ಮಡಿಕೇರಿ, ಆ. ೨೫ : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕೊಡಗು ಜಿಲ್ಲೆಯ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚೆನ್ನಯ್ಯನಕೋಟೆ, ಮಾಲ್ದಾರೆ, ಕೆ ಬಾಡಗ, ನಿಟ್ಟೂರು, ದೇವರ ಪುರ, ತಿತಿಮತಿ ಮತ್ತು ನಾಲ್ಕೇರಿ ಹಾಡಿಗಳಲ್ಲಿ ಹಕ್ಕು ಪತ್ರ ಪಡೆದು ವಸತಿ ಹೊಂದಿಲ್ಲದೇ ಇರುವ ಈ ಗ್ರಾಮ ಪಂಚಾಯಿತಿಗಳಲ್ಲಿ ಫಲಾನುಭವಿಗಳಿಗೆ ವೈಯಕ್ತಿಕ ಅರಣ್ಯ ಹಕ್ಕು ಮಾನ್ಯ ಮಾಡಲಾದ ೬೧೩ ವಸತಿ ರಹಿತ ಫಲಾನುಭವಿಗಳಿಗೆ ಹೊಸದಾಗಿ ವಾಸದ ಮನೆಗಳನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ ಎಂದು ವನ್ಯಜೀವಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಯತ್ನ ಹಾಗೂ ಶಿಫಾರಸ್ಸಿನ ಮೇರೆಗೆ ಅನುಮತಿ ದೊರೆತಿದೆ. ಚೆನ್ನಯ್ಯನ ಕೋಟೆ ಗ್ರಾ.ಪಂ.ವ್ಯಾಪ್ತಿಯಲ್ಲಿ ದಯ್ಯದಹಡ್ಲು (೪), ಚಿಕ್ಕ ರೇಷ್ಮೆ (೧೦), ಚೆನ್ನಂಗಿ ಬಸವನಹಳ್ಳಿ (೧), ಕೆಸುವಿನ ಕೆರೆ (೨), ದಿಡ್ಡಳ್ಳಿ (೧೪), ಬಸವನ ಹಳ್ಳಿ (೨), ಚೊಟ್ಟೆಪಾರೆ (೨), ಹಾಗೂ ಕೆಸುವಿನ ಕೆರೆ (೧) ಮಾಲ್ದಾರೆ ಗ್ರಾ.ಪಂ.ವ್ಯಾಪ್ತಿಯ ತಟ್ಟಳ್ಳಿ ಹಾಡಿ ಸೇರಿದಂತೆ ಒಟ್ಟು ೩೬ ಹಕ್ಕುಪತ್ರ ಪಡೆದು ವಸತಿ ಹೊಂದಿಲ್ಲದ ಫಲಾನು ಭವಿಗಳಾಗಿದ್ದಾರೆ.
ಕೆ.ಬಾಡಗ ಗ್ರಾ.ಪಂ. ವ್ಯಾಪ್ತಿಯ ಬೇಗೂರು ಪಾರೆ ನಾಣಚ್ಚಿ, ಗದ್ದೆಹಾಡಿ (೩೫) ಬಾಳೆ ಕೋವು (೧೬) ಒಟ್ಟು ೫೧ ಮಂದಿ ಹಕ್ಕುಪತ್ರ ಪಡೆದು ವಸತಿ ಹೊಂದಿಲ್ಲದ ಫಲಾನುಭವಿ ಗಳಾಗಿದ್ದಾರೆ.
ನಿಟ್ಟೂರು ಗ್ರಾ.ಪಂ.ವ್ಯಾಪ್ತಿಯ ತಟ್ಟೆಕೆರೆ (೩೧), ಕೊಳಂಗೆರೆ (೪) ಒಟ್ಟು ೩೫, ದೇವರಪುರ ಗ್ರಾ.ಪಂ.ವ್ಯಾಪ್ತಿಯ ಕಾರೆಹಡ್ಲು (೧೫), ಬೊಮ್ಮನಹಳ್ಳಿ (೪) ಒಟ್ಟು ೧೯,
ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಜಂಗಲ್ ಹಾಡಿ (೧೮), ಮಜ್ಜಿಗೆಹಳ್ಳ ಫಾರಂ (೬೪), ಮಜ್ಜಿಗೆ ಹಳ್ಳ ಆನೆಕ್ಯಾಂಪ್ (೨೨), ಬೊಂಬುಕಾಡು (೨೪), ಕಾರೆಕಂಡಿ (೫೦), ಆಯಿರಸುಳಿ (೩೧), ಬೇಣೆಹಡ್ಲು (೬೧), ದೊಡ್ಡ ರೇಷ್ಮೆಹಡ್ಲು (೮೪), ಅಕ್ಕೆಮಾಳ (೨೭) ಒಟ್ಟು ೩೮೧ ಮಂದಿ ಹಕ್ಕುಪತ್ರ ಪಡೆದು ವಸತಿ ಹೊಂದಿಲ್ಲದ ಫಲಾನುಭವಿಗಳಾಗಿದ್ದಾರೆ.
