ಕುಶಾಲನಗರ, ಆ. ೨೫: ಸಮಾಜದಲ್ಲಿ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಸಾಮಾಜಿಕ ಹೋರಾಟಗಾರ ಹೆಚ್.ಕೆ. ವಿವೇಕಾನಂದ ಕೈಗೊಂಡಿರುವ ೨೯೬ನೇ ದಿನದ ಜ್ಞಾನಭಿಕ್ಷಾ ಪಾದಯಾತ್ರೆಯನ್ನು ಕುಶಾಲನಗರದಿಂದ ಸೋಮವಾರಪೇಟೆಗೆ ತೆರಳಿದ ಪಾದಯಾತ್ರೆಯನ್ನು ಬೀಳ್ಕೊಡಲಾಯಿತು.

ರಾಜ್ಯಾದ್ಯಂತ ಕಳೆದ ೨೯೬ ದಿನಗಳಿಂದ ಸಂಚರಿಸುತ್ತಿರುವ ಪಾದಯಾತ್ರೆಯು ಸಿದ್ದಾಪುರದಿಂದ ಕುಶಾಲನಗರಕ್ಕೆ ಆಗಮಿಸಿದ ಸಂದರ್ಭ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಘಟಕ, ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಕುಶಾಲನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಜ್ಞಾನಭಿಕ್ಷಾ ಪಾದಯಾತ್ರೆ ಕೈಗೊಂಡಿರುವ ಹೆಚ್.ಕೆ. ವಿವೇಕಾನಂದ ಅವರೊಂದಿಗೆ ಚರ್ಚೆ ಸಂವಾದ ಏರ್ಪಡಿಸಲಾಗಿತ್ತು.

ಜ್ಞಾನಭಿಕ್ಷಾ ಪಾದಯಾತ್ರೆಯ ಉದ್ದೇಶ ಹಾಗೂ ಯಾತ್ರೆಯ ಮುಂದಿನ ರೂಪುರೇಷೆ ಕುರಿತು ಮಾತನಾಡಿದ ಹೆಚ್.ಕೆ. ವಿವೇಕಾನಂದ, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಯುವ ಜನಾಂಗವು ಭವಿಷ್ಯದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ದಿಸೆಯಲ್ಲಿ ಭವ್ಯ ಭಾರತ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು ಎಂದರು.

ಪಾದಯಾತ್ರೆಯ ಮೂಲಕ ನಾಡಿನ ವಿವಿಧೆಡೆಗಳಲ್ಲಿನ ಸಮಾಜದ ಜನಜೀವನ ಹಾಗೂ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಮುಂದಿನ ೧೫ ವರ್ಷಗಳಲ್ಲಿ ಇಂದಿನ ಯುವಕರು ಸಮಾಜದಲ್ಲಿ ಪರಿವರ್ತನಾ ಸಮಾಜ ನಿರ್ಮಾಣಕ್ಕೆ ಈಗಿನಿಂದಲೇ ಉತ್ತಮ ಚಿಂತನೆ, ದೂರದೃಷ್ಟಿ ಬೆಳೆಸಿಕೊಳ್ಳಬೇಕು ಎಂದು ವಿವೇಕಾನಂದ ಹೇಳಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಜನಾಂದೋಲನದ ಮುಖಂಡ ವಿ.ಪಿ. ಶಶಿಧರ್ ಮಾತನಾಡಿ, ದೇಶದ ಐಕ್ಯತೆ ಮತ್ತು ಸೌಹಾರ್ದತೆ ದೃಷ್ಟಿಕೋನದ ಮಹಾದಾಸೆ ಇಟ್ಟುಕೊಂಡು ಕಳೆದ ೨೯೬ ದಿನಗಳಿಂದ ರಾಜ್ಯದ ೨೧ ಜಿಲ್ಲೆಗಳಲ್ಲಿ ಜ್ಞಾನಭಿಕ್ಷಾ ಪಾದಯಾತ್ರೆಯ ಮೂಲಕ ೯ ಸಾವಿರ ಕಿ.ಮೀ. ಕ್ರಮಿಸಿ ಸಂಚರಿಸುತ್ತಿರುವ ಸಾಮಾಜಿಕ ಚಿಂತಕ ವಿವೇಕಾನಂದ ಅವರ ಹೋರಾಟಕ್ಕೆ ಎಲ್ಲರೂ ಬೆಂಬಲಿಸುವ ಮೂಲಕ ಉತ್ತಮ ರಾಷ್ಟçದ ಸಂಕಲ್ಪ ಹಾಗೂ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕಿದೆ ಎಂದರು.

ಸಾಹಿತಿ ಭಾರದ್ವಾಜ ಕೆ. ಆನಂದತೀರ್ಥ ಮಾತನಾಡಿ, ವಿವೇಕಾನಂದರು ಉದಾತ್ತ ಉದ್ದೇಶ ಹಾಗೂ ಉತ್ತಮ ನಿರೀಕ್ಷೆಯಿಂದ ಕೈಗೊಂಡಿರುವ ಈ ಪಾದಯಾತ್ರೆಯು ಜನಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದರು.

ಜಿ.ಪA. ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಜಿ. ಪ್ರೇಮಕುಮಾರ್ ಪಾದಯಾತ್ರೆಯ ಉದ್ದೇಶ ತಿಳಿಸಿದರು. ನಂತರ ನಡೆದ ಚರ್ಚೆ-ಸಂವಾದದಲ್ಲಿ ವಕೀಲ ಭರತ್ ಮಾಚಯ್ಯ, ವಿವಿಧ ಸಂಘಟನೆಗಳ ಪ್ರಮುಖರಾದ ಎಂ. ನಂಜುAಡಸ್ವಾಮಿ, ಬಿ.ಜಿ. ಮಂಜುನಾಥ್ ಗುಂಡೂರಾವ್, ಕೆ.ಎಸ್. ಮಹೇಶ್, ಎಂ.ಎನ್. ವೆಂಕಟನಾಯಕ್, ಆದಂ, ಕೆ.ಎನ್. ಅಶೋಕ್, ಬಿ.ಆರ್. ರಾಜೀವ್ ಭಾಗವಹಿಸಿದ್ದರು. ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ, ಮಡಿಕೇರಿ ಪತ್ರಿಕಾ ಭವನದ ಟ್ರಸ್ಟಿ ಬಿ.ಎನ್. ಮನುಶೆಣೈ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ವಿವಿಧ ಸಂಘಟನೆಗಳ ಪ್ರಮುಖರಾದ ಸಿದ್ದಾಪುರದ ಸುಲೈಮಾನ್, ಕೆ.ವಿ. ರಾಜೀವ್, ಕೆ.ಎನ್. ದೇವರಾಜ್, ಡಿ.ವಿ. ರಾಜೇಶ್, ಕೆ.ಎಸ್. ನಾಗೇಶ್, ಅಮೃತ್, ಗಯಾಜ್, ಟಿ.ಬಿ. ಮಂಜುನಾಥ್, ಸದಾಶಿವಯ್ಯ ಎಸ್. ಪಲ್ಲೇದ್, ಸುನಿತಾ ಲೋಕೇಶ್ ಇತರರು ಇದ್ದರು.