ಕೂಡಿಗೆ, ಆ. ೨೭: ಹಾಸನ ಹಾಲು ಒಕ್ಕೂಟದ ವತಿಯಿಂದ ಕುಶಾಲನಗರ ಮತ್ತು ಕೂಡಿಗೆ ಹಾಲಿನ ಮಾರಾಟ ಕೇಂದ್ರಗಳಲ್ಲಿ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮಕ್ಕೆ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಈಗಾಗಲೇ ಹಾಸನ ಹಾಲು ಒಕ್ಕೂಟದಿಂದ ವಿವಿಧ ಬಗೆಯ ಸಿಹಿ ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತಿವೆ. ಅದರಂತೆ ಗ್ರಾಹಕರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಸಿಹಿ ಉತ್ಸವವು ತಾ. ೨೦ ರಿಂದ ೧೫ ದಿನಗಳವರೆಗೆ ನಡೆಯಲಿದ್ದು, ಇದರ ಅಂಗವಾಗಿ ಎಲ್ಲಾ ಉತ್ಪನ್ನದ ವಸ್ತುಗಳಿಗೆ ಶೇಕಡಾ ೧೦ ರಷ್ಟು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಾಸನ ಹಾಲು ಒಕ್ಕೂಟದ ಹಾಸನ ಡೈರಿಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಪ್ರಿಯಾ ರಂಜನ್, ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಕೂಡಿಗೆ ಡೈರಿ ಮಾರಾಟ ವಿಭಾಗದ ಉಪ ವ್ಯವಸ್ಥಾಪಕ ಡಿ.ಎನ್. ಮಲ್ಲೇಶ್, ಕೂಡಿಗೆ ಡೈರಿ ಮಾರುಕಟ್ಟೆ ಯ ಅಧೀಕ್ಷಕ ಅಜ್ಜಿಕುಟೀರ ಸೋಮಯ್ಯ ಸೇರಿದಂತೆ ಹಾಲು ಮಾರಾಟ ಮಳಿಗೆ ಗಳ ಟೆಂಡರ್‌ದಾರ ಚಂದ್ರಕಾAತ್ ಸೇರಿದಂತೆ ಮತ್ತಿತರರು ಇದ್ದರು.