ಕರಿಕೆ, ಆ. ೨೭: ಜಿಲ್ಲೆಯ ಗಡಿ ಕರಿಕೆ ಚೆಂಬೇರಿ ಚೆಕ್ ಪೋಸ್ಟ್ಗೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಭೇಟಿ ನೀಡಿ ಕೋವಿಡ್ ತಪಾಸಣೆಯ ಬಗ್ಗೆ ಪರಿಶೀಲನೆ ಮಾಡಿದರು. ಜಿಲ್ಲೆಯೊಳಗೆ ಪ್ರವೇಶಿಸುವ ಅಂತರ್ ರಾಜ್ಯದವರ ತಪಾಸಣೆಯ ಬಗ್ಗೆ ಕರ್ತವ್ಯದಲ್ಲಿದ್ದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಲ್ಲಿ ಮಾಹಿತಿ ಪಡೆದುಕೊಂಡರು. ಕೋವಿಡ್ ಮೂರನೆಯ ಅಲೆಯ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಉಪ ನಿರೀಕ್ಷಕ ಸದಾಶಿವಯ್ಯ ಹಾಜರಿದ್ದರು.