ಮಡಿಕೇರಿ, ಆ. ೨೫: ಕರ್ತವ್ಯಕ್ಕೆ ತಡವಾಗಿ ಬಂದುದಕ್ಕೆ ಕಾರಣ ಕೇಳಿದ ಶಿರಸ್ತೆದಾರರನ್ನು ನಿಂದಿಸಿದ ಆರೋಪದ ಮೇರೆ ಕಂದಾಯ ನಿರೀಕ್ಷಕರ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಸಂಪಾಜೆ ಹೋಬಳಿ ಕಂದಾಯ ನಿರೀಕ್ಷಕ ರವಿಚಂದ್ರ ಅವರು ಕರ್ತವ್ಯಕ್ಕೆ ತಡವಾಗಿ ಬಂದುದಕ್ಕೆ ಶಿರಸ್ತೆದಾರ್ ಗುರುರಾಜ್ ಅವರು ಕಾರಣ ಕೇಳಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದಿದ್ದು, ರವಿಚಂದ್ರ ಅವರು ಶಿರಸ್ತೆದಾರರನ್ನು ಅವಾಚ್ಯ ಪದಗಳಿಂದ ನಿಂದಿಸಿರುವದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ನಿನ್ನೆ ಸಂಜೆ ವೇಳೆ ಸಂಪಾಜೆಯಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ವೇಳೆ ದೂರು ನೀಡಿದ ಮೇರೆಗೆ ನಗರ ಠಾಣಾಧಿಕಾರಿ ಅಂತಿಮ ಅವಾಚ್ಯ ಪದಗಳಿಂದ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.