*ಗೋಣಿಕೊಪ್ಪ, ಆ. ೨೫: ಅಸ್ಸಾಂ ಅಥವಾ ಅಂತರ್‌ರಾಜ್ಯದಿAದ ಬಂದ ಕೂಲಿ ಕಾರ್ಮಿಕರ ಬಗ್ಗೆ ತೋಟ ಮಾಲೀಕರು ಗಮನ ಹರಿಸುವ ಸಲುವಾಗಿ ಬಾಳೆಲೆ ಗ್ರಾಮದ ಟಾಸ್ಕ್ ಫೋರ್ಸ್ ಸಮಿತಿಗೆ ಕಾರ್ಮಿಕರ ವಿಳಾಸ ಮತ್ತು ಗುರುತಿನ ದೃಢೀಕರಣ ಜತೆಗೆ ಆರ್.ಟಿ.ಪಿ.ಸಿ.ಆರ್ ವರದಿ ದಾಖಲೆಗಳನ್ನು ಗ್ರಾಮ ಪಂಚಾಯಿತಿ ಟಾಸ್ಕ್ಪೋರ್ಸ್ ಸಮಿತಿಗೆ ಸಲ್ಲಿಸಬೇಕೆಂದು ತಿಳಿಸಿದೆ.

ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊಡಮಾಡ ಬಿ. ಸುಕೇಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಸ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ತೋಟ ಕಾರ್ಮಿಕರಿಂದ ಮಾಲೀಕರಿಗೆ ಹಾಗೂ ಸಂಬAಧಿಸಿದ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆ ಉಂಟಾಗದAತೆ ನಿಗಾವಹಿಸಲು ಈ ಕ್ರಮ ಅವಶ್ಯಕವಾಗಿದ್ದು, ಪ್ರತಿಯೊಬ್ಬ ತೋಟ ಮಾಲೀಕರು ಸೂಕ್ತ ದಾಖಲೆಗಳನ್ನು ನೀಡುವುದರಿಂದ ಅನಾಹುತಗಳು ಸಂಭವಿಸಿದಾಗ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಇದೇ ಸಂದರ್ಭ ತೋಟದ ಕಾರ್ಮಿಕರಿಗೆ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡುವ ವ್ಯವಸ್ಥೆಗೆ ಕ್ರಮ ಕೈಗೊಳ್ಳುವುದಾಗಿ ಮತ್ತು ಕಾರ್ಮಿಕರನ್ನು ಲಸಿಕೆ ಪಡೆಯಲು ಮನವೊಲಿಸಲು ಮಾಲೀಕರು ಮುಂದಾಗಬೇಕೆAದು ಸಲಹೆ ನೀಡಲಾಯಿತು. ಸಭೆಯಲ್ಲಿ ಬಾಳೆಲೆ ವ್ಯಾಪ್ತಿಯ ಗ್ರಾ.ಪಂ. ಸದಸ್ಯರುಗಳು, ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ತೋಟದ ಮಾಲೀಕರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಜರಿದ್ದರು.