ಮಡಿಕೇರಿ, ಆ. ೨೬: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ ೧೩ ರೊಳಗೆ ಮೈಸೂರು ವಿಭಾಗ ಮಟ್ಟದ ಕೈಗಾರಿಕಾ ಅದಾಲತ್ ಏರ್ಪಡಿಸಲಾಗಿದೆ.
ಆ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ಸಂಬAಧಿಸಿದ ಅಹವಾಲುಗಳನ್ನು ಸಲ್ಲಿಸುವ ಉದ್ದಿಮೆದಾರರು ನಗರದ ಕೊಹಿನೂರು ರಸ್ತೆಯಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರ, ಜಂಟಿ ನಿರ್ದೇಶಕರ ಕಚೇರಿಗೆ ನಿಗದಿತ ನಮೂನೆ ೧ ಪಡೆದು ಭರ್ತಿ ಮಾಡಿ ಅರ್ಜಿಯನ್ನು ತಾ. ೩೦ ರೊಳಗಾಗಿ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೨೭೨-೨೨೮೭೪೬, ೨೨೮೪೩೧ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.