ಕೂಡಿಗೆ: ಕೂಡಿಗೆ ಸೈನಿಕ ಶಾಲೆಯಲ್ಲಿ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಆಗಮಿಸಿದ್ದರು. ಕಾರ್ಯಕ್ರಮದ ಮೊದಲಿಗೆ ಮುಖ್ಯ ಅತಿಥಿಗಳು ಹಾಗೂ ಶಾಲೆಯ ಅಧಿಕಾರಿಗಳು ಶಾಲೆಯ ಆವರಣದಲ್ಲಿರುವ ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ನಂತರ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನಕ್ಕೆ ಆಗಮಿಸಿ ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ಶಾಲೆಯ ಕುವೆಂಪು ವಿವಿದೋದ್ಧೇಶ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ದೇಶಪ್ರೇಮ ಮತ್ತು ಯುದ್ಧವೀರರ ಕುರಿತಾದ ಹಾಗೂ ಭಾರತದ ಸಂಸ್ಕೃತಿಯ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೃಶ್ಯಾವಳಿಯನ್ನು ಪ್ರದರ್ಶಿಸಲಾಯಿತು. ಹಾಗೆಯೇ ಶಾಲೆಯ ಸಿಬ್ಬಂದಿ ವರ್ಗದ ಮಕ್ಕಳು ಪ್ರದರ್ಶಿಸಿದ ‘ಕ್ಯಾರಿ ಕೇಮ್ ಬ್ಯಾಕ್’ ಶೀರ್ಷಿಕೆಯ ಕಿರುನಾಟಕದಲ್ಲಿ ಕೆ.ಸಿ. ಕಾರ್ಯಪ್ಪ ಅವರ ನೈಜ ಜೀವನದ ಆಯ್ದ ಘಟನೆಗಳಲ್ಲಿ ಒಂದಾದ ೧೯೬೫ ರ ಯುದ್ಧವನ್ನು ಆಧರಿಸಲಾಗಿತ್ತು.

