ಮಡಿಕೇರಿ, ಆ. ೨೬: ಸರ್ಕಾರ ಅನುಷ್ಠಾನ ಮಾಡುವ ವಿವಿಧ ಯೋಜನೆಗಳ ಬಗ್ಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಸೆಪ್ಟೆಂಬರ್ ೧೪ ರಂದು ಸಂಜೆ ೪.೩೦ ರಿಂದ ೭.೩೦ ರವರೆಗೆ ಏರ್ಪಡಿಸಿ ವಿದ್ಯಾರ್ಥಿಗಳ ಸಲಹೆ, ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಗಿದೆ.

ಪ.ಜಾತಿ ಮತ್ತು ಪ.ಪಂಗಡಕ್ಕೆ ಸೇರಿದ ೧೮-೩೨ ವರ್ಷಗಳ ವಯೋಮಾನದ ಹಾಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಾಗಿರಬೇಕು. ಸಂವಾದದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು hಣಣಠಿ://೧೬೪.೧೦೦.೧೩೩.೧೬೩/sಚಿmvಚಿಜಚಿ/esಚಿmvಚಿಜಚಿಖegisಣಡಿಚಿಣioಟಿ. ಚಿsಠಿx ಲಿಂಕ್ ಅನ್ನು ಬಳಸಿ, ಸೆಪ್ಟೆಂಬರ್ ೭ ರೊಳಗೆ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ. ೦೮೨೭೨-೨೨೫೫೩೧, ೯೪೮೦೮೪೩೦೩೭ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಕೋರಿದ್ದಾರೆ.