ನಾಳೆ ಪದಗ್ರಹಣ

ಮಡಿಕೇರಿ, ಆ. ೨೪: ಮೈಸೂರು ದಕ್ಷಿಣವಿಭಾಗದ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಕೊಡಗು ಜಿಲ್ಲೆಯವರಾದ ವಕೀಲೆ ಬಡುವಂಡ ಸ್ಮಿತಾದೇವಯ್ಯ ಅವರು ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ವಕೀಲೆಯಾಗಿರುವ ಮಾಲ್ದಾರೆಯವರಾದ ಸ್ಮಿತಾ (ತಾಮನೆ - ಬಲ್ಲಚಂಡ) ಅವರು ಅಲ್ಲಿನ ಮೂಡಾಕ್ಕೆ ಪ್ಯಾನೆಲ್ ವಕೀಲರಾಗಿ ಹಾಗೂ ಇದರೊಂದಿಗೆ ಎಸ್‌ಬಿಐ ಯೂನಿಯನ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್‌ಗೂ ಪ್ಯಾನಲ್ ವಕೀಲರಾಗಿದ್ದಾರೆ.

ಕಳೆದ ೩೬ ವರ್ಷಗಳ ಬಳಿಕ ಮೈಸೂರು ದಕ್ಷಿಣ ಲಯನ್ಸ್ಗೆ ಮಹಿಳೆಯೋರ್ವರು ಇದೇ ಪ್ರಥಮ ಬಾರಿಗೆ ಅಧ್ಯಕ್ಷರಾಗುತ್ತಿದ್ದಾರೆ. ಪದಗ್ರಹಣ ಸಮಾರಂಭ ತಾ. ೨೬ ರಂದು (ನಾಳೆ) ಸಂಜೆ ೬ ಗಂಟೆಗೆ ಜರುಗಲಿದ್ದು, ಹಲವು ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಕೆಲವು ತಿಂಗಳ ಹಿಂದೆ ಮೂಡಾ ನಿವೇಶನವೊಂದಕ್ಕೆ ಸಂಬAಧಿಸಿದAತೆ ವಂಚಿಸಲು ಯತ್ನಿಸುತ್ತಿದ್ದ ಜಾಲವೊಂದನ್ನು ಪೊಲೀಸರು ಬಂಧಿಸಲೂ ಇವರು ನೆರವಾಗಿದ್ದರು.