ಈ ಸಂದರ್ಭ ಮಾತನಾಡಿದ ಮುಖ್ಯ ಅತಿಥಿ ಕಾರ್ಯಪ್ಪ ಅವರು, ರಾಷ್ಟçದ ಸ್ವಾತಂತ್ರö್ಯ ಮತ್ತು ರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ ತಮ್ಮನ್ನೇ ತಾವು ಸಮರ್ಪಿಸಿಕೊಂಡ ವೀರರ ಚರಿತ್ರೆಯನ್ನು ಸ್ಮರಿಸಿದರು. ಈ ಸಂದರ್ಭ ಶಾಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಾದ ಗೋಲ್ಕರ್, ಹೆಚ್.ಎಂ. ಕಾವ್ಯ, ಜಾಕೀರ್ ಹುಸೇನ್, ಶಿವಪ್ರಸಾದ್ ಮತ್ತು ಎಸ್.ಎಸ್. ರಾಮಚಂದ್ರ ಅವರಿಗೆ ಅಭಿನಂದನಾ ಪ್ರಶಸ್ತಿ ಪತ್ರವನ್ನು ಮುಖ್ಯ ಅತಿಥಿಗಳು ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್, ಉಪ ಪ್ರಾಂಶುಪಾಲ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿಗಳಾದ ಸ್ಕಾ÷್ವಡ್ರನ್ ಲೀಡರ್ ಆರ್.ಕೆ. ಡೇ, ಶಾಲೆಯ ವೈದ್ಯಾಧಿಕಾರಿಗಳಾದ ಡಾ. ಹೆಚ್. ಮಹೇಶ್, ಬೋಧಕ, ಬೋಧಕೇತರ ವರ್ಗದವರು ಪಾಲ್ಗೊಂಡಿದ್ದರು.ಗೋಣಿಕೊಪ್ಪಲು: ಕೊರೊನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಲ್ಲಿ ಸ್ವಾತಂತ್ರö್ಯ ದಿನದ ಭೌತಿಕ ಆಚರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ನೀಡದಿದ್ದ ಕಾರಣ ವಿದ್ಯಾರ್ಥಿಗಳ ಹಾಜರಾತಿಯಿಲ್ಲದೇ ಪ್ರಾಂಶುಪಾಲರು, ಕೆಲವು ಶಿಕ್ಷಕರ ಉಪಸ್ಥಿತಿಯಲ್ಲಿ ಕೋವಿಡ್-೧೯ರ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಸರಳವಾಗಿ ಕಾಪ್ಸ್ ಶಾಲೆಯಲ್ಲಿ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು. ಆಚರಣೆಯ ವೀಡಿಯೋ ಮತ್ತು ಛಾಯಾಚಿತ್ರಗಳನ್ನು ಆನ್‌ಲೈನ್ ಮೂಲಕ ಹಂಚಿಕೊಳ್ಳಲಾಯಿತು. ಆಂಚಲ್ ಪೂಜಾ ಮತ್ತು ರಯಾನ್ ತಮ್ಮ ಭಾಷಣದಲ್ಲಿ ಕಲೆ, ಸಂಸ್ಕೃತಿ, ಸಂಪ್ರದಾಯದಲ್ಲಿ ಭಾರತವು ವಿಶ್ವದಲ್ಲಿ ಗಮನಸೆಳೆಯುತ್ತಿದೆ. ಕಂಡು ಕಾಣರಿಯದೆ ಸಕಲ ಉನ್ನತಿಯನ್ನು ಸಾಧಿಸುತ್ತಿದೆ. ವಿಜಯ ಪತಾಕೆ ಹಾರಿಸಿ ಜಗದೆಲ್ಲೆಡೆ ರಾರಾಜಿಸುತ್ತಿದೆ ಎಂದು ಹೇಳಿದರು. ಹಿಂದಿ ಉಪನ್ಯಾಸಕಿ ಪುಷ್ಪಾ ಅಶೋಕ್ ಮಾತನಾಡಿ, ಗಡಿ ಸೇವೆಗಳ ಎಲ್ಲೆಗಳಲ್ಲಿ ದೇಶ ಕಾಯುವ ಯೋಧರಿಗೆ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲ ಡಾ. ಬೆನ್ನಿ ಕುರಿಯೋಕೋಸ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದೇಶ ಸಾಕಷ್ಟು ಅಭಿವೃದ್ಧಿಯತ್ತ ದಾಪುಗಾಲಿಡುತ್ತಾ ಇತ್ತೀಚಿನ ದಿನಗಳಲ್ಲಿ ವಿಶ್ವದ ಹೃದಯ ಎನ್ನುವಂತಹ ಮಾತುಗಳು ವಿಶ್ವದೆಲ್ಲೆಡೆ ರಾರಾಜಿಸುತ್ತಿದೆ ಎಂದರು. ಪುಟ್ಟ ಮಕ್ಕಳು ಗಿಡಗಳನ್ನು ನೆಟ್ಟು ಸ್ವಾತಂತ್ರö್ಯ ದಿನಾಚರಣೆಯನ್ನು ಸಂಭ್ರಮಿಸಿದರು. ದೇಶಭಕ್ತಿ ಗೀತೆ, ನೃತ್ಯಗಳು ನೋಡುಗರ ಮನಸೂರೆಗೊಂಡವು. ಮಕ್ಕಳ ಕುಂಚದಲ್ಲಿ ವರ್ಣರಂಜಿತವಾದ ಚಿತ್ರಕಲೆ ಮೂಡಿಬಂತು. ನಿಖಿತಾ ಮೇದಪ್ಪ ನಿರೂಪಣೆ ಮಾಡಿದರು. ರಾಹುಲ್ ಚೆಂಗಪ್ಪ ವಂದಿಸಿದರು.ಮಡಿಕೇರಿ: ಕೊಡಗು ಜಿಲ್ಲಾ ಲಾರಿ ಮಾಲೀಕರ-ಚಾಲಕರ ಸಂಘದ ವತಿಯಿಂದ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್, ಬೆಳೆಗಾರರಾದ ದಾಸಂಡ ರಮೇಶ್, ಸುಂಟಿಕೊಪ್ಪ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ವೆಂಕಟರಮಣ, ಸಂಘದ ಅಧ್ಯಕ್ಷ ಮಸೂದ್ ಮೊಹಮ್ಮದ್ ಮೆಟ್ರೋ ಧ್ವಜಾರೋಹಣ ನೆರವೇರಿಸಿದರು.

ಮುಖ್ಯ ಅತಿಥಿ ಚಿದ್ವಿಲಾಸ್ ಮಾತನಾಡಿ, ಸಂಘವನ್ನು ಯಾವ ರೀತಿ ಮುಂದುವರಿಸಿಕೊAಡು ಹೋಗಬೇಕೆಂದು ಕಿವಿಮಾತನ್ನು ಹೇಳಿ ಸಂಘಕ್ಕೆ ಮಾರ್ಗದರ್ಶನ ನೀಡಿದರು. ದಾಸಂಡ ರಮೇಶ್ ಮಾತನಾಡಿ, ಸಂಘದ ಐಕ್ಯತೆ ಬಗ್ಗೆ ತಿಳಿಹೇಳಿದರು.

