ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನ್ಯಾ. ಎ.ಎಸ್. ಒಕಾ ನೇಮಕ

ನವದೆಹಲಿ, ಆ. ೨೬: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಅಭಯ್ ಶ್ರೀನಿವಾಸ್ ಒಕಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಅಭಯ್ ಶ್ರೀನಿವಾಸ್ ಒಕಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದ್ದು, ಅವರು ಅಧಿಕಾರ ವಹಿಸಿಕೊಳ್ಳುವ ದಿನದಿಂದ ಜಾರಿಗೆ ಬರಲಿದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ಸಾಮೂಹಿಕ ಅತ್ಯಾಚಾರ: ರಾಷ್ಟಿçÃಯ ಮಹಿಳಾ ಆಯೋಗ ಪತ್ರ

ನವದೆಹಲಿ, ಆ. ೨೬: ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟಿçÃಯ ಮಹಿಳಾ ಆಯೋಗ ಕರ್ನಾಟಕ ಪೊಲೀಸರಿಗೆ ಪತ್ರ ಬರೆದು ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಬಂಧಿಸುವAತೆ ಆದೇಶಿಸಿದೆ. ರಾಷ್ಟಿçÃಯ ಮಹಿಳಾ ಆಯೋಗವು ಮಾಧ್ಯಮಗಳಲ್ಲಿ ಬಂದ ವರದಿಯನ್ನು ನೋಡಿ ಕರ್ನಾಟಕ ಪೊಲೀಸರಿಗೆ ಸೂಚನೆ ನೀಡಿದೆ. ಕಾಲೇಜಿಗೆ ಹೋಗುವ ಯುವತಿ ತನ್ನ ಗೆಳೆಯನೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶಕ್ಕೆ ಹೋಗಿದ್ದ ಸಂದರ್ಭ ಪಾನಮತ್ತರಾಗಿದ್ದ ದುಷ್ಕರ್ಮಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ವರದಿಗಳ ಪ್ರಕಾರ, ಎಫ್‌ಐಆರ್ ಮಾತ್ರ ದಾಖಲಿಸ ಲಾಗಿದೆ ಮತ್ತು ಈ ಪ್ರಕರಣದಲ್ಲಿ ಇನ್ನೂ ಯಾವುದೇ ಆರೋಪಿಯನ್ನು ಬಂಧಿಸಲಾಗಿಲ್ಲ, ಆದಷ್ಟು ಶೀಘ್ರವೇ ಆರೋಪಿಗಳನ್ನು ಬಂಧಿಸುವತ್ತ ಕಾರ್ಯೋನ್ಮುಖವಾಗಬೇಕೆಂದು ಒತ್ತಾಯಿಸಿದೆ. ಈ ಸಂಬAಧ ರಾಷ್ಟಿçÃಯ ಮಹಿಳಾ ಆಯೋಗ ಅಧ್ಯಕ್ಷೆ ರೇಖಾ ಶರ್ಮ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಿ ಸಂಬAಧಪಟ್ಟ ಕಾನೂನಿನಡಿಯಲ್ಲಿ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.

