ಸೋಮವಾರಪೇಟೆ, ಆ.೨೫: ಸೋಮವಾರಪೇಟೆ ರೋಟರಿ ಹಿಲ್ಸ್ನ ನೂತನ ಅಧ್ಯಕ್ಷರಾಗಿ ಎಂ.ಎA. ಪ್ರಕಾಶ್ ಹಾಗೂ ಕಾರ್ಯದರ್ಶಿಯಾಗಿ ಡಿ.ಪಿ. ಧರ್ಮಪ್ಪ ಅವರುಗಳು ಅಧಿಕಾರ ಸ್ವೀಕರಿಸಿದರು. ಇಲ್ಲಿನ ಮಾನಸ ಸಭಾಂಗಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ ೩೧೮೨ ನ ಪಿಡಿಜಿ ಅಭಿನಂದನ್ ಶೆಟ್ಟಿ ಅವರು ಅಧಿಕಾರ ಹಸ್ತಾಂತರಿಸಿದರು.

ನAತರ ಮಾತನಾಡಿದ ಅವರು, ರೋಟರಿ ಸಂಸ್ಥೆಯು ಕೋವಿಡ್ ಸಂಕಷ್ಟ ಕಾಲದಲ್ಲಿ ಜನರ ಸಂಕಷ್ಟಗಳಿಗೆ ಪ್ರತೀ ಹಂತದಲ್ಲೂ ಸಮರ್ಪಕವಾಗಿ ಸ್ಪಂದಿಸಿದೆ. ಮಹಾರಾಷ್ಟçದ ಭೂಕಂಪ ಇರಲಿ, ಕೊಡಗಿನ ಪ್ರಕೃತಿ ವಿಕೋಪವಿರಲಿ ರೋಟರಿ ಸ್ಪಂದನ ಜನರ ಗಮನ ಸೆಳೆದಿದೆ ಎಂದರು.

ಕೋವಿಡ್ ಸಂಕಷ್ಟದ ಕಾಲದಲ್ಲಿ ಪ್ರತೀ ರೋಟರಿ ಸದಸ್ಯರು ತಮ್ಮ ಸೇವೆಯ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ. ಸಮಾಜ ನಮಗೆ ಅನೇಕ ಕೊಡುಗೆಗಳನ್ನು ನೀಡಿದ್ದು, ನಾವು ಸಮಾಜಕ್ಕೆ ಒಂದಿಷ್ಟು ಕೊಡುಗೆ ನೀಡುವ ಮೂಲಕ ಋಣ ತೀರಿಸಬೇಕಿದೆ. ಈ ಕರ್ತವ್ಯ ಎಲ್ಲಾ ರೋಟರಿ ಸದಸ್ಯರ ಮೇಲಿದೆ ಎಂದು ಅಭಿನಂದನ್ ಶೆಟ್ಟಿ ಹೇಳಿದರು.

ನಮ್ಮಲ್ಲಿನ ಜ್ಞಾನ, ಪ್ರತಿಭೆಯನ್ನು ಅನಾವರಣಗೊಳಿಸಲು ರೋಟರಿ ಅತ್ಯಂತ ಸೂಕ್ತ ವೇದಿಕೆಯಾಗಿದೆ. ನಾಯಕತ್ವ ಎಂಬುದು ಕೇವಲ ರಾಜಕೀಯಕ್ಕೆ ಸೀಮಿತವಾಗಬೇಕಿಲ್ಲ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ನಾಯಕತ್ವವೂ ಸಮಾಜಕ್ಕೆ ಅಗತ್ಯವಾಗಿದ್ದು, ರೋಟರಿ ಸಂಸ್ಥೆಯು ಸಾಮಾಜಿಕ ನಾಯಕತ್ವ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ರೋಟರಿ ಸದಾ ಪ್ರಸ್ತುತ ಆಗಿರಬೇಕಾದರೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗುವುದು ಅನಿವಾರ್ಯ ಹಾಗೂ ಅಗತ್ಯವೂ ಆಗಿದೆ ಎಂದು ರೋಟರಿ ಸದಸ್ಯರಿಗೆ ಕಿವಿಮಾತು ಹೇಳಿದರು.

ವಲಯ ೬ ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ,ಸದಸ್ಯತ್ವ ಹೆಚ್ಚಳದ ನಿಟ್ಟಿನಲ್ಲಿ ರೋಟರಿ ವಲಯ ೬ ಈಗಾಗಲೇ ಕಾರ್ಯಪ್ರವೃತ್ತವಾ ಗಿದ್ದು, ೪೨ ಹೊಸ ಸದಸ್ಯರನ್ನು ಕಳೆದ ೫೦ ದಿನಗಳಲ್ಲಿ ಸೇರ್ಪಡೆ ಮಾಡಲಾಗಿದೆ. ಅಂತೆಯೇ ವಲಯ ೬ರಲ್ಲಿ ೩ ಹೊಸ ಕ್ಲಬ್‌ಗಳ ಪ್ರಾರಂಭಕ್ಕೂ ಯೋಜನೆ ರೂಪಿಸಲಾಗಿದೆ. ಸೋಮವಾರಪೇಟೆ ರೋಟರಿ ಹಿಲ್ಸ್ ಸ್ಥಳೀಯ ಜನತೆಯ ಪ್ರಮುಖ ಬೇಡಿಕೆ ಈಡೇರಿಸು ವಲ್ಲಿಯೂ ಸದಾ ಸಕ್ರಿಯವಾದ ಜನಸೇವೆಯೊಂದಿಗೆ ಹೆಸರಾಗಿದೆ ಎಂದು ಶ್ಲಾಘಿಸಿದರು.

ವಲಯ ೬ ರ ಕಾರ್ಯದರ್ಶಿ ಎಚ್.ಎಸ್.ವಸಂತ್ ಕುಮಾರ್, ವಲಯ ಸೇನಾನಿ ಅಶೋಕ್ ಮಾತನಾಡಿದರು. ಕಳೆದ ೧ ವರ್ಷದಲ್ಲಿ ಅನೇಕ ಮಹತ್ವದ ಕಾರ್ಯಯೋಜನೆ ರೂಪಿಸಿದ ನಿರ್ಗಮಿತ ಅಧ್ಯಕ್ಷ ಲಿಖಿತ್, ಕಾರ್ಯದರ್ಶಿ ಜೀವನ್ ಅವರ ಸೇವಾಕಾರ್ಯವನ್ನು ಅತಿಥಿಗಳು ಶ್ಲಾಘಿಸಿದರು.

ರೋಟರಿ ಪ್ರಮುಖರಾದ ಜವರೇಗೌಡ, ಪಿ.ಕೆ. ರವಿ, ಪಿ.ನಾಗೇಶ್, ಕಾರ್ಯದರ್ಶಿ ಧರ್ಮಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು. ಇದೇ ಸಂದರ್ಭ ಪ್ರಸನ್ನ, ಪ್ರಸ್ತುತ್ ಅವರನ್ನು ಸೋಮವಾರಪೇಟೆ ಹಿಲ್ಸ್ಗೆ ಹೊಸ ಸದಸ್ಯರಾಗಿ ಸೇರ್ಪಡೆಗೊಳಿಸ ಲಾಯಿತು. ರಾಜಶ್ರೀ ಸದಾನಂದ ಅವರನ್ನು ರೋಟರಿ ಸಾಮಾಜಿಕ ಕಳಕಳಿಯ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.