ಮಡಿಕೇರಿ, ಆ. ೨೬: ೭೫೦ ಮಿಲಿ ಗ್ರಾಂ ಗಾಂಜಾ ಸಂಗ್ರಹಿಸಿದ್ದ ಆರೋಪಿಯನ್ನು ಸೋಮವಾರಪೇಟೆ ವಲಯ ಅಬಕಾರಿ ಇಲಾಖೆ ಬಂಧಿಸಿದೆ.

ತೊರೆನೂರು ಗ್ರಾಮದ ಟಿ.ಕೆ. ಕೃಷ್ಣಪ್ಪ ಬಂಧಿತ ಆರೋಪಿ. ಅಬಕಾರಿ ಇಲಾಖೆ ಸಿಬ್ಬಂದಿಗಳು ಗಸ್ತು ತಿರುಗುವ ಸಂದರ್ಭ ದೊರೆತ ಖಚಿತ ಮಾಹಿತಿಯ ಹಿನ್ನೆಲೆ ಆರೋಪಿ ಮನೆ ಮೇಲೆ ದಾಳಿ ನಡೆಸಿದಾಗ ೭೫೦ ಮಿಲಿ ಗ್ರಾಂ ಗಾಂಜಾ ಹಾಗೂ ಗಾಂಜಾ ಮಾರಾಟ ಮಾಡಲು ಉಪಯೋಗಿಸುತ್ತಿದ್ದ ಪ್ಲಾಸ್ಟಿಕ್ ಕವರುಗಳನ್ನು ವಶಪಡಿಸಿಕೊಳ್ಳಲಾಗಿವೆ.

ಕಾರ್ಯಾಚರಣೆಯಲ್ಲಿ ವಲಯ ಅಬಕಾರಿ ನಿರೀಕ್ಷಕಿ ಆರ್.ಎಂ. ಚೈತ್ರ, ಉಪವಿಭಾಗದ ನಿರೀಕ್ಷಕ ಎಂ.ಪಿ. ಸಂಪತ್ ಕುಮಾರ್, ಪೇದೆಗಳಾದ ವೀರೇಶ್ ಕುಮಾರ್, ಮಹಾಂತೇಶ್ ಸುಣಗಾರ, ಕರಿಯಪ್ಪ ಹಿರೇಕುರುಬರ, ಮಹಾದೇವ ಗಡ್ಡಿ, ಕಾಂತರಾಜು ಮತ್ತು ಹಿರೇಣ್ಣ ಮ್ಯಾತೇರಿ ಹಾಗೂ ವಾಹನ ಚಾಲಕರಾದ ಜಿತೇಂದ್ರ, ತ್ಯಾಗರಾಜು ಇದ್ದರು.