ಕೂಡಿಗೆ, ಆ. ೨೬: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಗಳ ಮೂಲಕ ಕಳೆದ ೩೦ದಿನಗಳಿಂದ ನಾಲೆಗಳ ಮುಖೇನ ನೀರನ್ನು ಹರಿಸಲಾಗಿತ್ತು. ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ಉಪ ಕಾಲುವೆಗಳ ಮೂಲಕ ಜಮೀನಿಗೆ ನೀರನ್ನು ಹರಿಸಿಕೊಂಡು, ಅದರ ಮೂಲಕ ಉಳುಮೆ ಮಾಡಿದ್ದು, ನಂತರದ ದಿನಗಳಲ್ಲಿ ನಾಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದರಿಂದ ಈ ವ್ಯಾಪ್ತಿಯ ಭತ್ತದ ನಾಟಿ ಕಾರ್ಯವು ಶೇ. ೯೦ ರಷ್ಟು ಮುಕ್ತಾಯಗೊಂಡಿದೆ.
ಹಾರAಗಿಯ ಅಚ್ಚುಕಟ್ಟು ಪ್ರದೇಶವಾದ ಕೊಡಗಿನ ಗಡಿ ಭಾಗವಾದ ಶಿರಂಗಾಲದವರೆಗೆ ಜಿಲ್ಲೆಯ ರೈತರು ಹಾರಂಗಿ ನಾಲೆಯ ನೀರನ್ನು ಉಪಯೋಗಿಸುವ ಮೂಲಕ ಹೈಬ್ರೀಡ್ ತಳಿಯ ಭತ್ತವನ್ನು ರೈತರು ನಾಟಿ ಮಾಡಿರುತ್ತಾರೆ
ಈ ಭಾಗದ ರೈತರು ನಾಟಿ ಮಾಡುವ ಸಂದರ್ಭದಲ್ಲಿ ತಮ್ಮ ಜಮೀನಿಗೆ ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡಿಕೊಂಡು ಜಮೀನಿನಲ್ಲಿ ನೀರಿನ ಮಟ್ಟವನ್ಮು ನೋಡಿ ಕೊಂಡು ಜಮೀನಿನ ಮಣ್ಣಿನ ಅನುಗುಣವಾಗಿ ಹೈಬ್ರೀಡ್ ತಳಿಯ ಭತ್ತದ ಸಸಿಗಳನ್ನು ನಾಟಿ ಮಾಡಲಾಗಿದೆ. ಕಳೆದ ೧೫ ದಿನಗಳಿಂದ ಮಳೆಯ ಪ್ರಮಾಣವು ಕಡಿಮೆಯಾಗಿದ್ದರಿಂದ ಹಾರಂಗಿ ನಾಲೆಯ ನೀರನ್ನು ಬಳಕೆ ಮಾಡಿಕೊಂಡು ನಾಟಿಯನ್ನು ಮಾಡಲಾಗಿದೆ.