ಸೋಮವಾರಪೇಟೆ, ಆ. ೨೪: ಸೆ.೩ರಂದು ನಡೆಯಲಿರುವ ಪಟ್ಟಣ ಪಂಚಾಯಿತಿಯ ವಾರ್ಡ್ ೧ ಹಾಗೂ ವಾರ್ಡ್ ೩ರ ಚುನಾವಣೆಗೆ ಸಂಬAಧಿಸಿದAತೆ ಸಲ್ಲಿಕೆಯಾಗಿದ್ದ ೭ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.
ಬಿಸಿಎಂಬಿ ಮೀಸಲು ಕ್ಷೇತ್ರವಾಗಿರುವ ವಾರ್ಡ್ ೧ ರಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಆರ್. ಮೃತ್ಯುಂಜಯ(ಜಯಣ್ಣ), ಕಾಂಗ್ರೆಸ್ ಅಭ್ಯರ್ಥಿಯಾಗಿ ಭುವನೇಶ್ (ಧನು), ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಎಸ್. ಗಿರೀಶ್, ಪಕ್ಷೇತರ ಅಭ್ಯರ್ಥಿಯಾಗಿ ರವಿ ಶಂಕರ್ ಅವರುಗಳು ನಾಮಪತ್ರ ಸಲ್ಲಿಸಿದ್ದರು.
ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರವಾಗಿರುವ ೩ನೇ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಮೋಹಿನಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಧ್ಯಾ ಪ್ರಕಾಶ್, ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಂ. ಪುಷ್ಪ ಅವರುಗಳು ನಾಮಪತ್ರ ಸಲ್ಲಿಸಿದ್ದರು. ಇಂದು ಚುನಾವಣಾಧಿಕಾರಿಗಳಾದ ಹೇಮಂತ್‌ಕುಮಾರ್ ಹಾಗೂ ರಾಜೇಶ್ ಅವರುಗಳು ಅಭ್ಯರ್ಥಿಗಳ ಸಮಕ್ಷಮ ನಾಮಪತ್ರ ಪರಿಶೀಲನೆ ನಡೆಸಿದ್ದು, ಎಲ್ಲಾ ೭ ಮಂದಿಯ ನಾಮಪತ್ರ ಕ್ರಮಬದ್ಧವಾಗಿರುವುದಾಗಿ ಘೋಷಿಸಿದರು.
ನಾಮಪತ್ರಗಳನ್ನು ವಾಪಸ್ ಪಡೆಯಲು ತಾ. ೨೬ರಂದು ಕೊನೆಯ ದಿನವಾಗಿದ್ದು, ಸೆಪ್ಟೆಂಬರ್ ೩ ರಂದು ಚುನಾವಣೆ, ಮರು ಮತದಾನದ ಅವಶ್ಯಕತೆ ಉಂಟಾದಲ್ಲಿ ಸೆ.೫ರಂದು ಮರು ಮತದಾನ, ಸೆ. ೬ರಂದು ಮತ ಎಣಿಕೆ ನಡೆಯಲಿದೆ.