ವೀರಾಜಪೇಟೆ, ಆ. ೨೫: ಜನ ಸಾಮಾನ್ಯರ ಕಷ್ಟಗಳನ್ನು ಅರಿತುಕೊಳ್ಳದೆ, ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿರುವ ಜನವಿರೋಧಿ ಬಿಜೆಪಿ ಸರಕಾರÀವನ್ನು ಅಧಿಕಾರದಿಂದ ತೊಲಗಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ‘ಚಲೇ ಜಾವ್’ ಚಳವಳಿಯ ಸ್ಮರಣೆಯ ದಿನವನ್ನು ವೀರಾಜಪೇಟೆಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಜನರಿಗೆ ತಲುಪಿಸುವ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನಿಲ್ ಹೇಳಿದರು.

ಪಟ್ಟಣದಲ್ಲಿರುವ ಸಿ.ಪಿ.ಐ. ಕಚೇರಿಯಲ್ಲಿ ಕರಪತ್ರ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿ, ಪ್ರಧಾನಿ ಮೋದಿ ಅವರು ೨೦೨೦ ಮಾರ್ಚ್ ೨೪ ರಂದು ಕೊರೊನಾ ರೋಗ ನಿಯಂತ್ರಿಸಲು ಜನರಿಗೆ ಯೋಚಿಸುವ ಅವಕಾಶವನ್ನು ಕೊಡದೆ ಲಾಕ್ ಡೌನ್ ಘೋಷಿಸಿದರು. ಇದರಿಂದ ಕೋಟ್ಯಂತರ ಜನ ವಲಸೆ ಕಾರ್ಮಿಕರು ತಿನ್ನಲು ಅನ್ನ ಇಲ್ಲದೆ ಹಾದಿ ಬೀದಿಯಲ್ಲಿ ಅಲೆದು ಸಂಕಷ್ಟಕ್ಕೆ ಒಳಗಾದರು. ಹಾಗೂ ಶಾಲಾ ಕಾಲೇಜು ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಚ್ಚಿಹೋಗಿದ್ದರಿಂದ ಪ್ರಾಯೋಗಿಕವಾದ ಶಿಕ್ಷಣ ನೀತಿ ರೂಪಿಸದೇ ವಿದ್ಯಾರ್ಥಿಗಳ ಎರಡು ವರ್ಷದ ಶೈಕ್ಷಣಿಕ ಬದುಕು ನಾಶವಾಗಿದೆ. ಆನ್ ಲೈನ್ ದೂರ ಶಿಕ್ಷಣ ವ್ಯವಸ್ಥೆ ಗ್ರಾಮೀಣ ಭಾಗದ ಜನರಿಗೆ ಸಿಗಲಿಲ್ಲ ಎಂದ ಅವರು ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದರು. ಸಿ.ಪಿ.ಐ.ನ ಸಹಕಾರ್ಯದರ್ಶಿ ರಫೀಕ್ ನವಲಗುಂದ ಮಾತನಾಡಿ, ದಿನನಿತ್ಯ ಉಪಯೋಗಿಸುವ ವಸ್ತುಗಳು, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳ ದರವನ್ನು ಮನಬಂದAತೆ ಏರಿಸುತ್ತಿರುವ ಸರಕಾರಗಳು. ಬಡತನ, ಹಸಿವು, ನಿರುದ್ಯೋಗ, ಅಸಮಾನತೆ, ಅನ್ಯಾಯಗಳಿಗೆ ಕಾರಣರಾದ ಜೀವವಿರೋಧಿ ಸರಕಾರವನ್ನು ತೊಲಗಿಸಲು ಜನರಿಗೆ ಕರಪತ್ರವನ್ನು ಹಂಚಲು ಮುಂದಾಗಿರುವುದಾಗಿ ತಿಳಿಸಿದರು. ಈ ಸಂದರ್ಭ ಸಹ ಕಾರ್ಯದರ್ಶಿ ರಮೇಶ್, ಡಿ.ಕೆ. ಶಾಂತಿ, ಬೋಜ ಹಾಗೂ ಮತ್ತಿತರರು ಹಾಜರಿದ್ದರು.