ನಾಪೋಕ್ಲು, ಆ. ೨೫: ಕೊರೊನಾ ಹಿನ್ನೆಲೆಯಲ್ಲಿ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಬಸ್‌ಗಳು ಮಾತ್ರ ಓಡಾಟ ನಡೆಸುತ್ತಿವೆ. ಭಾಗಮಂಡಲ-ನಾಪೋಕ್ಲು-ಮೂರ್ನಾಡು- ಮಡಿಕೇರಿ ರಸ್ತೆಯಲ್ಲಿ ಒಂದು ಖಾಸಗಿ ಬಸ್ ಮಾತ್ರ ಮಧ್ಯಾಹ್ನ ಸಂಚರಿಸುತ್ತಿದೆ. ಬೆಳಿಗ್ಗೆ ೭ ಗಂಟೆಗೆ ಭಾಗಮಂಡಲದಿAದ ನಾಪೋಕ್ಲು ಕಡೆಗೆ ಸರಕಾರಿ ಬಸ್ ಹೊರಟರೆ ೧೧ ಗಂಟೆಯವರೆಗೂ ಯಾವದೇ ಬಸ್‌ಗಳ ಸಂಚಾರ ಇಲ್ಲ.

ಬೆಳಿಗ್ಗೆ ಮಡಿಕೇರಿಯಿಂದ ಮೂರ್ನಾಡು - ನಾಪೋಕ್ಲು ಮಾರ್ಗವಾಗಿ ಯಾವದೇ ಬಸ್‌ಗಳು ಸಂಚರಿಸುತ್ತಿಲ್ಲ. ೧೧.೩೦ ಕ್ಕೆ ಮೊದಲ ಸರಕಾರಿ ಬಸ್ ಭಾಗಮಂಡಲಕ್ಕೆ ಸಂಚರಿಸುತ್ತದೆ. ಇದರಿಂದ ಸರಕಾರಿ ನೌಕರರಿಗೆ ಹಾಗೂ ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳುವ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಿದೆ. ಖಾಸಗಿ ಬಸ್‌ಗಳು ಓಡಾಟ ಆರಂಭಿಸುವವರೆಗೆ ಈ ರಸ್ತೆಯಲ್ಲಿ ಸರಕಾರಿ ಬಸ್‌ಗಳ ಸಂಚಾರಕ್ಕೆ ಜಿಲ್ಲಾಡಳಿತ ಮತ್ತು ಸಾರಿಗೆ ಸಂಸ್ಥೆöವ್ಯವಸ್ಥೆಗೊಳಿಸುವAತೆ ಈ ವ್ಯಾಪ್ತಿಯ ಸಾರ್ವಜನಿಕರು ಮನವಿ ಮಾಡಿದ್ದಾರೆ.