ಶನಿವಾರಸಂತೆ, ಆ. ೨೪: ಸಮೀಪದ ಕೊಡ್ಲಿಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೈದ್ಯಾಧಿಕಾರಿ ಡಾ. ಪವಿತ್ರಾ ಮಾತನಾಡಿ, ಸ್ತನ್ಯಪಾನದ ಪ್ರಾಮುಖ್ಯತೆ, ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಮಕ್ಕಳ ತಾಯಂದಿರು ಹಾಗೂ ಗರ್ಭಿಣಿ ಸ್ತಿçÃಯರಲ್ಲಿ ಅರಿವು ಮೂಡಿಸಿದರು. ಕ್ಷೇತ್ರ ಆರೋಗ್ಯಾಧಿಕಾರಿ ಮಂಜುಳಾ, ಆರೋಗ್ಯ ನಿರೀಕ್ಷಣಾಧಿಕಾರಿ ದುಂಬಿತಾ, ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವನಿತಾ, ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಜರಿದ್ದರು.