ಗೃಹ ಸಚಿವರ ಹೇಳಿಕೆ ನಾಚಿಕೆಗೆ ಆಕ್ರೋಷ

ಬೆಂಗಳೂರು, ಆ. ೨೬: ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ನೀಡಿರುವ ಅತ್ಯಾಚಾರ ಸಂಬAಧ ಹೇಳಿಕೆ ವಿವಾದಾತ್ಮಕ ತಿರುವು ಪಡೆದುಕೊಳ್ಳುತ್ತಿದೆ. ಒಬ್ಬ ರಾಜ್ಯದ ಗೃಹ ಸಚಿವರಾಗಿ ಇಷ್ಟು ಬಾಲಿಶವಾಗಿ ಮಾತನಾಡುವುದು ಎಷ್ಟು ಸರಿ, ರಾಜ್ಯದ ಜನರಿಗೆ, ಮಹಿಳೆಯರಿಗೆ ಹಾಗಾದರೆ ರಕ್ಷಣೆ ಎಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ನನ್ನನ್ನು ರೇಪ್ ಮಾಡಲು ನೋಡುತ್ತಿದ್ದಾರೆ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಗೃಹ ಸಚಿವರು ನೀಡುತ್ತಿದ್ದಾರೆ. ರೇಪ್ ಪದ ಬಿಜೆಪಿಯವರಿಗೆ, ಗೃಹ ಸಚಿವರಿಗೆ ಸರಳ, ಪ್ರಿಯವಾದ ಪದ ಅಂತ ಕಾಣುತ್ತಿದೆ. ಅವರ ಹೇಳಿಕೆಗೆ ಬಿಜೆಪಿ ಪಕ್ಷದ ನಾಯಕರೆಲ್ಲರೂ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡಲು ನೋಡುತ್ತಿದ್ದಾರೆ ಎಂದ ಮೇಲೆ ಇಲಾಖೆಯ ಆಡಳಿತ, ಕಾರ್ಯವೈಖರಿ ಹೇಗಿರಬಹುದು, ಗೃಹ ಸಚಿವರ ಮೇಲೆ ಯಾರ್ಯಾರು ರೇಪ್ ಮಾಡಲು ನೋಡುತ್ತಿದ್ದಾರೆಯೋ ಅವರ ಮೇಲೆ ಕೇಸು ಹಾಕಿ ಬಂಧಿಸಲಿ, ಅದು ಯಾರೇ ಮಾಡಿರಲಿ ಉಗ್ರಪ್ಪ ಮಾಡಿರಲಿ, ರೇವಣ್ಣ ಮಾಡಿರಲಿ, ಸಿದ್ದರಾಮಯ್ಯನವರು ಮಾಡಿರಲಿ ಅಥವಾ ನಾನೇ ಮಾಡಿರಲಿ ಅವರ ಮೇಲೆ ಕೇಸು ಹಾಕಿ ಬಂಧಿಸುವ ಕೆಲಸ ಮಾಡಲಿ ಎಂದು ನಾನು ಪೊಲೀಸ್ ಮಹಾ ನಿರ್ದೇಶಕರಿಗೆ ಒತ್ತಾಯಿಸುತ್ತಿದ್ದೇನೆ ಎಂದರು. ಘಟನೆ ನಡೆದು ೪೮ ಗಂಟೆಯಾದರೂ ಇನ್ನೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ, ಇದು ಪೊಲೀಸ್ ಇಲಾಖೆಯ ವೈಫಲ್ಯವಾಗಿದ್ದು ಇಲಾಖೆಯ ಬಗ್ಗೆ ನಾಚಿಕೆಯೆನಿಸುತ್ತದೆ ಎಂದರು.

