ಮಡಿಕೇರಿ, ಆ. ೨೬: ಕೊಡವ ಕುಟುಂಬದ ಸಂಪರ್ಕಕೊAಡಿಯನ್ನು ಬೆಸೆಯುವ ವಂಶವೃಕ್ಷ (ಫ್ಯಾಮಿಲಿಟ್ರೀ) ರಚನೆಯ ಪ್ರಯತ್ನವೊಂದು ಯಶಸ್ವಿಯಾಗಿ ಸಾಗಿದ್ದು, ಇದು ಪ್ರಸ್ತುತ ಅತಿದೊಡ್ಡ ವಂಶಾವಳಿ ಪಟ್ಟಿಯಾಗಿ ಪರಿಗಣಿಸಲ್ಪಡುವದರೊಂದಿಗೆ ಇಂಡಿಯನ್ ಬುಕ್‌ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ.

ಕೊಡವ ಕ್ಲಾö್ಯನ್ ಎಂಬ ಪೋರ್ಟಲ್ (ವೆಬ್‌ಸೈಟ್) ಮೂಲಕ ಕುಟುಂಬಗಳ ಇತಿಹಾಸದ ಮಾಹಿತಿಯನ್ನು ವಂಶವೃಕ್ಷದ ಮೂಲಕ ಮಡಿಕೇರಿ, ಆ. ೨೬: ಕೊಡವ ಕುಟುಂಬದ ಸಂಪರ್ಕಕೊAಡಿಯನ್ನು ಬೆಸೆಯುವ ವಂಶವೃಕ್ಷ (ಫ್ಯಾಮಿಲಿಟ್ರೀ) ರಚನೆಯ ಪ್ರಯತ್ನವೊಂದು ಯಶಸ್ವಿಯಾಗಿ ಸಾಗಿದ್ದು, ಇದು ಪ್ರಸ್ತುತ ಅತಿದೊಡ್ಡ ವಂಶಾವಳಿ ಪಟ್ಟಿಯಾಗಿ ಪರಿಗಣಿಸಲ್ಪಡುವದರೊಂದಿಗೆ ಇಂಡಿಯನ್ ಬುಕ್‌ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ.

ಕೊಡವ ಕ್ಲಾö್ಯನ್ ಎಂಬ ಪೋರ್ಟಲ್ (ವೆಬ್‌ಸೈಟ್) ಮೂಲಕ ಕುಟುಂಬಗಳ ಇತಿಹಾಸದ ಮಾಹಿತಿಯನ್ನು ವಂಶವೃಕ್ಷದ ಮೂಲಕ (ಮೊದಲ ಪುಟದಿಂದ) ೧೩ ರಿಂದ ೧೪ ತಲೆಮಾರುಗಳ ವಿವರ ಲಭ್ಯವಾಗಿದೆ. ಇದೀಗ ಇದರ ಬೆಸುಗೆಯಂತೆ ಸುಮಾರು ೧೬ ಸಾವಿರದಷ್ಟು ಮಂದಿಯ ವೃಕ್ಷಾವಳಿ ಪಟ್ಟಿಯಾಗಿದೆ. ಮದುವೆಯಾಗಿ ಹೋದ ಮಹಿಳೆಯರ ಹಾಗೂ ತವರುಮನೆ ಹುಡುಗಿಯರ ಕುರಿತಾಗಿ ಹೆಚ್ಚು ವಿವರ ಸಿಗುವದು ಸ್ವಲ್ಪ ಕಷ್ಟಸಾಧ್ಯವಾದ ಕಾರಣ ಈ ಪ್ರಯತ್ನ ವಿಳಂಬವಾಗಿತ್ತು ಎಂದು ಕಿಶು ಉತ್ತಪ್ಪ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.

ಇದೀಗ ಕೊಡವರು ತಮ್ಮ ಸಂಬAಧಿಕರನ್ನು ಹುಡುಕಲು ಬಳಸಬಹುದಾದ ಪೋರ್ಟಲ್ ಆಗಿ ಕೊಡವ ಕ್ಲಾö್ಯನ್ ಇದ್ದು, ಯಾವದೇ ಇತರ ಕೊಡವರೊಂದಿಗೆ ತನ್ನ ಒಡನಾಟ ಸ್ಥಾಪಿಸÀಬಹುದಾಗಿದ್ದರೂ, ಅವರು ಸೇರಿರುವ ತಲೆಮಾರಿನ ಹೊರತಾಗಿ ಕಳೆದ ಐದು ವರ್ಷಗಳಿಂದ ಕೈಗೊಂಡ ವ್ಯಾಪಕ ಸಂಶೋಧನೆಯಿAದ ಇದು ಸಾಧ್ಯವಾಗಿದೆ. ಸಂಪರ್ಕಿಸಿದ ಸುಮಾರು ೬೦೦ ಕುಟುಂಬಗಳಿAದ ಡೇಟಾವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಈ ವಂಶಾವಳಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ೧೬ನೇ ಶತಮಾನದಿಂದ ಸುಮಾರು ೧೪ ತಲೆಮಾರುಗಳವರೆಗೆ ಕೆಲವು ಕುಟುಂಬಗಳ ವಂಶಾವಳಿ ದಾಖಲೀಕರಣವಾಗಿದೆ. ಇದನ್ನು ಪರಿಗಣಿಸಿ ಇದೀಗ ಈ ಪ್ರಯತ್ನ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದು, ಕಿಶು ಉತ್ತಪ್ಪ ಅವರು ಇದರ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಕೊಕ್ಕೇಂಗಡ ಸಚಿತ, ಬೊಳಕಾರಂಡ ಬೃಂದಾ, ಇಂದAಡ ಆಲನ್ ಬೋಪಣ್ಣ ಇವರುಗಳು ಕೈಜೋಡಿಸಿದ್ದು ಅಗತ್ಯ ಸಹಕಾರ ನೀಡಿದ್ದಾರೆ. - ಶಶಿ