ಕುಶಾಲನಗರ, ಆ. ೨೭: ಒಳನಾಡು ಮೀನು ಉತ್ಪಾದನೆ ಮಿತಿ ಹೆಚ್ಚಿಸುವ ಉದ್ದೇಶದಿಂದ ಮೀನುಮರಿ ಪಾಲನೆ ಕಾರ್ಯಕ್ರಮದಡಿ ಕೊಡಗು ಜಿಲ್ಲೆಯಲ್ಲಿ ನೂತನ ಮೀನು ಕೃಷಿಕರಿಗೆ ಇಪ್ಪತ್ತೆöÊದು ಸಾವಿರ ಸಹಾಯಧನ ನೀಡಲು ಮೀನುಗಾರಿಕೆ ಇಲಾಖೆ ನೂತನ ಕಾರ್ಯಕ್ರಮ ಘೋಷಿಸಿದೆ ಎಂದು ಮೀನುಗಾರಿಕೆ ಮತ್ತು ಒಳನಾಡು ಬಂದರು ಸಚಿವ ಅಂಗಾರ ತಿಳಿಸಿದ್ದಾರೆ.
ಅವರು ಹಾರಂಗಿ ಮೀನು ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ನೂತನವಾಗಿ ಸಾವಿರ ಚದರ ಮೀಟರ್ ಪಾಲನಾ ಸಾಮರ್ಥ್ಯದಲ್ಲಿ ಮೀನುಮರಿ ಪಾಲನೆ ಮಾಡಲು ಇಚ್ಛಿಸುವ ಮೀನು ಕೃಷಿಕರಿಗೆ ಈ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. ಸಮುದ್ರದ ತಾಜಾ ಮೀನನ್ನು ಜಿಲ್ಲೆಯ ಮೀನುಪ್ರಿಯರಿಗೆ ಒದಗಿಸಲು ಮಂಗಳೂರಿನಿAದ ಸುಳ್ಯ ಸಂಪಾಜೆ ಮೂಲಕ ಮಡಿಕೇರಿ, ವೀರಾಜಪೇಟೆ, ಕುಶಾಲನಗರ ಪಟ್ಟಣಗಳಿಗೆ ಯೋಗ್ಯ ದರದಲ್ಲಿ ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ ಎಪ್ಪತ್ತು ಲಕ್ಷದಷ್ಟು ಮೀನು ಕೃಷಿ ಮಾಡುವ ಗುರಿ ಹೊಂದಲಾಗಿದೆ. ಮೀನು ಕೃಷಿ ಸಂಬAಧ ಕೇಂದ್ರದ ಆತ್ಮ ನಿರ್ಭರ್ ಯೋಜನೆಯಡಿಯಲ್ಲಿ ಕೃಷಿಕರಿಗೆ ಅನುದಾನ ನೀಡಲಾಗುವುದು. ಒಳನಾಡು ಬಂದರು ವ್ಯಾಪ್ತಿಗೆ ಬರುವ ಕೊಡಗು ಜಿಲ್ಲೆಗೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗಿದೆ, ಸ್ವಂತ ಕೆರೆಯಿರುವ ರೈತರು ಉಪಬೆಳೆಯ ರೀತಿಯಲ್ಲಿ ಯೋಜನೆಯ ಸದುಪಯೋಗ ಪಡೆದು ಕೊಳ್ಳಬಹುದು ಎಂದರು.
ಮಹಶೀರ್ ಮೀನುಗಳ ರಕ್ಷಣೆ
ಇಲಾಖೆಯಿಂದ ಹಾರಂಗಿ ನದಿಗೆ ಬಿಡಲಾಗಿರುವ ಮಹಶೀರ್ ಮೀನುಗಳ ರಕ್ಷಣೆಗೆ ಕ್ರಮ ಕೈಗೊಳಲಾಗುವುದು. ಅಕ್ರಮ ಬೇಟೆ ತಡೆಯುವ ನಿಟ್ಟಿನಲ್ಲಿ ನದಿ ತಟದ ನಿರ್ವಹಣೆ ಕಾಮಗಾರಿ ನಡೆಸಲಾಗುವುದು. ಜತೆಗೆ ಮೀನು ಕೃಷಿ ಮಾಡುವ ರೈತರಿಗೆ ಸಹಾಯವಾಣಿ ತೆರೆಯಲಾಗಿದೆ.
