿದೆ ಎಂದು ಇಲಾಖೆ ತಿಳಿಸಿದೆ.
ವಿದ್ಯುತ್ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು ರೂ. ೨.೮೪ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿದ್ದು, ಈ ಪೈಕಿ ೧೫೧೨ ವಿದ್ಯುತ್ ಕಂಬಗಳ ಹಾನಿಗೆ ರೂ. ೧.೫೧ ಕೋಟಿ, ೧೧೫ ಟ್ರಾನ್ಸ್ಫಾರ್ಮರ್ಗಳ ಹಾನಿಗೆ ೧.೧೫ ಕೋಟಿ, ೩೫.೭೯ ಕಿ.ಮೀ ವಿದ್ಯುತ್ ವಾಹನಕಗಳು ಹಾನಿಗೆ ರೂ. ೧೭.೯೦ ಲಕ್ಷ ನಷ್ಟ ಸಂಭವಿಸಿದೆ. ೨೧ ಕಿ.ಮೀ ರಾಷ್ಟಿçÃಯ ಹೆದ್ದಾರಿ ಹಾನಿಗೆ ರೂ. ೨ ಕೋಟಿ, ಸಣ್ಣ ನೀರಾವರಿ ಅಂತರ್ಜಲ ಅಭಿವೃದ್ಧಿ ವ್ಯಾಪ್ತಿಯಲ್ಲಿ ರೂ. ೩೨.೨೦ ಕೋಟಿ ನಷ್ಟ ಎಂದು ಸಮೀಕ್ಷೆ ಮಾಡಲಾಗಿದೆ. ಈ ಪೈಕಿ ನಾಲೆ, ಏರಿ, ಕೆರೆಗಳ ಹಾನಿಗೆ ರೂ. ೧೮.೨೦ ಕೋಟಿ, ಏತ ನೀರಾವರಿ, ಪಂಪ್ಸೆಟ್, ಪೈಪ್ಲೈನ್ ಮೂಲಸೌಕರ್ಯಕ್ಕೆ ರೂ ೫೦ ಲಕ್ಷ, ೨೫ ಏರಿಗಳ ಹಾನಿಗೆ ರೂ. ೧೩.೫೦ ಕೋಟಿ ನಷ್ಟ ಎಂದು ಅಂದಾಜಿಸಲಾಗಿದೆ. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ವ್ಯಾಪ್ತಿಯ ೦.೨೫ ಕಿ.ಮೀ ರಸ್ತೆ ಹಾನಿಗೆ ರೂ. ೪೦ ಲಕ್ಷ, ಮಡಿಕೇರಿ ನಗರಸಭೆ ವ್ಯಾಪ್ತಿಯ ರಸ್ತೆ ಹಾನಿಗೆ ರೂ. ೪.೪೧ ಕೋಟಿ, ಕುಶಾಲನಗರ ಪ.ಪಂ ವ್ಯಾಪ್ತಿಯ ರಸ್ತೆ ಹಾನಿಗೆ ರೂ. ೨ ಕೋಟಿ, ಸೋಮವಾರಪೇಟೆ ಪ.ಪಂ ವ್ಯಾಪ್ತಿಯ ರಸ್ತೆ ಹಾನಿಗೆ ರೂ. ೧.೫೦ ಕೋಟಿ, ವೀರಾಜಪೇಟೆ ವ್ಯಾಪ್ತಿಯ ರಸ್ತೆ ಹಾನಿಗೆ ರೂ. ೩.೭೦ ಕೋಟಿ ನಷ್ಟವಾಗಿದೆ ಎಂದು ಇಲಾಖೆಗಳು ಮಾಹಿತಿ ನೀಡಿವೆ.
ಸರಕಾರಕ್ಕೆ ಸಲ್ಲಿಕೆ : ನಷ್ಟದ ಅಂದಾಜು ಪಟ್ಟಿಗೆ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿದ್ದು, ಆಡಳಿತಾತ್ಮಕ ಅನುಮೋದನೆ ಬರಬೇಕಾಗಿದೆ. ಕೆಲವು ಕಾಮಗಾರಿಗಳಿಗೆ ಸ್ಥಳೀಯವಾಗಿ ಅನುದಾನ ಲಭ್ಯವಿದೆ. ತುರ್ತು ಪರಿಹಾರಕ್ಕೆ ಗ್ರಾಮ ಪಂಚಾಯ್ತಿವಾರು ರೂ. ೫೦ ಸಾವಿರ, ಮಡಿಕೇರಿ ನಗರಸಭೆಗೆ ರೂ. ೨ ಲಕ್ಷ, ಪ.ಪಂಗಳಿಗೆ ತಲಾ ೧ ಲಕ್ಷದಂತೆ ಬಿಡುಗಡೆಗೊಳಿಸಲಾಗಿದೆ.
ಮಡಿಕೇರಿ ಮತ್ತು ಸೋಮವಾರಪೇಟೆ ತಹಶೀಲ್ದಾರ್ಗಳಿಗೆ ಕಳೆದ ಬಾರಿ ಬಿಡುಗಡೆಯಾದ ಅನುದಾನ ಬಾಕಿ ಇದೆ. ವೀರಾಜಪೇಟೆ ತಹಶೀಲ್ದಾರ್ ಅವರಿಗೆ ರೂ. ೭೫ ಲಕ್ಷ ಅನುದಾನ ಮಳೆಗಾಲ ತುರ್ತು ಬಳಕೆಗೆ ಬಿಡುಗಡೆಗೊಳಿಸಲಾಗಿದೆ. ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ರೂ. ೫ ಲಕ್ಷ ಪರಿಹಾರ ನೀಡಲಾಗಿದೆ.
-ಹೆಚ್.ಜೆ. ರಾಕೇಶ್