ಮಡಿಕೇರಿ, ಆ.೨೭: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ನೃತ್ಯ, ಸುಗಮ ಸಂಗಿತ, ಕಥಾ ಕೀರ್ತನ ಮತ್ತು ಗಮಕ ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ೧೬ ರಿಂದ ೨೪ ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳಿಂದ ೨೦೨೧- ೨೨ ನೇ ಸಾಲಿನ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.೧೦ ಸಾವಿರಗಳನ್ನು ಶಿಷ್ಯವೇತನವಾಗಿ ನೀಡಲಾಗುವುದು. ಒಬ್ಬ ಅಭ್ಯರ್ಥಿ ಒಮ್ಮೆ ಮಾತ್ರ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿಯ ಜೊತೆ ಇತ್ತೀಚಿನ ಪಠ್ಯಕ್ರಮವನ್ನು ಸಹ ನೀಡಲಾಗಿದೆ.

ಅರ್ಜಿಯನ್ನು ಅಕಾಡೆಮಿಯ ಕಚೇರಿ ವೇಳೆಯಲ್ಲಿ ಬೆಳಗ್ಗೆ ೧೦ ಗಂಟೆ ಯಿಂದ ಸಂಜೆ ೫.೩೦ ಗಂಟೆಯವರೆಗೆ ಉಚಿತವಾಗಿ ಪಡೆಯಬಹುದು. ಅಕಾಡೆಮಿ ಅಂರ್ತಜಾಲತಾಣ hಣಣಠಿs://sಚಿಟಿgeeಣಚಿಟಿಡಿiಣಥಿಚಿಚಿಛಿಚಿಜemಥಿ. ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಸಲ್ಲಿಸಬಹುದು. ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಹೆಸರಿನ ಪೇಸ್ ಬುಕ್ ಪುಟದಲ್ಲೂ ಅರ್ಜಿಗಳನ್ನು ಪಡೆಯಬಹುದು. ಬೇರೆ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಆಯಾಯ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಅರ್ಜಿ ಪಡೆಯಬಹುದು. ಅಂಚೆ ಮೂಲಕ ಅರ್ಜಿ ಮತ್ತು ಪಠ್ಯಕ್ರಮ ಪಡೆಯಲಿಚ್ಚಿಸುವವರು ರೂ.೧೦ ಸ್ಟಾಂಪ್ ಹಚ್ಚಿದ ಸ್ವವಿಳಾಸವುಳ್ಳ ಲಕೋಟೆಯನ್ನು ರಿಜಿಸ್ಟಾçರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ೨ನೇ ಮಹಡಿ, ಜೆ .ಸಿ.ರಸ್ತೆ, ಬೆಂಗಳೂರು-೫೬೦೦೦೨ ಇಲ್ಲಿಗೆ ಕಳುಹಿಸಬೇಕು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ೧೭ ಕೊನೆಯ ದಿನವಾಗಿದೆ. ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟಾçರ್ ಅವರು ತಿಳಿಸಿದ್ದಾರೆ.