ಕಣಿವೆ, ಆ. ೨೫: ಕುಶಾಲನಗರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಸರ್ಕಾರಿ ಇಲಾಖೆಗಳಿಗೆ ಸಂಬAಧಿಸಿದAತೆ ಸಮರ್ಪಕವಾದ ಭೂಮಿ ಇದ್ದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಜಿಲ್ಲಾಧಿಕಾರಿಗಳಿಗೆ ನೀಡುವುದು. ಒಂದು ವೇಳೆ ಇಲಾಖೆಗಳಿಗೆ ಸಂಬAಧಿಸಿದAತೆ ಸಮರ್ಪಕವಾದ ಭೂಮಿ ಇಲ್ಲದಿದ್ದರೆ ಅಂತಹ ಮಾಹಿತಿಯನ್ನು ಒದಗಿಸುವ ಬಗ್ಗೆ ಅಧಿಕಾರಿಗಳಿಗೆ ತಹಶೀಲ್ದಾರ್ ಪ್ರಕಾಶ್ ನಿರ್ದೇಶಿಸಿದರು.
ನೂತನವಾಗಿ ಆರಂಭವಾಗಿರುವ ಕುಶಾಲನಗರ ತಾಲೂಕಿನ ಅಭಿವೃದ್ಧಿಗೆ ಸಂಬAಧಿಸಿದAತೆ ಅಧಿಕಾರಿಗಳು ಅಗತ್ಯ ಸಹಕಾರ ನೀಡುವುದರೊಂದಿಗೆ ದಕ್ಷತೆಯಿಂದ ಕಾರ್ಯನಿರ್ವಹಿಸು ವಂತೆ ಹೇಳಿದರು. ಅಧಿಕೃತವಾಗಿ ತಾಲೂಕು ರಚನೆಯಾದ ನಂತರ ನಡೆದ ಮೊದಲ ಸಭೆ ಇದಾಗಿತ್ತು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ.ಪಾಂಡು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಲಕೃಷ್ಣ ರೈ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಸಿ.ರವಿ, ಶಿಶು ಅಭಿವೃದ್ಧಿ ಅಧಿಕಾರಿ ಅಣ್ಣಯ್ಯ, ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಅಬ್ದುಲ್ ಲತೀಫ್, ಉಪತಹಶೀಲ್ದಾರ್ ಮಧುಸೂದನ್, ಶಿರಸ್ತೇದಾರ್ ಬಿ.ಎಂ. ವಿನು, ಕಂದಾಯ ಅಧಿಕಾರಿ ಬಿ.ಎನ್. ವಿನು, ಸೇರಿದಂತೆ ಶಿಕ್ಣಣ ಇಲಾಖೆಯ ಕುಶಾಲನಗರ ತಾಲೂಕಿನ ೫ ಕ್ಲಸ್ಟರ್ ಕೇಂದ್ರಗಳ ಶಿಕ್ಷಣಾಧಿಕಾರಿಗಳಿದ್ದರು.