ಸುಂಟಿಕೊಪ್ಪ, ಆ. ೨೬: ಇಲ್ಲಿಗೆ ಸಮೀಪದ ಬಾಳೆಕಾಡು ತಿರುವಿನಲ್ಲಿ ಕಂಟೈನರ್ ಮಗುಚಿ ಕ್ಲೀನರ್ ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ.

ಸುAಟಿಕೊಪ್ಪ ಸಮೀಪದ ಬಾಳೆಕಾಡು ರಾಷ್ಟಿçÃಯ ಹೆÀದ್ದಾರಿಯಲ್ಲಿ ಸಂಜೆ ೬.೩೦ ಗಂಟೆಗೆ ಬೆಂಗಳೂರಿ ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬೂಮರ್ ಚಾಕಲೇಟ್ ಸರಬರಾಜು ಮಾಡುತ್ತಿದ್ದ ಕಂಟೈನರ್ (ಎಂಎಚ್ ೪೬ ಬಿಇ ೯೪೨೦) ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿದ ಪರಿಣಾಮ ಲಾರಿಯಲ್ಲಿದ್ದ ಬಳ್ಳಾರಿಯ ಹೊಸಪೇಟೆಯ ಬೊಮ್ಮೆನಹಳ್ಳಿ ನಿವಾಸಿ ಸುಬ್ರಮಣಿ (೩೦) (ಕ್ಲೀನರ್) ಲಾರಿ ಅಡಿಗೆ ಸಿಲುಕಿ ಪ್ರಾಣ ಕಳೆÀದುಕೊಂಡಿದ್ದಾರೆ.

ಚಾಲಕ ಬೆಂಗಳೂರಿನ ಮುರಳಿಧರ್ ಪ್ರಾಣಾಪಾÀಯದಿಂದ ಪಾರಾಗಿದ್ದಾರೆ. ಲಾರಿ ಮಗುಚಿಕೊಂಡ ಪರಿಣಾಮ ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯುಂಟಾಯಿತು. ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಪುನಿತ್ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.