ಸಬ್‌ಇನ್ಸ್ಪೆಕ್ಟರ್ ಮಾತನಾಡಿ, ಚಾಲನ ಪತ್ರ, ಸಮವಸ್ತçವನ್ನು ಕಡ್ಡಾಯವಾಗಿ ಹಾಕಿ ಶಿಸ್ತು ಪಾಲಿಸಬೇಕೆಂದು ತಿಳಿಸಿದರು. ಈ ಸಂದರ್ಭ ಉಪಾಧ್ಯಕ್ಷ ವಿ. ಸುಗು, ಕಾರ್ಯದರ್ಶಿ ಶಿಜಿ, ಗೌರವಾಧ್ಯಕ್ಷ ಪಿ.ಟಿ. ರಮೇಶ್, ಬುರಾಖ್ ರಫೀಕ್, ಸಂಷೀಶ್, ಮೊಹಮ್ಮದ್ ನಾಸೀರ್, ರವಿ, ಹಂಸ, ಮಹೇಶ್, ಪ್ರೀತಮ್, ಬೋಪಣ್ಣ ಹಾಗೂ ಲಾರಿ ಮಾಲೀಕರು ಮತ್ತು ಚಾಲಕರು ಪಾಲ್ಗೊಂಡಿದ್ದರು.ಕುಶಾಲನಗರ: ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ರಕ್ತದಾನ ಮಾಡಬಹುದು. ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ನೀಡಲು ದಾನಿಗಳು ಮುಂದೆ ಬರಬೇಕಿದೆ ಎಂದು ಕೊಡಗು ಜಿಲ್ಲಾ ರಕ್ತನಿಧಿ ವೈದ್ಯಾಧಿಕಾರಿ ಕರುಂಬಯ್ಯ ಅಭಿಪ್ರಾಯಪಟ್ಟರು.

೭೫ನೇ ವರ್ಷದ ಸ್ವಾತಂತ್ರ‍್ಯೋತ್ಸವ ನಿಮಿತ್ತ ಕುಶಾಲನಗರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ದಕ್ಷಿಣ ಕನ್ನಡ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿ, ರಕ್ತದಾನಕ್ಕೆ ಜಾತಿ ಭೇದವಿಲ್ಲ. ಸಂಘಟನೆ ನಡೆಸುತ್ತಿರುವ ಕಾರ್ಯ ಸ್ವಾಗತಾರ್ಹ ಎಂದರು.

ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಶಿಬಿರ ನಡೆಸಲಾಗುತ್ತಿದ್ದು, ಇನ್ನಷ್ಟು ಶಿಬಿರ ನಡೆಸಲು ಪಾಪ್ಯುಲರ್ ಫ್ರಂಟ್ ಜವಾಬ್ದಾರಿ ವಹಿಸಿಕೊಂಡಿದೆ ಎಂದು ಸಮಿತಿಯ ಸುಂಟಿಕೊಪ್ಪದ ಮುಖಂಡ ಉಸ್ಮಾನ್ ಅಭಿಪ್ರಾಯಪಟ್ಟರು.

ಸ್ಥಳೀಯರು ಸೇರಿದಂತೆ ೬೨ ಮಂದಿ ರಕ್ತದಾನ ಮಾಡಿದ್ದು, ಮುಂದಿನ ಶಿಬಿರಕ್ಕೆ ನೋಂದಾವಣಿ ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ಮೌಲಾನ ಅಬ್ಬು ರಹಮಾನ್ ಸಾಬ್ ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಪಿಎಫ್‌ಐ ವಲಯಾಧ್ಯಕ್ಷ ಹನೀಫ್, ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಜಾಮೀಯ ಮಸೀದಿ ಕಾರ್ಯದರ್ಶಿ ತನ್ವೀರ್ ಅಹಮದ್ ಸೇರಿದಂತೆ ಇತರ ಪದಾಧಿಕಾರಿಗಳು ಹಾಜರಿದ್ದರು.ಕಡಂಗ: ಕಡಂಗದ ಮನ್ಶ ಉಲ್ ಉಲೂಂ ಮದರಸ ವತಿಯಿಂದ ಸ್ವಾತಂತ್ರ‍್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಹನೀಫ ಮೌಲವಿ ಮಾಡಿದರು. ಸ್ವಾಗತವನ್ನು ಎಸ್.ವೈ.ಎಸ್. ಕಡಂಗ ಶಾಖೆಯ ಅಧ್ಯಕ್ಷ ಯೂಸುಫ್ ಮೌಲವಿ ಮಾಡಿದರು. ಧ್ವಜಾರೋಹಣವನ್ನು ಮುಹ್‌ಯಿದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷ ಇಬ್ರಾಹಿಂ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ಎಸ್.ಕೆ.ಎಸ್.ಎಸ್. ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಹೈಬ್ ಫೈಝಿ ಕೊಳಕೇರಿ ಮಾಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಅಬ್ದುಲ್ಲಾ ಹಾಜಿ, ಇರ್ಫಾನ್ ಫೈಝಿ, ಮಮ್ಮು, ಅಬ್ದುಲ್ಲಾ ಹಾಜಿ, ಕುಂಞ್ಞಬ್ದುಲ್ಲಾ, ಇಸ್ಹಾಕ್, ಇಕ್ಬಾಲ್, ಸಮದ್ ಎಸ್.ವೈ.ಎಸ್., ಎಸ್.ಕೆ.ಎಸ್.ಎಸ್. ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಜರಿದ್ದರು.ಕೊಟ್ಟಗೇರಿ: ಕೊಟ್ಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು. ಊರಿನ ಹಿರಿಯರಾದ ಅರಮಣಮಾಡ ಸತೀಶ್ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಊರಿಯ ಹಿರಿಯರಾದ ವಿವಿ. ರತ್ನ, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಎಸ್.ಈ. ಮಾಲಾ, ಶಿಕ್ಷಕ ಅರುಣ್‌ಕುಮಾರ್, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು, ಅಂಗನವಾಡಿಯವರು ಪಾಲ್ಗೊಂಡಿದ್ದರು.ಕಡAಗ: ಕಡಂಗ-ಕುAಜಿಲ ವಯಕೋಲ್ ಮಸ್ಜಿದುಲ್ ರಹ್ಮಾನ್ ಮತ್ತು ರೌಳತುಲ್ ಉಲೂಂ ಆಶ್ರಯದಲ್ಲಿ ೭೫ನೇ ವರ್ಷದ ಸ್ವಾತಂತ್ರ‍್ಯ ದಿನವನ್ನು ಆಚರಿಸಲಾಯಿತು.

