ಸಿದ್ದಾಪುರ, ಆ.೨೭: ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ವಿಶ್ವ ಉದ್ಯಮಶೀಲಕ ದಿನಾಚರಣೆಯ ಅಂಗವಾಗಿ ನೆಲ್ಯಹುದಿಕೇರಿಯ ಉದ್ಯಮಿ ಮುದ್ದು ಮಹಾದೇವ ೨೦೨೦-೨೧ನೇ ಸಾಲಿನ ವರ್ಷದ ಯಶಸ್ವಿ ಉದ್ಯಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಧಾರವಾಡದ ಕರ್ನಾಟಕ ಉದ್ಯಮಶೀಲಾಭಿವೃದ್ದಿ ಕೇಂದ್ರದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದ್ದು ಮಹಾದೇವ ಅವರು ಪ್ರಾರಂಭಿಸಿದ ಪರಿಸರ ಸ್ನೇಹಿ ಉತ್ಪನ್ನ ಘಟಕ ಪ್ರಶಸ್ತಿಗೆ ಆಯ್ಕೆಯಾಗಿದ್ದು ಕೌಶಲ್ಯಾಭಿವೃದ್ದಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಪ್ರಶಸ್ತಿ ಪ್ರಧಾನಮಾಡಿದರು.ಅಲ್ಲದೆ ಮುದ್ದು ಮಹದೇವ ವರ್ಷದ ಯಶಸ್ವಿ ಉದ್ಯಮಿ ಪ್ರಶಸ್ತಿಗೆ ಕೊಡಗಿನಿಂದ ಆಯ್ಕೆಯಾದ ಏಕೈಕ ಉದ್ಯಮಿಯಾಗಿರುವುದು ವಿಶೇಷವಾಗಿದೆ.