ಮಡಿಕೇರಿ, ಆ. ೨೬: ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಮಡಿಕೇರಿಯ ಪ್ರಥಮ ಮಹಿಳಾ ನ್ಯಾಯಾಧೀಶೆ ಪಿ.ಕೆ. ದಿವ್ಯಾ ಅವರಿಗೆ ಮಡಿಕೇರಿಯ ಮಹಿಳಾ ವಕೀಲರು ಶುಭ ಹಾರೈಸಿ ಬೀಳ್ಕೊಡುಗೆ ನೀಡಿದರು. ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬೀಳ್ಕೊಡುಗೆ ನೀಡಲಾಯಿತು.