ವಯಕೋಲ್ ಆಡಳಿತ ಮಂಡಳಿ ಅಧ್ಯಕ್ಷ ಉಸ್ಮಾನ್, ಕುಂಜಿಲ ಪೈನರಿ ಮುಸ್ಲಿಂ ಜಮಾಅತ್‌ನ ಸಲಹಾ ಸಮಿತಿ ಅಬು, ಕಾರ್ಯದರ್ಶಿ ಸಿರಾ ಹಾಗೂ ಷಂಶುದ್ದೀನ್ ಮತ್ತು ಅಂದ್ರು, ಮುಸ್ತಾಫಾ, ಮೊಯ್ದು, ಮಮ್ಮುಣಿ, ಔಕರ್ ಸಖಾಫಿ, ನಿಸು, ಹಾರಿಸ್, ರಫೀಕ್, ಕಲಿ, ಜಕರಿಯಾ ಹಾಗೂ ಊರಿನ ಹಿರಿಯರು ಮತ್ತು ಮದರಸ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಾಣತ್ಯಾಗ ಮಾಡಿದ ಸ್ವಾತಂತ್ರö್ಯ ಹೋರಾಟಗಾರರ ನೆನಪನ್ನು ಮೆಲುಕು ಹಾಕಿ ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.

ಶನಿವಾರಸAತೆ: ಕೊಡಗು ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕ ಹಾಗೂ ಇತರ ಕಾರ್ಮಿಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರಸಂತೆ ಚಿನ್ನಳ್ಳಿ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು.

ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಇ. ದೇವರಾಜ್ ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿಠಲ ನಾಗರಾಜ್ ವಹಿಸಿದ್ದರು. ಸಂಘದ ಉಪಾಧ್ಯಕ್ಷ ರವಿ, ಕಾರ್ಯದರ್ಶಿ ಬಿ.ಎಂ. ಲೋಕೇಶ್, ಖಜಾಂಚಿ ಸತೀಶ್, ಸಂಘದ ಇತರ ಪದಾಧಿಕಾರಿಗಳು, ಹೆಡ್‌ಕಾನ್ಸ್ಟೇಬಲ್ ಎಂ.ಎಸ್. ಬೋಪಣ್ಣ, ಕಾರ್ಮಿಕರು, ಇನ್ನಿತರರು ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಾಟಾ ಕಾಫಿ ಸಂಸ್ಥೆಯ ಕಾರ್ಮಿಕರು ಹಾಗೂ ಪನ್ಯ ತೋಟದ ಮಾಲೀಕರು ಹಾಗೂ ಕಾರ್ಮಿಕರು, ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಹಾಗೂ ಸದಸ್ಯರಾದ ಆಲಿಕುಟ್ಟಿ ಅವರುಗಳಿಂದ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು.ವೀರಾಜಪೇಟೆ: ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಾತಂತ್ರೊö್ಯÃತ್ಸವವನ್ನು ಆಚರಿಸ ಲಾಯಿತು. ಪ.ಪಂ. ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಧ್ವಜಾ ರೋಹಣದ ಸಂದರ್ಭ ಹಾಜರಿದ್ದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಪಾಲ್ಗೊಂಡಿದ್ದ ಪೌರಕಾರ್ಮಿಕರ ಸೇವೆಯನ್ನು ಅತಿಥಿಗಳು ಶ್ಲಾಘಿಸಿದರು.