ಅಳಿವಿನ ಅಂಚಿನಲ್ಲಿದ್ದ ಮಹಶೀರ್ ಮೀನುಮರಿಗಳ ರಾಜ್ಯದ ಏಕೈಕ ಉತ್ಪಾದನಾ ಕೇಂದ್ರ ಜಿಲ್ಲೆಯ ಹಾರಂಗಿಯಲ್ಲಿದ್ದು ಅನೇಕ ವರ್ಷಗಳಿಂದ ಕೇಂದ್ರದಲ್ಲಿ ಉತ್ಪಾದನೆ ಮಾಡಲಾದ ಮಹಶೀರ್ ಮರಿಗಳನ್ನು ನದಿ ಭಾಗಗಳಲ್ಲಿ ಬಿತ್ತನೆ ಮಾಡಲಾಗುತ್ತಿದೆ. ನೆರೆಯ ರಾಜ್ಯಗಳಿಗೆ ಹಾರಂಗಿ ಕೇಂದ್ರದಿAದ ಮರಿಗಳನ್ನು ಸರಬರಾಜು ಮಾಡಲಾಗುತ್ತಿದೆ ಹಾಗೂ ಖಾಸಗಿ ಸಂಸ್ಥೆ ಯೊಂದರ ಮೂಲಕ ಅಳಿವಿನ ಅಂಚಿನಲ್ಲಿರುವ ಸ್ಥಳಿಯ ಮಹಶೀರ್ ಮೀನು ತಳಿಯನ್ನು ಉಳಿಸಿ ಬೆಳೆಸುವ ಕೆಲಸವಾಗುತ್ತಿದೆ ಎಂದರು. ಒಳನಾಡು ಮೀನು ಕೃಷಿಕರಿಗಿಂತ ಕರಾವಳಿ ಮೀನುಗಾರರಿಗೆ ಸಾಕಷ್ಟು ಸಮಸ್ಯೆಗಳಿವೆ. ಕೊಡಗಿನ ಒಳನಾಡು ಪ್ರದೇಶದ ರೈತರಿಗೆ ಮೀನು ಕೃಷಿಗೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.
ಪ್ರಧಾನಮಂತ್ರಿ ಮತ್ಸö್ಯ ಸಂಪದ ಯೋಜನೆಯಡಿ ಇಲಾಖೆಯ ಒಟ್ಟು ಯೋಜನೆಯ ಮೊತ್ತ ಎಂಬತ್ತು ಕೋಟಿ ಭರಿಸಲಾಗಿದ್ದು, ಈ ಸಾಲಿಗೆ ಇನ್ನೂರ ಮೂವತ್ತು ಕೋಟಿಯ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಮಾಹಿತಿ ಒದಗಿಸಿದರು. ಮೀನುಗಾರಿಕಾ ಇಲಾಖೆ ಮೂಲಕ ಸ್ವ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುವದು. ಮೀನು ಕೃಷಿಕರಿಗೆ ಇಲಾಖೆ ಮೂಲಕ ಸಾಕಾಣಿಕೆ ಮತ್ತು ಮಾರಾಟ ವ್ಯವಸ್ಥೆ ಹಾಗೂ ಇರುವ ಸಮಸ್ಯೆಗಳ ಬಗ್ಗೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೀನುಗಾರಿಕಾ ಇಲಾಖೆಗೆ ರಾಜ್ಯ ಸರ್ಕಾರ ತಮ್ಮ ಬೇಡಿಕೆ ಹಿನ್ನೆಲೆಯಲ್ಲಿ ಇಪ್ಪತ್ತು ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಸಾಧ್ಯವಾಗಲಿದೆ ಎಂದರು. ಇದೇ ಸಂದರ್ಭ ಸಚಿವರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚುರಂಜನ್ ಅವರು ಒಡಿಕತ್ತಿ ನೀಡುವ ಮೂಲಕ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಇಲಾಖೆಯ ನಿರ್ದೇಶಕ ರಾಮಾಚಾರ್ಯ, ಜಂಟಿ ನಿರ್ದೇಶಕರಾದ ನಾರಾಯಣ, ಉಪ ನಿರ್ದೇಶಕರಾದ ಗಿರೀಶ್ ಓಂಕಾರ್, ಹಿರಿಯ ಸಹಾಯಕ ನಿರ್ದೇಶಕರಾದ ದರ್ಶನ್, ಸಹಾಯಕ ನಿರ್ದೇಶಕರುಗಳಾದ ಸಚಿನ್ ಎಸ್.ಎಂ. ಸ್ನೇಹ ಮತ್ತು ಸಿ.ಎಸ್. ಸಚಿನ್ ಇದ್ದರು.