ಸೋಮವಾರಪೇಟೆ, ಆ. ೨೬: ನಗರದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಸದಸ್ಯರು ಹಾಗೂ ಕೆಲವು ಪ್ರವಾಸಿಗರು ಗರ್ವಾಲೆ ಸಮೀಪದ ಕೋಟೆ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಬೆಟ್ಟದಲ್ಲಿ ಅರಳಿರುವ ನೀಲ ಕುರಂಜಿ ಹೂ ನೋಡಲು ಆಗಮಿಸುವ ಕೆಲ ಪ್ರವಾಸಿಗರು ಮೋಜು ಮಸ್ತಿ ಮಾಡಿ ಪ್ಲಾಸ್ಟಿಕ್ ಬಾಟಲ್,ಮದ್ಯದ ಬಾಟಲ್ ನಂತಹ ವಸ್ತುಗಳನ್ನು ಅಲ್ಲೇ ಎಸೆದು ಹೋಗುತ್ತಿದ್ದು, ಪ್ರವಾಸಿಗರ ಈ ವರ್ತನೆಯಿಂದ ಪರಿಸರ ಹಾಳಾಗುತ್ತಿದೆ.

ಇದನ್ನು ಮನಗಂಡ ಅಸೋಸಿಯೇಷನ್ ಸದಸ್ಯರು ಕೋಟೆಬೆಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸಿಗರು ಎಸೆದಿದ್ದ ತ್ಯಾಜ್ಯಗಳನ್ನು ತೆರವು ಮಾಡಿದರು. ಐತಿಹಾಸಿಕ ಹಿನ್ನೆಲೆಯ ಕೋಟೆ ಬೆಟ್ಟದಲ್ಲಿ ಮೋಜು ಮಸ್ತಿ ಮಾಡದೇ ಕ್ಷೇತ್ರದ ಪಾವಿತ್ರ‍್ಯತೆಯನ್ನು ಕಾಪಾಡಬೇಕೆಂದು ಯಿಫಾ ಸಂಘಟನೆಯ ಪದಾಧಿಕಾರಿಗಳು ಮನವಿ ಮಾಡಿದರು.

ಈ ಸಂದರ್ಭ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀನಿಧಿ ಲಿಂಗಪ್ಪ, ಸಜನ್, ಮೋಹಿತ್, ಆದರ್ಶ, ವಿಕಾಸ್, ಚಿರಂಜೀವಿ, ಗಗನ್, ಜಯಕೀರ್ತಿ ಸೇರಿದಂತೆ ಕೆಲ ಪ್ರವಾಸಿಗರು ಇದ್ದರು.