ಮಡಿಕೇರಿ, ಆ. ೨೫ : ಅಂಚೆ ಅದಾಲತ್‌ನ ಮುಂದಿನ ಸಭೆಯು ಸೆಪ್ಟೆಂಬರ್ ೬ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಡಗು ಅಂಚೆ ವಿಭಾಗದ, ವಿಭಾಗೀಯ ಕಚೇರಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಅಂಚೆ ಸೇವೆಗೆ ಸಂಬAಧಿಸಿದ ಎಲ್ಲಾ ತರಹದ ದೂರುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ. ದೂರುಗಳಿದ್ದಲ್ಲಿ ಅಂಚೆ ಅದಾಲತ್ ಎಂದು ಬರೆದು ಅಂಚೆ ಅಧೀಕ್ಷಕರು, ಕೊಡಗು ಅಂಚೆ ವಿಭಾಗ, ಮಡಿಕೇರಿ ಇವರಿಗೆ ಸೆಪ್ಟೆಂಬರ್, ೩ ರೊಳಗೆ ತಲುಪುವಂತೆ ಕಳುಹಿಸಲು ಕೋರಿದೆ. ಸೆಪ್ಟೆಂಬರ್ ೬ ರಂದು ನಡೆಯುವ ಸಭೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಭಾಗವಹಿಸಬಹುದು ಎಂದು ಕೊಡಗು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.