ಮಡಿಕೇರಿ, ಆ. ೨೫: ಕೊಡಗಿನಲ್ಲಿ ಲಾಕ್ಡೌನ್ ಮತ್ತು ಕರ್ಫ್ಯೂ ಅನ್ನು ತೆರವುಗೊಳಿಸಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಗಾಂಧಿ ಮೈದಾನದಲ್ಲಿ ಸೇರಿದ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ರಾಷ್ಟçಗೀತೆಯೊಂದಿಗೆ ಪ್ರತಿಭಟನೆ ಆರಂಭಿಸಿದರು. ನಂತರ ವಿವಿಧ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಮಾರ್ಚ್ ೨೦೨೦ ರಿಂದ ಇಂದಿನವರೆಗೆ ಸುಮಾರು ೧೮ ತಿಂಗಳುಗಳ ಕಾಲ ನಿರಂತರವಾಗಿ ಲಾಕ್ಡೌನ್ ಹಾಗೂ ಪ್ರವಾಸ ನಿಷೇಧದಿಂದಾಗಿ ಪ್ರವಾಸ ಮತ್ತು ಇತರ ಉದ್ಯಮಗಳ ಅವಲಂಬಿತರ ಮಾಲೀಕರು, ಕಾರ್ಮಿಕರು, ಸಿಬ್ಬಂದಿಗಳು, ವಾಹನ ಚಾಲಕರು, ರೈತರು ಹಾಗೂ ಇತರ ಎಲ್ಲಾ ಅವಲಂಬಿತ ವರ್ಗದವರ ಜೀವನ ಚಿಂತಾಜನಕವಾಗಿದೆ. ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ನೊಂದ ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿದ್ದು, ಮಕ್ಕಳ ಶಿಕ್ಷಣ ಶುಲ್ಕ, ಬ್ಯಾಂಕ್ ಮತ್ತು ಇತರೆ ಖಾಸಗಿ ಸಂಸ್ಥೆ, ವ್ಯಕ್ತಿಗಳ ಸಾಲ ಮತ್ತು ಬಡ್ಡಿಯನ್ನು ಪಾವತಿಸಲೂ ಸಾಧ್ಯವಾಗದೆ ದುಡಿಯುವ ಯಾವುದೇ ಬೇರೆ ದಾರಿ ಕಾಣದೆ ಕಂಗಾಲಾಗಿದ್ದಾರೆ ಎಂದರು.
ಆದ್ದರಿAದ ಕೊಡಗಿನಲ್ಲಿ ಲಾಕ್ಡೌನ್ ಮತ್ತು ಕರ್ಫ್ಯೂನಂತಹ ಕ್ರಮಗಳನ್ನು ಶಾಶ್ವತವಾಗಿ ಕೈ ಬಿಡಬೇಕು. ೨ ವರ್ಷಗಳ ಎಲ್ಲಾ ಬಗೆಯ ಕಂದಾಯಗಳನ್ನು ರದ್ದು ಮಾಡಬೇಕು, ಎಲ್ಲಾ ಬಗೆಯ ಪರವಾನಗಿ ನವೀಕರಣ ಶುಲ್ಕವನ್ನು ರದ್ದುಗೊಳಿಸಬೇಕು, ಲಾಕ್ಡೌನ್ ಆದ ಹತ್ತು ತಿಂಗಳ ವಿದ್ಯುತ್ ಬಿಲ್ಗೆ ಸಂಪೂರ್ಣವಾಗಿ ವಿನಾಯಿತಿ ನೀಡಬೇಕು ಅಲ್ಲದೆ, ಪಾವತಿ ಯಾಗಿರುವ
(ಮೊದಲ ಪುಟದಿಂದ) ಬಿಲ್ ಅನ್ನು ಮರುಪಾವತಿ ಮಾಡಬೇಕು, ಬ್ಯಾಂಕ್ ಮತ್ತು ಎಲ್ಲಾ ಖಾಸಗಿ ಸಾಲದ ಬಡ್ಡಿ ಮನ್ನಾ ಮಾಡಬೇಕು, ಲಾಕ್ಡೌನ್ ಅವಧಿಯ ೧೮ ತಿಂಗಳ ಮಾಸಿಕ ಕಂತಿನ ಅಸಲನ್ನು ಸಾಲ ಮುಗಿಯುವ ಕೊನೆಯ ತಿಂಗಳ ನಂತರ ಪಾವತಿಸುವಂತೆ ಅವಧಿ ವಿಸ್ತರಣೆ ಮಾಡಬೇಕು. ಆರ್ಟಿಓ ಇಲಾಖೆಯ ಅಂತರಾಜ್ಯ ಪರ್ಮಿಟ್, ಮೂರು ತಿಂಗಳಿಗೊಮ್ಮೆ ಪಾವತಿಸುವ ಹಳದಿ ಬೋರ್ಡಿನ ಟ್ಯಾಕ್ಸಿಗಳ ತೆರಿಗೆ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದರು.
