ಸೋಮವಾರಪೇಟೆ,ಆ.೨೫: ಅಕ್ರಮ ಮನೆ ನಿರ್ಮಾಣದ ಸಕ್ರಮಕ್ಕೆ ಕಾಲಾವಧಿ ವಿಸ್ತರಣೆ ಮಾಡಲಾಗಿದ್ದು ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ರಂಜನ್ ತಿಳಿಸಿದ್ದಾರೆ. ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ವಾಸದ ಮನೆ ನಿರ್ಮಿಸಿಕೊಂಡಿರುವವರು ಸಕ್ರಮಗೊಳಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ ಕಾಲಂ ೯೪ ಸಿ ಹಾಗೂ ೯೪ಸಿಸಿ ಯಡಿ ಅರ್ಜಿಸಲ್ಲಿಸಲು ೩೧/೩/೨೦೨೨ರ ವರೆಗೆ ಅವಧಿ ವಿಸ್ತರಿಸಲಾಗಿದೆ ಆದ್ದರಿಂದ ಜನತೆ ಈ ಯೋಜನೆಯನ್ನು ಸದುಪಯೋಗ ಪಡಿಕೊಳ್ಳದೇಕೆಂದು ರಂಜನ್ ತಿಳಿಸಿದ್ದಾರೆ.