ಚೌತಿಗೆ ಅರಿಶಿನ ಗಣೇಶ

ಬೆಂಗಳೂರು, ಆ. ೨೬: ಇಷ್ಟು ದಿನ ಚತುರ್ಥಿಗೆ ಮಣ್ಣಿನಿಂದ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಆಗಮಿಸುತ್ತಿದ್ದ ಗಣೇಶ ಈ ಬಾರಿ ಸಾರ್ವಜನಿಕವಾಗಿ ಬಹುತೇಕ ಕಡೆಗಳಲ್ಲಿ ಅರಿಶಿನ ರೂಪದಲ್ಲಿ ಆಗಮಿಸುತ್ತಿದ್ದಾನೆ. ಈ ಬಾರಿ ಇನ್ನಷ್ಟು ಪರಿಸರ ಪ್ರೇಮ ಹೆಚ್ಚಿಸಲು ಸರ್ಕಾರವೇ ಅರಿಶಿನ ಗಣೇಶನನ್ನು ತಯಾರಿಸುತ್ತಿದೆ. ಅರಿಶಿನ ಅಂದರೇನೇ ಭಾರತೀಯ ಸಂಸ್ಕೃತಿ ಜೊತೆಗೆ ಅನಾದಿಕಾಲದಿಂದಲೂ ಗುರುತಿಸಿಕೊಂಡು ಬಂದಿರುವ ವಿಶೇಷ ವಸ್ತು. ಈ ಅರಿಶಿನಕ್ಕೂ ನಮ್ಮ ಭಾರತೀಯ ಸಂಪ್ರದಾಯಕ್ಕೂ ಅವಿನಾಭಾವ ನಂಟು. ಯಾವುದೇ ಶುಭಕಾರ್ಯವಿರಲೀ, ಪೂಜೆ ಪುನಸ್ಕಾರವಿರಲಿ ಅಲ್ಲಿ ಅರಿಶಿನ ಇರಲೇಬೇಕು. ಬೆಳಿಗ್ಗೆ ಹೊಸ್ತಿಲಲ್ಲಿ ಅರಿಶಿನವಿಟ್ಟು ದಿನ ಆರಂಭಿಸುವವರು ಬಹುತೇಕರು. ಭಾರತೀಯರು ಇಂತಹ ಅಮೂಲ್ಯ ಅರಿಶಿನವನ್ನು ಈ ಹಿಂದಿನಿAದಲೂ ಮನೆಮದ್ದಾಗಿ, ಅಡುಗೆಗೆ ನೈಸರ್ಗಿಕ ಬಣ್ಣವಾಗಿ, ರೋಗನಿರೋಧಕವಾಗಿ ಅಲ್ಲದೇ ನಂಜು ನಿರೋಧಕವಾಗಿಯೂ ಬಳಸುತ್ತಿದ್ದಾರೆ. ಇನ್ನು ಹೆಂಗಳೆಯರ ಸೌಂದರ್ಯವರ್ಧಕವೂ ಅರಿಶಿನವೇ ಆಗಿದೆ. ಇಂತಹ ಬಹುಪಯೋಗಿ ಅರಿಶಿನ (ಹಳದಿ) ಇದೀಗ ಗಣೇಶನ ರೂಪದಲ್ಲಿ ಎಲ್ಲರ ಮನೆಮನೆಗೂ ಆಗಮಿಸುತ್ತಿದ್ದಾನೆ. ಅಂದ್ಹಾಗೆ ಈ ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿಯಿAದ ವಿಶೇಷವಾದ ಯೋಜನೆಯಾಗಿ ಗಣಪತಿ ಹಬ್ಬಕ್ಕೆ ೧೦ ಲಕ್ಷ ಅರಿಶಿನ ಗಣಪತಿ ತಯಾರಾಗುತ್ತಿವೆ. ಅರಿಶಿನ ಗಣೇಶ ಪರಿಕಲ್ಪನೆಯನ್ನು ಈ ಮೊದಲೇ ಮಾಡಲಾಗಿದ್ದು, ಪರಿಸರ ರಕ್ಷಣೆಗೆ ಇದು ಸಹಕಾರಿಯಾಗಲಿದೆ. ಅರಿಶಿಣ ಎಂದರೆ ಸಂಸ್ಕೃತಿಗೆ ಹತ್ತಿರವಾದದ್ದು. ಹೀಗಾಗಿ ಅರಿಶಿನ ಗಣೇಶನ ಅಭಿಯಾನವನ್ನು ರಾಜ್ಯ ಪರಿಸರ ಇಲಾಖೆ ಮಾಡುತ್ತಿದೆ. ಜನರೇ ಅರಿಶಿನ ಗಣೇಶನನ್ನು ತಯಾರಿಸಲಿ ಎಂಬುದು ಇದರ ಉದ್ದೇಶವಾಗಿದ್ದು, ಪರಿಸರ ಇಲಾಖೆಯಿಂದ ಅರಿಶಿನ ಗಣೇಶನನ್ನು ನಿರ್ಮಿಸಿ ವಿತರಿಸುತ್ತಿಲ್ಲ. ಬದಲಿಗೆ ಸಂಸ್ಕೃತಿಯ ಜೊತೆಗೆ ಪರಿಸರವನ್ನು ಕಾಪಾಡುವ ಪರಿಸರ ಸ್ನೇಹಿ ಅರಿಶಿನ ಗಣೇಶನ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಭಾವನಾತ್ಮಕವಾಗಿ ಮತ್ತಷ್ಟು ಬಾಂಧವ್ಯ ಬೆಳೆಸುವ ಜೊತೆಗೆ ಮನೆಮನೆಯಲ್ಲಿ ಕಲೆಗಾರರನ್ನು ಹುಟ್ಟಿಹಾಕಲಿರುವ ಅರಿಶಿನ ಗಣೇಶ ಮಕ್ಕಳಿಗೆ ಇನ್ನಷ್ಟು ಹತ್ತಿರವಾಗಲಿದ್ದಾನೆ.