ಅಲ್ಲದೇ ವಾಹನಗಳು, ಕಟ್ಟಡಗಳ ಮತ್ತು ವ್ಯಾಪಾರ ಉದ್ಯಮಗಳ ವಿಮೆಯನ್ನು ಸರಕಾರವೇ ಪಾವತಿಸಬೇಕು, ದುಬಾರೆಯ ರ್ಯಾಫ್ಟಿಂಗ್ ಮತ್ತು ಇತರೆ ಸಾಹಸ ಕ್ರೀಡೆಗಳಿಗೆ ನಿರಂತರವಾಗಿ ಅನುಮತಿ ನೀಡಬೇಕು, ಸುರಕ್ಷಿತ ರ್ಯಾಫ್ಟಿಂಗ್ ಮತ್ತು ಇತರೆ ಸಾಹಸ ಕ್ರೀಡೆಗಳಿಗೆ ನಿರಂತರವಾಗಿ ಅನುಮತಿ ನೀಡಬೇಕು, ಸುರಕ್ಷಿತ ಸ್ಥಳಗಳಲ್ಲಿ ಟ್ರಕ್ಕಿಂಗ್ ಮಾಡಲು ನಿರ್ಬಂಧ ಹೇರಬಾರದು, ಜಿಲ್ಲೆಯ ಗೃಹ ಮತ್ತು ವಾಣಿಜ್ಯ ಉದ್ದೇಶಗಳ ಭೂಪರಿವರ್ತನೆಗಳನ್ನು ವಿಳಂಬ ಮಾಡದಂತೆ ಆದೇಶ ನೀಡಬೇಕು, ಪ್ರವಾಸೋದ್ಯಮ ಅವಲಂಬಿತ ಸಿಬ್ಬಂದಿಗಳು, ಕಾರ್ಮಿಕರಿಗೆ ಸುರಕ್ಷತಾ ಮತ್ತು ಸೇವಾ ಭದ್ರತೆ ನೀಡಬೇಕು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಮತ್ತು ಸಂಬAಧಪಟ್ಟ ಇಲಾಖೆಗಳು ಯೋಜನೆಗಳನ್ನು ರೂಪಿಸಬೇಕು, ಜಿಲ್ಲೆಯ ಪ್ರವಾಸಿ ತಾಣಗಳು ಮತ್ತು ಪ್ರಕೃತಿ ವೈಶಿಷ್ಟö್ಯತೆಗಳ ಬಗ್ಗೆ ರಾಷ್ಟç ಮತ್ತು ಅಂರ್ರಾಷ್ಟಿçÃಯ ಮಟ್ಟದಲ್ಲಿ ಪ್ರಚಾರ ಮಾಡಬೇಕು ಎಂದು ಮಂಜುನಾಥ್ ಕುಮಾರ್ ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕೆ. ವರದಾ, ಸಂಘಟನಾ ಕಾರ್ಯದರ್ಶಿ ಲಕ್ಷಿö್ಮ ನಾರಾಯಣ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಪದ್ಮ ಮಧುಕುಮಾರ್, ಜಂಟಿ ಕಾರ್ಯದರ್ಶಿ ಬ್ರಿಜೇಶ್, ಸಲಹಾ ಸಮಿತಿ ಸದಸ್ಯ ಆರ್.ಕೆ. ಭಟ್, ನಿರ್ದೇಶಕರುಗಳಾದ ಸದಾ ಮುದ್ದಪ್ಪ, ನಿತಿನ್ ತಮ್ಮಯ್ಯ, ಪ್ರವೀಣ್, ಸಲಾಂ, ಸಂಜು, ರಾಹುಲ್, ಮುದ್ದುರಾಜ್ ಮತ್ತಿತರರು ಇದ್ದರು.