ಹಾಗೆಯೇ ನಾಲ್ಕೇರಿ ಗ್ರಾ.ಪಂ. ವ್ಯಾಪ್ತಿಯ ಗೋಣಿಗದ್ದೆ (೧೦), ತುಂಡುಮುAಡಗಕೊಲ್ಲಿ (೧೯), ಬೊಮ್ಮಾಡು (೨೬) ಒಟ್ಟು ೫೫ ಮಂದಿ ಹಕ್ಕುಪತ್ರ ಪಡೆದು ವಸತಿ ಹೊಂದಿಲ್ಲದ ಫಲಾನುಭವಿಗಳಾಗಿದ್ದಾರೆ. ಈ ಆದಿವಾಸಿ ಕುಟುಂಬ ಗಳಿಗೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಲಾಗಿದೆ. ಶಾಸಕ ಕೆ.ಜಿ. ಬೋಪಯ್ಯ ಅವರ ಶಿಫಾರಸ್ಸು ಮತ್ತು ನಿರಂತರ ಪ್ರಯತ್ನದಿಂದ ಆದಿವಾಸಿ ಕುಟುಂಬಗಳ ಮನೆ ನಿರ್ಮಾಣಕ್ಕೆ ಸರ್ಕಾರ ಅವಕಾಶ ಮಾಡಿದೆ.
ನಾಗರಹೊಳೆ ಕಲ್ಲಹಳ್ಳ ಮತ್ತು ಆನೆಚೌಕೂರು, ಕೊಡಗು ಜಿಲ್ಲೆಯ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚೆನ್ನಯ್ಯನಕೋಟೆ, ಕೆ. ಬಾಡಗ, ನಿಟ್ಟೂರು, ದೇವರಪುರ, ತಿತಿಮತಿ ಮತ್ತು ನಾಲ್ಕೇರಿ ಹಾಡಿಗಳಲ್ಲಿ ಹಕ್ಕು ಪತ್ರ ಪಡೆದು ವಸತಿ ಹೊಂದಿಲ್ಲದೆ ಇರುವ ಫಲಾನುಭವಿಗಳಿಗೆ ಮನೆ ನಿರ್ಮಿಸುವ ಸಲುವಾಗಿ ವೀರಾಜಪೇಟೆ ತಾಲೂಕಿನ ತಹಶೀಲ್ದಾರ್, ಕಾರ್ಯ ನಿರ್ವಾಹಣಾಧಿಕಾರಿ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಸಂಬAಧಪಟ್ಟ ವಲಯ ಅರಣ್ಯಾಧಿಕಾರಿಗಳು ಜಂಟಿ ಸರ್ವೇ ಮಾಡಿ ಹಾಡಿಯಲ್ಲಿ ಹಕ್ಕು ಪತ್ರ ಪಡೆದ ವ್ಯಕ್ತಿಗಳು ಗುಡಿಸಲು ಕಟ್ಟಿಕೊಂಡು ಹಕ್ಕು ಪತ್ರ ಪಡೆದ ಸ್ಥಳಗಳಲ್ಲಿ ವಾಸವಾಗಿರುವುದಾಗಿ ವರದಿ ಸಲ್ಲಿಸಿದ್ದರು.
ಮುಂದುವರೆದು, ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶದ ಕೊಡಗು ಜಿಲ್ಲೆಯ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಒಳಪಡುವ ಚೆನ್ನಯ್ಯನ ಕೋಟೆ, ಕೆ.ಬಾಡಗ, ನಿಟ್ಟೂರು, ದೇವರಪುರ, ತಿತಿಮತಿ ಮತ್ತು ನಾಲ್ಕೇರಿ ಹಾಡಿಗಳಲ್ಲಿ ಹಕ್ಕುಪತ್ರ ಪಡೆದು ವಸತಿ ಹೊಂದಿಲ್ಲದೆ ಇರುವ ಫಲಾನುಭವಿ ಗಳಿಗೆ, ವೈಯಕ್ತಿಕ ಅರಣ್ಯ ಹಕ್ಕು ಪತ್ರ ಮಾನ್ಯ ಮಾಡಲಾದ ೬೧೩ ವಸತಿ ರಹಿತ ಫಲಾನುಭವಿಗಳಿಗೆ ಹೊಸದಾಗಿ ಮನೆ ನಿರ್ಮಾಣ ಕಲ್ಪಿಸುವುದರ ಬಗ್ಗೆ ಮಾರ್ಗದರ್ಶನ ಕೋರಲಾಗಿತ್ತು.
ಆ ದಿಸೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕೊಡಗು ಜಿಲಾ ವ್ಯಾಪ್ತಿಗೆ ಬರುವ ೭ ಗ್ರಾಮ ಪಂಚಾಯಿತಿ ಹಾಡಿಗಳಲ್ಲಿ ವೈಯಕ್ತಿಕ ಅರಣ್ಯ ಹಕ್ಕು ಮಾನ್ಯ ಮಾಡಲಾದ ೬೧೩ ವಸತಿ ರಹಿತ ಫಲಾನುಭವಿಗಳಿಗೆ ಹೊಸದಾಗಿ ಮನೆ ನಿರ್ಮಾಣ ಮಾಡಲು ಅರಣ್ಯ ಇಲಾಖೆಯಿಂದ ಅನುಮತಿ ನೀಡುವಂತೆ ಪತ್ರ ಬರೆದಿದ್ದರು.
ಆ ನಿಟ್ಟಿನಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ೬೧೩ ಆದಿವಾಸಿ ಕುಟುಂಬಗಳ ಮನೆ ನಿರ್ಮಾಣಕ್ಕೆ ಅವಕಾಶ ದೊರೆತಿರು ವುದು ವಿಶೇಷವಾಗಿದೆ.